ಕರ್ನಾಟಕ

karnataka

ETV Bharat / entertainment

ಅದು ಕುರ್ಚಿಯಲ್ಲ ಪ್ರತಿಷ್ಠೆಯ ಪಿಶಾಚಿ: ಮೈ ಜುಮ್ ಎನಿಸುವ ಪ್ರಜ್ವಲ್​​ ದೇವರಾಜ್​​ 'ಕರಾವಳಿ' ಟೀಸರ್​ಗೆ ಫ್ಯಾನ್ಸ್ ಫಿದಾ - KARAVALI TEASER

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹುನಿರೀಕ್ಷೆಯ 'ಕರಾವಳಿ' ಚಿತ್ರದ ಟೀಸರ್​ ಅನಾವರಣಗೊಂಡಿದೆ.

Prajwal Devaraj
ಪ್ರಜ್ವಲ್ ದೇವರಾಜ್ (Photo: ETV Bharat)

By ETV Bharat Entertainment Team

Published : Dec 30, 2024, 7:40 PM IST

'ಕರಾವಳಿ', ಸ್ಯಾಂಡಲ್​​ವುಡ್​ನಲ್ಲಿ ಗಮನ ಸೆಳೆದಿರುವ ಸಿನಿಮಾ. 2025ರ ಬಹುನಿರೀಕ್ಷೆಯ ಭಾರತೀಯ ಸಿನಿಮಾಗಳಲ್ಲಿ ಕರಾವಳಿ ಕೂಡಾ ಸೇರಿದೆ. ಪೋಸ್ಟರ್ಸ್ ಮೂಲಕ ಈಗಾಗಲೇ ಕುತೂಹಲ ಹೆಚ್ಚಿಸಿರುವ ಕರಾವಳಿ ಹೊಸ ವರ್ಷದ ಸಂದರ್ಭ ಭರ್ಜರಿ ಟೀಸರ್ ಮೂಲಕ ಸಿನಿಪ್ರಿಯರ ಮುಂದೆ ಬಂದಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಮತ್ತು ಗುರುದತ್ ಗಾಣಿಗ ನಿರ್ದೇಶನದ ಕರಾವಳಿ ಚಿತ್ರದ ವಿಭಿನ್ನ ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಸಾಮಾನ್ಯವಾಗಿ ಟೀಸರ್ ನಾಯಕ, ನಾಯಕಿ ಅಥವಾ ಸಿನಿಮಾದ ಒಬ್ಬ ವ್ಯಕ್ತಿಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದರೆ ಕರಾವಳಿಯಿಂದ ಬಂದಿರುವ ಹೊಸ ಟೀಸರ್ ಒಂದು ಪ್ರತಿಷ್ಠೆಯ ವಸ್ತುವಿನ ಮೇಲೆ ಇರುವುದು ವಿಶೇಷ. ಸದ್ಯ ರಿಲೀಸ್ ಆಗಿರುವ ಟೀಸರ್​ನಲ್ಲಿ ಪ್ರತಿಷ್ಠೆಯ ಕುರ್ಚಿಯೇ ಹೈಲೆಟ್.

ಅದು ಕುರ್ಚಿಯಲ್ಲ, ಪ್ರತಿಷ್ಠೆಯ ಪಿಶಾಚಿ ಎನ್ನುವ ಸಂಭಾಷಣೆಯಿಂದ ಟೀಸರ್ ಪ್ರಾರಂಭವಾಗುತ್ತದೆ. ಪ್ರತಿಷ್ಠೆಯ ಕುರ್ಚಿ ಮೇಲೆ ಕೂರುವುದಿರಲಿ ಕಣ್ಣಿಟ್ಟವರನ್ನು ಬಿಡಲ್ಲ ಎಂದು ನಟ ಮಿತ್ರ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ಟೀಸರ್ ಮೈ ಜುಮ್ ಎನ್ನುವಂತಿದೆ.

ಅಂದಹಾಗೆ ಕರಾವಳಿ ಕಂಬಳ ಪ್ರಪಂಚದ ಬಗ್ಗೆ ಇರುವ ಸಿನಿಮಾ. ಈ ಮೊದಲು ರಿಲೀಸ್ ಆಗಿರುವ ಟೀಸರ್​ನಲ್ಲಿ ಒಂದು ಮಗು ಜನಿಸುತ್ತದೆ, ಅದೇ ಸಮಯಕ್ಕೆ ಕೊಟ್ಟಿಗೆಯಲ್ಲಿ ಒಂದು ಕರುವಿನ ಜನನವು ಆಗುತ್ತದೆ. ಸದ್ಯ ರಿಲೀಸ್ ಆಗಿರುವ ಟೀಸರ್ ಮುಂದುವರೆದ ಭಾಗ ಎಂಬಂತೆ ಆ ಮಗು ಹುಟ್ಟಿದಾಗಿನಿಂದ ಪ್ರತಿಷ್ಠೆಯ ಕುರ್ಚಿಯನ್ನು ನೋಡುತ್ತಾ ಬೆಳೆದವನು, ಆ ಕುರ್ಚಿ ಮೇಲೆ ಎಲ್ಲರ ಕಣ್ಣು ಬಿದ್ದಿರುವುದು ಈ ಟೀಸರ್​ನಲ್ಲಿ ಗೊತ್ತಾಗುತ್ತಿದೆ. ನಟ ಮಿತ್ರ ಘರ್ಜನೆ ರಮೇಶ್ ಇಂದಿರ ಅವರ ಕ್ರೌರ್ಯ ಕೂಡ ಟೀಸರ್​ನಲ್ಲಿ ಕಾಣಬಹುದು. ಕೆಕೆ ಮಠ ಹಾಗೂ ಟೀಸರ್​ನ ಕೊನೆಯಲ್ಲಿ ಒಂದು ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವ ಪ್ರಜ್ವಲ್ ದೇವರಾಜ್ ಪಾತ್ರ ಕೂಡಾ ತುಂಬಾ ಇಂಟ್ರಸ್ಟಿಂಗ್ ಆಗಿದೆ.

ಇದನ್ನೂ ಓದಿ:ಜ.3ಕ್ಕೆ ನಟ ಅಲ್ಲು ಅರ್ಜುನ್​ ಜಾಮೀನು ತೀರ್ಪು: ಸಂಧ್ಯಾ ಥಿಯೇಟರ್​ ಪ್ರಕರಣದ ಬಗ್ಗೆ ಪವನ್​ ಕಲ್ಯಾಣ್​ ಪತ್ರಿಕ್ರಿಯೆ

ಈ ಸಿನಿಮಾದಿಂದ ಈಗಾಗಲೇ ಪ್ರಜ್ವಲ್ ದೇವರಾಜ್ ಅವರ ಮೂರು ರೀತಿಯ ಲುಕ್ ರಿವೀಲ್ ಆಗಿದೆ. ಯಕ್ಷಗಾನ, ಕಂಬಳ, ಮಹಿಷಾಸುರ ಹೀಗೆ 3 ವೆರೈಟಿ ಗೆಟಪ್​ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದು, ಪ್ರಜ್ವಲ್ ಇಲ್ಲಿ ಯಕ್ಷಗಾನ ಕಲಾವಿದನಾ ಅಥವಾ ಕಂಬಳ ಪಾತ್ರಧಾರಿಯೇ? ಎನ್ನುವ ಕುತೂಹಲ ಕೂಡ ಮೂಡಿದೆ.

ಇದನ್ನೂ ಓದಿ:ಶಿಡ್ಲಘಟ್ಟದಿಂದ ಸ್ವಿಟ್ಜರ್​ಲ್ಯಾಂಡ್​ವರೆಗೆ: 'ಸಂಜು ವೆಡ್ಸ್ ಗೀತಾ 2' ಕಥೆ ಕೊಟ್ಟಿದ್ದು ಸುದೀಪ್

ಕರಾವಳಿ ಈಗಾಗಲೇ ಶೇ.80ರಷ್ಟು ಚಿತ್ರೀಕರಣ ಮುಗಿಸಿದೆ. ಸಿನಿಮಾದಲ್ಲಿ ಪ್ರಜ್ವಲ್​ಗೆ ನಾಯಕಿಯಾಗಿ ಸಂಪದಾ ಕಾಣಿಸಿಕೊಳ್ಳುತ್ತಿದ್ದಾರೆ. ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣಗೊಂಡಿದೆ. ಈ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಅವರದ್ದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್​ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್​ನಲ್ಲಿ ಸಿನಿಮಾ ಮೂಡಿಬರಲಿದೆ. ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ, ಅಭಿಮನ್ಯು ಸದಾನಂದನ್ ಕ್ಯಾಮರಾ ವರ್ಕ್ ಇದೆ.

ABOUT THE AUTHOR

...view details