ಕರ್ನಾಟಕ

karnataka

ETV Bharat / entertainment

'ಪುಷ್ಪ 3' ಕನ್ಫರ್ಮ್​​: ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ ಜೊತೆ ವಿಜಯ್​ ದೇವರಕೊಂಡ? - PUSHPA 3

'ಪುಷ್ಪ 3' ಸಿನಿಮಾದಲ್ಲಿ ಸೌತ್​ ಸೂಪರ್ ಸ್ಟಾರ್​ ವಿಜಯ್​ ದೇವರಕೊಂಡ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

Pushpa 3 Confirmed
ಪುಷ್ಪ 3 ಕನ್ಫರ್ಮ್ (Film Poster/ETV Bharat)

By ETV Bharat Entertainment Team

Published : Dec 3, 2024, 6:12 PM IST

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಪುಷ್ಪ 1: ದಿ ರೈಸ್​​​' ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹೊತ್ತಲ್ಲಿ 'ಪುಷ್ಪ 3' (Pushpa 3: The Rampage) ಬರಲಿದೆ ಎಂಬ ವಿಷಯ ಹೊರಬಿದ್ದಿದ್ದು, ಪುಷ್ಪ ಸೀಕ್ವೆಲ್​​ ಸುತ್ತಲಿನ ಉತ್ಸಾಹ ದುಪ್ಪಟ್ಟಾಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್​ ಫಾಸಿಲ್​​ ಪ್ರಮುಖ ಪಾತ್ರ ನಿರ್ವಹಿಸಿರುವ 'ಪುಷ್ಪ 2: ದಿ ರೂಲ್' ಡಿಸೆಂಬರ್ 5ರಂದು ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಆದರೆ ಅಭಿಮಾನಿಗಳು ಈಗಲೇ ಪುಷ್ಪನ ಮುಂದಿನ ಅಧ್ಯಾಯದ ಬಗ್ಗೆ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಡಿಸೆಂಬರ್ 3, ಇಂದು ಆಸ್ಕರ್ ಪ್ರಶಸ್ತಿ ವಿಜೇತ ಸೌಂಡ್ ಡಿಸೈನರ್ ರೆಸುಲ್ ಪೂಕುಟ್ಟಿ ( Resul Pookutty) ಚಿತ್ರದ ಶೀರ್ಷಿಕೆಯನ್ನೊಳಗೊಂಡ ತಂಡ ಫೋಟೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಹಿನ್ನೆಲೆ, ಸಿನಿಮಾ ಸಖತ್​ ಸದ್ದು ಮಾಡುತ್ತಿದೆ.

'ಪುಷ್ಪ 3: ದಿ ರಾಂಪೇಜ್' ಅನ್ನು ಪ್ರದರ್ಶಿಸುವ ಸ್ಕ್ರೀನ್​ ಎದುರು ಸಿಬ್ಬಂದಿಯನ್ನೊಳಗೊಂಡಿರುವ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಶರವೇಗದಲ್ಲಿ ವೈರಲ್ ಆಯಿತು. ಶೀರ್ಷಿಕೆ ಕಂಡ ಹಿನ್ನೆಲೆಯಲ್ಲಿ ಪುಷ್ಪ ಫ್ರ್ಯಾಂಚೈಸ್‌ನ ಮುಂದಿನ ಭಾಗಗಳ ಬಗೆಗಿನ ಊಹಾಪೋಹಗಳು ಉಲ್ಭಣಗೊಂಡಿವೆ. ಅಲ್ಲು ಅರ್ಜುನ್‌ ತಮ್ಮ ಐಕಾನಿಕ್​​ ಪಾತ್ರ ಪುಷ್ಪರಾಜ್​ನೊಂದಿಗೆ ಮತ್ತೊಂದು ಆ್ಯಕ್ಷನ್-ಪ್ಯಾಕ್ಡ್ ಜರ್ನಿಗಾಗಿ ಮರಳಲು ಸಜ್ಜಾಗುತ್ತಿದ್ದು, ಈ ಹೊಸ ಪೋಸ್ಟ್​ ಸಾಕಷ್ಟು ಸದ್ದು ಮಾಡುತ್ತಿದೆ.​ ಪುಷ್ಪ ವಿಶ್ವಕ್ಕೆ ವಿಜಯ್ ದೇವರಕೊಂಡ ಅವರ ಸಂಭಾವ್ಯ ಸೇರ್ಪಡೆ ಬಗ್ಗೆ ಅಭಿಮಾನಿಗಳು ಸರ್​​ಪ್ರೈಸ್​ ಆಗಿದ್ದಾರೆ.

ಇದನ್ನೂ ಓದಿ:ಐಶ್ವರ್ಯಾಗೆ ಹಾಗಲಕಾಯಿ ತಿನ್ನೋ ಶಿಕ್ಷೆ ಕೊಟ್ಟ ಶಿಶಿರ್​: ಸ್ನೇಹಿತೆಯ ಪರಿಸ್ಥಿತಿ ಕಂಡು ಕಣ್ಣೀರು

ನಿರ್ದೇಶಕ ಸುಕುಮಾರ್ ಅವರ ಜನ್ಮದಿನದಂದು ಶುಭ ಹಾರೈಸಿದ್ದ ದೇವರಕೊಂಡ ಅವರು 'ಪುಷ್ಪ 3: ದಿ ರಾಂಪೇಜ್' ಶೀರ್ಷಿಕೆಯ ಬಗ್ಗೆ ಸುಳಿವು ನೀಡಿದ್ದರು. ಅಭಿಮಾನಿಗಳು 2022ರ X ಪೋಸ್ಟ್ ಅನ್ನು ಹುಡುಕಿ ಇದೀಗ ವೈರಲ್​​ ಮಾಡಿದ ಹಿನ್ನೆಲೆಯಲ್ಲಿ ಊಹಾಪೋಹಗಳು ಜೋರಾಗಿವೆ. "2021 - ದಿ ರೈಸ್. 2022 - ದಿ ರೂಲ್. 2023 - ದಿ ರಾಂಪೇಜ್" ಎಂದು ಆ ಪೋಸ್ಟ್​​ನಲ್ಲಿ ಬರೆಯಲಾಗಿದ್ದು, ಮೂರನೇ ಭಾಗದಲ್ಲಿ ವಿಜಯ್​ ದೇವರಕೊಂಡ ಕಾಣಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಮಾತುಗಳಾಗುತ್ತಿವೆ.

ಇದನ್ನೂ ಓದಿ:'ಛತ್ರಪತಿ ಶಿವಾಜಿ ಮಹಾರಾಜ'​​ರಾಗಿ ಡಿವೈನ್​ ಸ್ಟಾರ್​​: ರಿಷಬ್​ ಶೆಟ್ಟಿ ಹೊಸ ಸಿನಿಮಾದ ರಿಲೀಸ್​ ಡೇಟ್​ ರಿವೀಲ್​

ಅಲ್ಲದೇ, ಪುಷ್ಪ 2 ಬಿಡುಗಡೆಗೂ ಮುನ್ನ ವಿಜಯ್​ ದೇವರಕೊಂಡ ಇತ್ತೀಚೆಗೆ ಅಲ್ಲು ಅರ್ಜುನ್‌ ಅವರಿಗೆ ತಮ್ಮ ಕ್ಲಾಥಿಂಗ್​​ ಲೈನ್​ 'Rwdy' ಯಿಂದ ಎರಡು ಕಸ್ಟಮೈಸ್ಡ್​​ ಪುಷ್ಪ ಟೀ ಶರ್ಟ್‌ಗಳನ್ನು ಕಳುಹಿಸಿದ್ದರು. ಇಬ್ಬರು ಸ್ಟಾರ್​ ನಟರ ನಡುವಿನ ಈ ಒಡನಾಟ ಮುಂದಿನ ಭಾಗದಲ್ಲಿ ದೇವರಕೊಂಡ ಮಹತ್ವದ ಪಾತ್ರ ವಹಿಸಬಹುದೆಂಬ ಊಹಾಪೋಹವನ್ನು ಮತ್ತಷ್ಟು ಹೆಚ್ಚಿಸಿದೆ. ಯಾವುದೇ ಅಧಿಕೃತ ದೃಢೀಕರಣ ಹೊರಬಿದ್ದಿಲ್ಲವಾದರೂ, ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚುತ್ತಿರುವ ಸದ್ದು ಮತ್ತು ದೇವರಕೊಂಡ ಅವರ ರಹಸ್ಯ ಪೋಸ್ಟ್ ಪುಷ್ಪಾ 3ರಲ್ಲಿ ಅವರ ಸಂಭವನೀಯ ಪಾತ್ರದ ಬಗ್ಗೆ ಸುಳಿವು ನೀಡಿದೆ.

ABOUT THE AUTHOR

...view details