ಕರ್ನಾಟಕ

karnataka

ETV Bharat / entertainment

ಸದ್ಯಕ್ಕೆ ಪುಷ್ಪ 2 ಬಿಡುಗಡೆ ಇಲ್ಲ: ಅಲ್ಲು ಅರ್ಜುನ್ ಅಭಿಮಾನಿಗಳೆಗೆ ನಿರಾಸೆ - Pushpa 2 Release Postponed - PUSHPA 2 RELEASE POSTPONED

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ-2 ಬಿಡುಗಡೆ ಮುಂದಕ್ಕೆ ಹೋಗಿದೆ. ಈ ಬಗ್ಗೆ ನಟನ ಸಂಬಂಧಿಯೊಬ್ಬರು ಟ್ಬೀಟ್​ ಮಾಡಿಕೊಂಡಿದ್ದಾರೆ.

Pushpa 2 Release Postponed, Allu Arjun's Team Member Confirms, Makers to Announce New Date
ಅಲ್ಲು ಅರ್ಜುನ್ (Film poster)

By ETV Bharat Karnataka Team

Published : Jun 17, 2024, 1:07 PM IST

ಹೈದರಾಬಾದ್: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ-2 ಬಿಡುಗಡೆ ಮುಂದಕ್ಕೆ ಹೋಗಿದೆ. ಬರುವ ಆಗಷ್ಟ್​ 15ಕ್ಕೆ ಬಿಡುಗಡೆಯಾಗಬೇಕಿದ್ದ ಪುಷ್ಪ-ದಿ ರೂಲ್(ಪುಷ್ಪ 2) ಕಾರಣಾಂತರಗಳಿಂದ ಮುಂದೂಡಲಾಗಿದೆ. ಬಿಡುಗಡೆಯ ದಿನಾಂಕವನ್ನು ಈಗಾಗಲೇ ಚಿತ್ರತಂಡ ಘೋಷಿಸಿತ್ತು. ಆದರೆ, ಘೋಷಣೆಯಾದ ದಿನವೇ ಚಿತ್ರ ಬಿಡುಗಡೆಯಾಗುವುದು ಸಂದೇಹ. ಹೊಸ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುತ್ತದೆ ಎಂದು ಚಿತ್ರ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಸಿನಿಮಾದ ಕೆಲಸಗಳು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಇತ್ತೀಚಿಗೆ ಅದರ ಅನಿರ್ದಿಷ್ಟ ಮುಂದೂಡಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಲವು ವದಂತಿಗಳು ಹರಿದಾಡುತ್ತಿದ್ದವು. ಅಂದುಕೊಂಡ ದಿನದಂದು ಚಿತ್ರದ ಬಿಡುಗಡೆ ಅಸಾಧ್ಯ ಎಂಬ ವರದಿಗಳು ಬಂದಿದ್ದವು. ಆದರೆ, ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಇದೀಗ ಪುಷ್ಪಾ 2 ಬಿಡುಗಡೆ ವಿಳಂಬದ ಕುರಿತು ಬಹುತೇಕ ದೃಢಪಡಿಸಲಾಗಿದೆ. ಚಿತ್ರವು ನಿರೀಕ್ಷೆಯಂತೆ ಚಿತ್ರಮಂದಿರಗಳಲ್ಲಿ ಬರುವುದಿಲ್ಲ ಎಂದು ಅಲ್ಲು ಅರ್ಜುನ್ ಅವರ ನಿಕಟವರ್ತಿ ಶರತ್ ಚಂದ್ರ ನಾಯ್ಡು ಎಂಬುವರು ಟ್ವೀಟ್​ ಮೂಲಕ ಬಹಿರಂಗಪಡಿಸಿದ್ದಾರೆ. ನಿರೀಕ್ಷೆಯಂತೆ ಇದು ಅಲ್ಲು ಅರ್ಜುನ್ ಅಬರ ಅಭಿಮಾನಿಗಳಿಗೆ ನಿರಾಸೆ ತರಿಸಿದೆ.

ತೆಲುಗು, ಹಿಂದಿ, ಕನ್ನಡ, ತಮಿಳು, ಮಲಯಾಳಂ, ಭೋಜಪುರಿ ಭಾಷೆಗಳಲ್ಲಿ ‘ಪುಷ್ಪ 2’ ಆಗಸ್ಟ್​ 15ರಂದು ಬಿಡುಗಡೆ ಆಗಲಿದೆ ಎಂದು ಈ ಹಿಂದೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿದ್ದರಿಂದ ಸಿನಿ ರಸಿಕರಲ್ಲಿ ಬೇಸರ ತರಿಸಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮ ಬೇಸರ ಹೊರಹಾಕುತ್ತಿದ್ದಾರೆ. ಅಲ್ಲದೇ ಹೊಸ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸುವಂತೆ ಮನವಿ ಮಾಡುತ್ತಿದ್ದಾರೆ. ಚಿತ್ರದ ನಿರ್ಮಾಪಕರು ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ, 'ಪುಷ್ಪ 2' ದೀಪಾವಳಿಗೆ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಫಹಾದ್ ಫಾಸಿಲ್, ಅನಸೂಯಾ ಭಾರದ್ವಾಜ್, ಸುನೀಲ್ ಮೊದಲಾದ ಕಲಾವಿದರು ನಟಿಸಿದ್ದಾರೆ. ಸುಕುಮಾರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ಈ ಚಿತ್ರವನ್ನು ನಿರ್ಮಿಸಿದೆ.

ಇದನ್ನೂ ಓದಿ:ವಿಜಯ್​ ಸೇತುಪತಿ ಅಭಿನಯದ ಮಹಾರಾಜ ಸೂಪರ್​ ಹಿಟ್; 24 ಗಂಟೆಯೊಳಗೆ 2 ಲಕ್ಷ ಟಿಕೆಟ್​ ಮಾರಾಟ - Maharaja Movie Tickets

ABOUT THE AUTHOR

...view details