ಕರ್ನಾಟಕ

karnataka

ETV Bharat / entertainment

ಪೈರಸಿಗೆ ಬಲಿಯಾದ 'ಪುಷ್ಪ 2': ತೆರೆಕಂಡ ದಿನವೇ HDಯಲ್ಲಿ ಲೀಕ್​ ಆಯ್ತು ಅಲ್ಲು ಅರ್ಜುನ್​ ರಶ್ಮಿಕಾ ಸಿನಿಮಾ - PUSHPA 2 LEAK

'ಪುಷ್ಪ 2' ಚಿತ್ರಮಂದಿರದಲ್ಲಿ ಬಿಡುಗಡೆಯಾದ ಮೊದಲ ದಿನವೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.

Pushpa 2 Poster
ಅಲ್ಲು ಅರ್ಜುನ್ 'ಪುಷ್ಪ 2' ಪೋಸ್ಟರ್ (Photo: Film Poster/ ETV Bharat)

By ETV Bharat Entertainment Team

Published : Dec 5, 2024, 1:42 PM IST

ಅಲ್ಲು ಅರ್ಜುನ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಪುಷ್ಪ 2' ಇಂದು ಅದ್ಧೂರಿಯಾಗಿ ಜಾಗತಿಕ ಮಟ್ಟದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಚಿತ್ರ ಮೊದಲ ದಿನವೇ ಪ್ರೇಕ್ಷಕರ ಹೃದಯ ಗೆದ್ದಿದೆ ಎಂಬುದನ್ನು ಎಕ್ಸ್-ರಿವ್ಯೂ ತೋರಿಸಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಹುವಾಗಿ ಆನಂದಿಸುತ್ತಿದ್ದಾರೆ. ಆದ್ರೆ, ಚಿತ್ರಮಂದಿರದಲ್ಲಿ ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ 'ಪುಷ್ಪ 2' ಪೈರಸಿಗೆ ಬಲಿಯಾಗಿದೆ. ಅನೇಕ ಆನ್‌ಲೈನ್ ಸೈಟ್‌ಗಳಲ್ಲಿ ಸಿನಿಮಾ ಲೀಕ್​ ಆಗಿದೆ.

ಹೌದು, ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿರುವ ಬಹುನಿರೀಕ್ಷಿತ 'ಪುಷ್ಪ 2' ತಮಿಳ್ ರಾಕರ್ಸ್, ಫಿಲ್ಮಿಜಿಲ್ಲಾ, ಮೂವೀಸ್ ಸೇರಿದಂತೆ ಅನೇಕ ಪೈರಸಿ ಸೈಟ್‌ಗಳಲ್ಲಿ ಲೀಕ್​ ಆಗಿದೆ, ಅದು ಕೂಡಾ ಹೆಚ್‌ಡಿ ಫಾರ್ಮ್ಯಾಟ್​ನಲ್ಲಿ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಚಲನಚಿತ್ರಗಳು ಸೋರಿಕೆ ಆಗುವುದು ಸಾಮಾನ್ಯ ವಿಷಯ ಆಗಿದ್ದರೂ, ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗಿ ಬಿಗ್​ ಸ್ಕ್ರೀನ್​​​ನಲ್ಲಿ ಸಿನಿಮಾ ವೀಕ್ಷಿಸಿ ಆನಂದಿಸಲು ಬಯಸುತ್ತಾರೆ. ಹಾಗಾಗಿಯೇ, ಅಡ್ವಾನ್ಸ್​​ ಬುಕಿಂಗ್‌ನಲ್ಲಿ ಪುಷ್ಪ 2 ದಾಖಲೆಯ ಗಳಿಕೆ ಮಾಡಿದೆ.

ನಿರೀಕ್ಷೆಯಂತೆ ಇಂದು ಥಿಯೇಟರ್‌ಗಳಲ್ಲಿ 'ಪುಷ್ಪ 2'ಗೆ ಗ್ರ್ಯಾಂಡ್​ ವೆಲ್​​ಕಮ್​​ ಸಿಕ್ಕಿದೆ. ಪ್ರೀ ರಿಲೀಸ್​ ಮತ್ತು ಆರಂಭಿಕ ಶೋಗಳನ್ನು ವೀಕ್ಷಿಸಿರುವ ಅಪಾರ ಸಂಖ್ಯೆಯ ಪ್ರೇಕ್ಷಕರು, ಸುಕುಮಾರ್​ ನಿರ್ದೇಶನದ ಈ ಚಿತ್ರವನ್ನು 'ವರ್ಷದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ' ಎಂದು ಬಣ್ಣಿಸಿದ್ದಾರೆ. ಎಕ್ಸ್ ರಿವ್ಯೂ ಗಮನಿಸುವುದಾದರೆ, ಚಿತ್ರಕ್ಕೆ ಬಹುತೇಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಡೈಲಾಗ್‌ಗಳಿಂದ ಹಿಡಿದು ಅಲ್ಲು ಅರ್ಜುನ್ ಅವರ ಜಾತ್ರಾ ಸೀನ್​​ ಥಿಯೇಟರ್‌ನಲ್ಲಿ ಸಾಕಷ್ಟು ಶಿಳ್ಳೆ ಚಪ್ಪಾಳೆಗಳನ್ನು ಸ್ವೀಕರಿಸಿದೆ. ಪ್ರೇಕ್ಷಕರು ಇದನ್ನು ರಾಷ್ಟ್ರ ಪ್ರಶಸ್ತಿಗೆ ಅರ್ಹವಾದ ಪ್ರದರ್ಶನ ಎನ್ನುತ್ತಿದ್ದಾರೆ.

ಇದನ್ನೂ ಓದಿ:ಪುಷ್ಪ ಸೀಕ್ವೆಲ್​​: ವಿಶ್ವದಾದ್ಯಂತ 270 ಕೋಟಿ ಗಳಿಸುವ ಮೊದಲ ನಟರಾಗಲಿದ್ದಾರೆ ಅಲ್ಲು ಅರ್ಜುನ್

ಪುಷ್ಪ 2 ಚಿತ್ರಕ್ಕಾಗಿ ಪ್ರೇಕ್ಷಕರು ಬಹಳ ದಿನಗಳಿಂದ ಕಾಯುತ್ತಿದ್ದರು. ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆಯಾದಾಗಲೂ ಬಹಳ ಬೇಸರ ವ್ಯಕ್ತಪಡಿಸಿದ್ದರು. 2021ರಲ್ಲಿ ಬಿಡುಗಡೆ ಆದ ಪುಷ್ಪ ದಿ ರೈಸ್ ಕಥೆ ಎಲ್ಲಿ ಕೊನೆಗೊಂಡಿತ್ತೋ ಅಲ್ಲಿಂದಲೇ ಪುಷ್ಪ ದಿ ರೂಲ್ ಕಥೆ ಪ್ರಾರಂಭವಾಗಿದ್ದು, ಸದ್ಯ ಸಿನಿಮಾ ಸಕ್ಸಸ್​ನಲ್ಲಿ ಮುಳುಗಿದೆ.

ಇದನ್ನೂ ಓದಿ:ಹಸೆಮಣೆ ಏರಿದ ನಾಗ ಚೈತನ್ಯ ಶೋಭಿತಾ ಧೂಳಿಪಾಲ: ಸುಂದರ ಫೋಟೋಗಳನ್ನೊಮ್ಮೆ ನೋಡಿ ಬಿಡಿ!

ಪುಷ್ಪ 2 ಚಿತ್ರದ ಜನಪ್ರಿಯತೆ ಮುಗಿಲು ಮುಟ್ಟಿದೆ. ಪ್ರಚಾರ ಕೂಡಾ ಅದ್ಧೂರಿಯಾಗೇ ನಡೆದಿದೆ. ಪ್ರೀ ರಿಲೀಸ್​ ಹಿನ್ನೆಲೆ ಬುಧವಾರ ರಾತ್ರಿಯಿಂದಲೇ ಥಿಯೇಟರ್​ಗಳಲ್ಲಿ ಪ್ರೇಕ್ಷಕರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪುಷ್ಪ 2ರ ಟಿಕೆಟ್ 1000 ರೂ.ಗೆ ಮಾರಾಟವಾಗಿದೆ. ನಾಳೆ ಮುಂಜಾನೆ ತಿಳಿದುಬರಲಿರುವ ಬಾಕ್ಸ್​ ಆಫಿಸ್​ ಕಲೆಕ್ಷನ್​ ಅಂಕಿ ಅಂಶಗಳ ಮೇಲೆ ಹೆಚ್ಚಿನವರ ಗಮನವಿದೆ.

ABOUT THE AUTHOR

...view details