'ಪುಷ್ಪ 2: ದಿ ರೂಲ್' ಬಿಡುಗಡೆ ಹೊಸ್ತಿಲಲ್ಲಿರುವ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ಸಿನಿಮಾದ ಪ್ರಮೋಶನ್ ಜೋರಾಗೇ ನಡೆಯುತ್ತಿದೆ. ನಿರ್ಮಾಪಕರು ಚಿತ್ರದ ಹೊಸ ಹಾಡು 'ಪೀಲಿಂಗ್ಸ್'ನ ಪ್ರೋಮೋವನ್ನು ಅನಾವರಣಗೊಳಿಸಿದ್ದಾರೆ. ಫೇಮಸ್ ಸಾಂಗ್ ಸಾಮಿ ಸಾಮಿ ಮಾದರಿಯಲ್ಲೇ ಈ ಹಾಡಿನ ಬೀಟ್ ಕೂಡಾ ಹೈ ಎನರ್ಜಿ ಹೊಂದಿದೆ. ಪ್ರೋಮೋದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಫೈರ್ ಕೆಮಿಸ್ಟ್ರಿ ಎದ್ದು ಕಾಣುತ್ತಿದ್ದು, ಹಾಡು ಹೇಗಿರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಪ್ರಮೋಶನ್ ಈವೆಂಟ್ನಲ್ಲಿ ಪ್ರೋಮೋದ ಒಂದು ನೋಟ ಒದಗಿಸಲಾಗಿದೆ. ಅಲ್ಲು ಅರ್ಜುನ್ ತಮ್ಮ ಸ್ಟೈಲಿಶ್, ಪವರ್ಫುಲ್ ಡ್ಯಾನ್ಸ್ ಸ್ಟೆಪ್ಸ್ಗೆ ಹೆಸರುವಾಸಿಯಾಗಿದ್ದಾರೆ. ರಶ್ಮಿಕಾ ಡ್ಯಾನ್ಸ್ ಕೂಡಾ ಕಡಿಮೆಯೇನಿಲ್ಲ. ನಾಯಕ ನಟ ಹಾಡಿನ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋ ಶೇರ್ ಮಾಡಿದ ಅಲ್ಲು ಅರ್ಜುನ್, ಪೀಲಿಂಗ್ಸ್ ಪ್ರೋಮೋ ರಿಲೀಸ್. ಸಂಪೂರ್ಣ ಹಾಡು ಡಿಸೆಂಬರ್ 1ಕ್ಕೆ ಬಿಡುಗಡೆ ಎಂದು ಬರೆದುಕೊಂಡಿದ್ದಾರೆ.
'ಪುಷ್ಪ ಪಾತ್ರದಿಂದಾಗಿ ನನಗೆ ಪುಷ್ಪ 1ರಲ್ಲಿ ಹೆಚ್ಚು ನೃತ್ಯ ಮಾಡಲು ಸಾಧ್ಯವಾಗಿರಲಿಲ್ಲ. ಆದ್ರೆ ಅಭಿಮಾನಿಗಳು ಹಳೇ ಬನ್ನಿಯನ್ನು ಹಿಂದಿರುಗಿಸಲು ಒತ್ತಾಯಿಸಿದ್ದಾರೆ. ಈ ಹಾಡು ಭರ್ಜರಿಯಾಗಿರಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ' ಎಂದು ತಿಳಿಸಿದ್ದಾರೆ. ಪ್ರೋಮೋದಲ್ಲಿ ರಶ್ಮಿಕಾ ಮಂದಣ್ಣ ಕೂಡಾ ಮಿಂಚುತ್ತಿದ್ದು, ಹಾಡಿನಲ್ಲಿ ಅವರ ಹೈ ಎನರ್ಜಿ ಡ್ಯಾನ್ಸ್ ನೋಡಿ ಅಭಿಮಾನಿಗಳು ಕ್ರಶ್-ಮಿಕಾ ಎಂದು ಕರೆಯುತ್ತಾರೆ ಎಂದು ಅಲ್ಲು ಅರ್ಜುನ್ ತಿಳಿಸಿದ್ದಾರೆ.