ಕರ್ನಾಟಕ

karnataka

ETV Bharat / entertainment

'ಪುಷ್ಪ 2' ಮೊದಲ ಹಾಡಿಗೆ ಭರ್ಜರಿ ರೆಸ್ಪಾನ್ಸ್: ಮುಂದಿನ ತಿಂಗಳು ಎರಡನೇ ಹಾಡು ಅನಾವರಣ - Pushpa 2 Song - PUSHPA 2 SONG

'ಪುಷ್ಪ 2: ದಿ ರೂಲ್' ಚಿತ್ರದ ಎರಡನೇ ಹಾಡು ಮುಂದಿನ ತಿಂಗಳು ಅನಾವರಣಗೊಳ್ಳಲಿದೆ.

Allu Arjun
ಅಲ್ಲು ಅರ್ಜುನ್ (ANI image)

By ETV Bharat Karnataka Team

Published : May 5, 2024, 7:47 PM IST

ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಅಭಿನಯದ ''ಪುಷ್ಪ 2: ದಿ ರೂಲ್'' ಈ ಸಾಲಿನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಚಿತ್ರ ಈಗಾಗಲೇ ಸಖತ್​​​ ಕ್ರೇಜ್​ ಕ್ರಿಯೇಟ್​ ಮಾಡಿದೆ. ವಿಶೇಷವಾಗಿ, ಇತ್ತೀಚೆಗೆ ಚಿತ್ರದಿಂದ ಎನರ್ಜಿಟಿಕ್​​ ಟ್ರ್ಯಾಕ್ 'ಪುಷ್ಪ ಪುಷ್ಪ' ಬಿಡುಗಡೆಯಾದ ನಂತರವಂತೂ ಸಿನಿಮಾ ನೋಡುವ ಸಿನಿಪ್ರಿಯರ ಕಾತುರ ದುಪ್ಪಟ್ಟಾಗಿದೆ. ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋವಾಗಿ ಹೊರಹೊಮ್ಮಿದೆ. ಮೊದಲ ಹಾಡು ಸ್ವೀಕರಿಸಿರುವ ಉತ್ತಮ ಸ್ಪಂದನೆ ಬಗ್ಗೆ ಸಂಭ್ರಮದಲ್ಲಿರುವ ಚಿತ್ರ ತಯಾರಕರು ಮುಂದಿನ ತಿಂಗಳು ಎರಡನೇ ಹಾಡನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ. ಅದಾಗ್ಯೂ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

4 ನಿಮಿಷ 19 ಸೆಕೆಂಡ್‌ಗಳ 'ಪುಷ್ಪ ಪುಷ್ಪ' ಎಂಬ ಮೊದಲ ಟ್ರ್ಯಾಕ್ ಅಲ್ಲು ಪಾತ್ರದ ಪುಷ್ಪರಾಜ್‌ನ ಹಾಡಾಗಿದೆ. ಟೈಟಲ್​ ಟ್ರ್ಯಾಕ್​ನ ಲಿರಿಕಲ್ ವಿಡಿಯೋದಲ್ಲಿ ಅಲ್ಲು ಅರ್ಜುನ್ ಅವರ ಸಿಗ್ನೇಚರ್​​ ಸ್ಟೆಪ್ಸ್ ಕಾಣಬಹುದು. ಪುಷ್ಪ ಫೇಮಸ್​​ ಡೈಲಾಗ್​​ ತಗ್ಗೆದೆ ಲೇ ಮೂಲಕ ಹಾಡು ಮುಕ್ತಾಯಗೊಳ್ಳುತ್ತದೆ.

ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಬೆಂಗಾಲಿ ಸೇರಿ ಹಲವು ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾದ ಪುಷ್ಪ 2 ಹಾಡನ್ನು ದೇವಿ ಶ್ರೀ ಪ್ರಸಾದ್ ರಚಿಸಿದ್ದಾರೆ. ಮೊದಲ ಹಾಡಿನ ಯಶಸ್ಸನ್ನು ಗಮನಿಸಿದರೆ, ಎರಡನೇ ಹಾಡಿಗೆ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ಸುಕುಮಾರ್ ನಿರ್ದೇಶನ ಈ ಚಿತ್ರದಲ್ಲಿ ಅಲ್ಲು ಅರ್ಜುನ್​​, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್​ ಪಾತ್ರಗಳು ಮುಂದುವರಿಯುತ್ತವೆ. ಜಗಪತಿ ಬಾಬು, ಬ್ರಹ್ಮಾಜಿ, ಅನಸೂಯಾ ಭಾರದ್ವಾಜ್ ಸೇರಿದಂತೆ ಹಲವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪುಷ್ಪ: ದಿ ರೂಲ್ ಚಿತ್ರ 2021ರ ಪುಷ್ಪ: ದಿ ರೈಸ್ ಚಿತ್ರದ ಮುಂದುವರಿದ ಭಾಗ. ಈ ವರ್ಷ ಆಗಸ್ಟ್ 15 ರಂದು ಚಿತ್ರಮಂದಿರ ಪ್ರವೇಶಿಸಲಿದೆ. ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿರುವ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿದೆ. ಮೊದಲ ಭಾಗದಲ್ಲಿನ ಅಭಿನಯಕ್ಕೆ ಅಲ್ಲು ಅರ್ಜುನ್ ಕಳೆದ ಸಾಲಿನಲ್ಲಿ​​ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ 24 ಗಂಟೆಯೊಳಗೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಲಿರಿಕಲ್ ಸಾಂಗ್ 'ಪುಷ್ಪ ಪುಷ್ಪ' - Pushpa Song Record

ಪುಷ್ಪ ಪುಷ್ಪ ಹಾಡು ಅನಾವರಣಗೊಂಡ ಮರುದಿನ ಚಿತ್ರನಿರ್ಮಾಪಕರು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ದಾಖಲೆಯನ್ನು ಹಂಚಿಕೊಂಡಿದ್ದರು. 6 ಭಾಷೆ ಸೇರಿ 24 ಗಂಟೆಯೊಳಗೆ ಹೆಚ್ಚು ವೀಕ್ಷಿಸಲ್ಪಟ್ಟ ಭಾರತದ ಲಿರಿಕಲ್​​ ವಿಡಿಯೋ ಸಾಂಗ್ ಎಂದು ಬರೆದುಕೊಂಡಿದ್ದರು. ಅಲ್ಲದೇ 24 ಗಂಟೆಯೊಳಗೆ 40 ಮಿಲಿಯನ್​ ಪ್ಲಸ್​​ ವೀವ್ಸ್​​​, 1.27 ಮಿಲಿಯನ್​ ಲೈಕ್ಸ್ ಪಡೆದಿದ್ದು, 15 ದೇಶಗಳಲ್ಲಿ ಟ್ರೆಂಡಿಂಗ್​​ನಲ್ಲಿದೆ ಎಂಬ ವಿಚಾರವನ್ನು ಹಂಚಿಕೊಂಡ ಚಿತ್ರ ನಿರ್ಮಾಪಕರು ಆಲ್​ ಟೈಮ್​​ ರೆಕಾರ್ಡ್ ಎಂದು ಪೋಸ್ಟರ್​​ನಲ್ಲಿ ತಿಳಿಸಿದ್ದರು.

ಇದನ್ನೂ ಓದಿ:ಬಂದೇ ಬಿಟ್ಟ ಪುಷ್ಪರಾಜ್: ಪುಷ್ಪ ಸೀಕ್ವೆಲ್​​ನ ಮೊದಲ ಹಾಡಿಗೆ ಫ್ಯಾನ್ಸ್ ಫಿದಾ - Pushpa 2

For All Latest Updates

ABOUT THE AUTHOR

...view details