ಹೈದರಾಬಾದ್: ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ: ದಿ ರೂಲ್' ಚಿತ್ರಕ್ಕೆ ಈಗಾಗಲೇ ಅಭಿಮಾನಿಗಳು ಕಾದು ಕುಳಿತಿದ್ದಾರೆ. 2021ರಲ್ಲಿ ಬಿಡುಗಡೆಯಾದ 'ಪುಷ್ಪ: ರೈಸ್' ಗಿಂತ ಹೆಚ್ಚಿನ ಯಶಸ್ಸನ್ನು ಅದರ ಮುಂದಿನ ಸೀಕ್ವೆಲ್ ಕಾಣಲಿದೆ ಎಂಬ ಲೆಕ್ಕಾಚಾರ ನಡೆಸಲಾಗಿದೆ. ಇನ್ನು ಈ ‘ಪುಷ್ಪ 2: ದಿ ರೂಲ್‘ ಇದೆ ಆಗಸ್ಟ್ನಲ್ಲಿ ಅಂತಿಮ ಹಂತದ ಶೂಟಿಂಗ್ ಅನ್ನು ಮುಗಿಸಲಿದ್ದು, ನಂತರ ಪೊಸ್ಟ್ ಪ್ರೊಡಕ್ಷನ್ ಕೆಲಸ ನಡೆಯಲಿದ್ದು, ಆಗಸ್ಟ್ನಲ್ಲಿ ಚಿತ್ರ ತೆರೆ ಕಾಣಲಿದೆ. ಸುಮಕರ್ ನಿರ್ದೇಶನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಕುಬ ಬ್ರೋಜೆಕ್ ಸಿನಿಮಾಟೋಗ್ರಫಿ ಇದೆ. ಮೊದಲ ಭಾಗದಲ್ಲಿರುವ ಪಾತ್ರ ವರ್ಗ ಎರಡನೇ ಭಾಗದಲ್ಲೂ ಮುಂದುವರೆಯಲಿದೆ.
'ಪುಷ್ಪ 2: ದಿ ರೂಲ್' ಚಿತ್ರದ ಕೆಲವು ದೃಶ್ಯವನ್ನು ಛಾಯಗ್ರಾಹಕರಾಗಿರುವ ಕುಬಾ ಬ್ರೋಜೆಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರ ಇದೀಗ ಪ್ರೇಕ್ಷಕರ ಕಾತರತೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಅಭಿಮಾನಿಗಳು ಚಿತ್ರದ ಯಾವ ದೃಶ್ಯಗಳು ಇದೀಗ ಶೂಟ್ ಆಗುತ್ತಿದೆ ಎಂಬ ಪ್ರಶ್ನೆಗೆ ಅವರು ಈ ವಿಡಿಯೋ ಮೂಲಕ ಉತ್ತರಿಸಿದ್ದಾರೆ. ಇದರಲ್ಲಿ ನೀರಿನಾಳದಲ್ಲಿನ ದೃಶ್ಯಗಳ ಶೂಟಿಂಗ್ ನಡೆಯುತ್ತಿರುವುದನ್ನು ಕಾಣಬಹುದು. ಇದರ ಜೊತೆಗೆ ಪ್ರೇಕ್ಷಕರ ಕಾತರಕ್ಕೆ ಮತ್ತಷ್ಟು ಉತ್ಸಾಹ ಹೆಚ್ಚಿಸಲು ಅವರು ಪುಷ್ಪ 2 ಸೆಟ್ ಫೋಟೋ ಹಂಚಿಕೊಂಡಿದ್ದಾರೆ.
ಅಲ್ಲು ಅರ್ಜುನ್ ಹುಟ್ಟು ಹಬ್ಬದ ಹಿನ್ನೆಲೆ ಏಪ್ರಿಲ್ 8ರಂದು 'ಪುಷ್ಪ 2' ಚಿತ್ರ ತಂಡ ಟೀಸರ್ ಮೂಲಕ ತಮ್ಮ ಚಿತ್ರದ ನಟನಿಗೆ ವಿಶೇಷವಾಗಿ ಶುಭಾಶಯ ತಿಳಿಸಿದ್ದರು. ಈ ಪ್ರೊಮೋಷನ್ ವಿಡಿಯೋದಲ್ಲಿ ಚಿತ್ರದಲ್ಲಿ ನಡೆಯುವ ಜಾತ್ರೆ ಸಮಾರಂಭದ ದೃಶ್ಯದ ಕುರಿತು ತಿಳಿಸಲಾಗಿತ್ತು. ಈ ದೃಶ್ಯವೂ ತೆಲಂಗಾಣದಲ್ಲಿ ಹಿಂದೂ ಬುಡಕಟ್ಟು ಜನರು ಆಚರಿಸುವ ಹಬ್ಬದ ಗೌರವದ ಆಚರಣೆಯಲ್ಲಿ ನಟ ಅಲ್ಲು ಅರ್ಜುನ್ ದೇವತೆ ವೇಷ ತೊಟ್ಟಿರುವುದನ್ನು ಕಾಣಬಹುದಾಗಿದೆ. ದೇವತೆ ವೇಷದಲ್ಲೇ ಹೊಡೆದಾಡುವ ಈ ದೃಶ್ಯ ಅಭಿಮಾನಿಗಳಿಗೆ ಹಬ್ಬದೂಟ ನೀಡಿದ್ದು ಸುಳ್ಳಲ್ಲ.