ಕರ್ನಾಟಕ

karnataka

ETV Bharat / entertainment

ರಾಮಮಂದಿರ ಸಮಾರಂಭ 'ಭಾರತವನ್ನು ರಾಷ್ಟ್ರವಾಗಿ ಏಕೀಕರಿಸಿದೆ': ಪವನ್ ಕಲ್ಯಾಣ್ - ram mandir

ರಾಷ್ಟ್ರದ ಧಾರ್ಮಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಮಹತ್ವದ ಘಟನೆಯಾದ ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪವನ್ ಕಲ್ಯಾಣ್ ಮತ್ತು ರಾಮ್ ಚರಣ್ ಭಾಗವಹಿಸಿದ್ದರು.

ರಾಮಮಂದಿರ ಸಮಾರಂಭಕ್ಕೆ ಭಾಗವಹಿಸಿದ್ದ ಸೆಲೆಬ್ರಿಟಿಗಳು
ರಾಮಮಂದಿರ ಸಮಾರಂಭಕ್ಕೆ ಭಾಗವಹಿಸಿದ್ದ ಸೆಲೆಬ್ರಿಟಿಗಳು

By ETV Bharat Karnataka Team

Published : Jan 22, 2024, 8:30 PM IST

ಅಯೋಧ್ಯೆ:ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ನಟ, ರಾಜಕಾರಣಿ ಪವನ್ ಕಲ್ಯಾಣ್ ಮತ್ತು ಅವರ ಸೋದರಳಿಯ ರಾಮ್ ಚರಣ್ ಭಾಗವಹಿಸಿದ್ದರು. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರದಲ್ಲಿ ಸ್ತೋತ್ರಗಳು, ಶ್ಲೋಕಗಳು ಮತ್ತು ಹಾಡುಗಳು ದೇವಾಲಯದ ಆವರಣದಲ್ಲಿ ಪ್ರತಿಧ್ವನಿಸಿದವು. ಈ ಧಾರ್ಮಿಕ ಉತ್ಸಾಹದಲ್ಲಿ ಭಾಗಿಯಾದ ಹಲವಾರು ಗಣ್ಯರಲ್ಲಿ ಇವರಿಬ್ಬರೂ ಸೇರಿದ್ದರು.

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್

ಅದ್ಧೂರಿ ಉದ್ಘಾಟನಾ ಸಮಾರಂಭದ ನಂತರ, ಪವನ್ ಕಲ್ಯಾಣ್ (52) ಅವರು ಬಿಳಿ ಕುರ್ತಾ ಪೈಜಾಮ ಮತ್ತು ಶಾಲು ಧರಿಸಿ ಮಾಧ್ಯಮಗಳೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು. "ಇಂದು ನಾನು ಸಾಕಷ್ಟು ಭಾವನಾತ್ಮಕವಾಗಿದ್ದೇನೆ. ಪ್ರಾಣಪ್ರತಿಷ್ಠೆಯ ಸಮಯದಲ್ಲಿ ನನ್ನ ಕಣ್ಣುಗಳಿಂದ ಕಣ್ಣೀರು ಹರಿಯಲು ಪ್ರಾರಂಭಿಸಿತು. ಇದು ಭಾರತವನ್ನು ಒಂದು ರಾಷ್ಟ್ರವಾಗಿ ಬಲಪಡಿಸಿದೆ ಮತ್ತು ಏಕೀಕರಿಸಿದೆ" ಎಂದು ಪವನ್ ಕಲ್ಯಾಣ್ ಅವರು ಹೇಳಿದರು.

ಪವನ್ ಕಲ್ಯಾಣ್

ತಮ್ಮ ಮೆಗಾಸ್ಟಾರ್ ತಂದೆ ಚಿರಂಜೀವಿ ಮತ್ತು ತಾಯಿ ಸುರೇಖಾ ಕೊನಿಡೇಲಾ ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ ರಾಮ್ ಚರಣ್, ತಮಗಾದ ಅದ್ಭುತ ಮತ್ತು ಸುಂದರ ಅನುಭವವನ್ನು ವಿವರಿಸಿದರು. ಇಂತಹ ಶುಭ ದಿನವನ್ನು ವೀಕ್ಷಿಸುವ ಗೌರವವನ್ನು ಅವರು ಒತ್ತಿ ಹೇಳಿದರು. ಇದು ಭಾರತದಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಆಶೀರ್ವಾದ ಎಂದರು. ರಾಮಮಂದಿರ ಉದ್ಘಾಟನೆಗೆ ಸಾಕ್ಷಿಯಾದ ಬಗ್ಗೆ ಕೇಳಿದಾಗ, "ಅದ್ಭುತ, ಇದು ತುಂಬಾ ಸುಂದರವಾಗಿತ್ತು. ಜೀವನದಲ್ಲಿ ಒಮ್ಮೆಯಾದರೂ ಇದನ್ನು ವೀಕ್ಷಿಸಬೇಕು. ನಮ್ಮ ಭಾರತದಲ್ಲಿ ಹುಟ್ಟಿ ಇದನ್ನು ವೀಕ್ಷಿಸುವುದು ಪ್ರತಿಯೊಬ್ಬರಿಗೂ ಗೌರವವನ್ನು ತಂದುಕೊಡುತ್ತದೆ. ಇದು ನಿಜವಾಗಿಯೂ ಒಂದು ಆಶೀರ್ವಾದ" ಎಂದು ರಾಮ್ ಚರಣ್ ಅವರು ಹೇಳಿದರು.

ಪವನ್ ಕಲ್ಯಾಣ್ ಮತ್ತು ರಾಮ್ ಚರಣ್ ಹೊರತಾಗಿ, ರಜಿನಿಕಾಂತ್, ಅಮಿತಾಬ್ ಬಚ್ಚನ್ ಮತ್ತು ಇತರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 50 ದೇಶಗಳ 92 ಆಹ್ವಾನಿತರೊಂದಿಗೆ ಜಾಗತಿಕ ಸಂಬಂಧವನ್ನು ಸೃಷ್ಟಿಸಿದರು. ಸಮಾರಂಭವು ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ಚಲನಚಿತ್ರ ತಾರೆಯರು ಮತ್ತು ಕ್ರೀಡಾ ವ್ಯಕ್ತಿಗಳು ಸೇರಿದಂತೆ 506 ಎ - ಲಿಸ್ಟರ್‌ಗಳನ್ನು ಒಳಗೊಂಡಿತ್ತು.

ರಾಮಮಂದಿರದಲ್ಲಿ ಹಬ್ಬದ ವಾತಾವರಣ:ಸರಿಸುಮಾರು 8,000 ಆಹ್ವಾನಿತರು ಭಾಗವಹಿಸಿದ ಸಮಾರಂಭದಲ್ಲಿ ಜಾಗತಿಕ ಪ್ರಾತಿನಿಧ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರದರ್ಶಿಸಲಾಯಿತು. ವಿವಿಧ ಸಾಮಾಜಿಕ ಗುಂಪುಗಳ 15 'ಯಜಮಾನ್‌ಗಳು' ಪ್ರಧಾನಿ ಮೋದಿಯವರೊಂದಿಗೆ ಬಂದಿದ್ದರು. ಸಮಾರಂಭದಲ್ಲಿ 25 ರಾಜ್ಯಗಳ ಸಂಗೀತ ವಾದ್ಯಗಳು ಸುಮಾರು ಎರಡು ಗಂಟೆಗಳ ಕಾಲ 'ಮಂಗಳ ಧ್ವನಿ' ಹೊಮ್ಮಿಸುವ ಮೂಲಕ ಹಬ್ಬದ ವಾತಾವರಣವನ್ನು ಹೆಚ್ಚಿಸಿದ್ದವು. ನಗರವು ಸ್ವತಃ 2,500 ಕ್ವಿಂಟಾಲ್ ಹೂವುಗಳಿಂದ ಅಲಂಕರಿಸಲ್ಪಟ್ಟಿತ್ತು.

ದಂಪತಿಗಳಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸಾಂಪ್ರದಾಯಿಕ ಉಡುಗೆಯಲ್ಲಿ ಸೊಗಸಾಗಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಆಲಿಯಾಳ ಸೀರೆಯಲ್ಲಿನ ರಾಮಾಯಣದ ಚಿತ್ರಗಳು ಅವರ ಅಭಿಮಾನಿಗಳನ್ನು ಸೆಳೆದವು. ರಣಬೀರ್ ಧೋತಿ - ಕುರ್ತಾ ಮತ್ತು ಶಾಲನ್ನು ಆರಿಸಿಕೊಂಡರೆ, ಆಲಿಯಾ ನೀಲಿ ಶಾಲು ಜೊತೆಗೆ ಹೊಳೆಯುವ ವೈಡೂರ್ಯದ ಸೀರೆಯಿಂದ ತನ್ನನ್ನು ಆಕರ್ಷಕವಾಗಿ ಅಲಂಕರಿಸಿಕೊಂಡಿದ್ದರು.

ಅಭಿಮಾನಿಗಳಿಗೆ ಶುಭ ಹಾರೈಸಿದ ಗಣ್ಯರು: ಮತ್ತೊಂದೆಡೆ, ಅನೇಕ ಇತರ ಗಣ್ಯರು ರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಈವೆಂಟ್‌ಗೆ ಅವರ ಅನುಪಸ್ಥಿತಿಯು ಅವರ ಉತ್ಸಾಹವನ್ನು ಕುಂಠಿತಗೊಳಿಸಲಿಲ್ಲ. ಏಕೆಂದರೆ ಅವರು ಐತಿಹಾಸಿಕ ಘಟನೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳಿಗೆ ಶುಭ ಹಾರೈಸಿದರು.

ಇದನ್ನೂ ಓದಿ:ರಾಮನ ಸ್ಮರಿಸಿದ ಮಹೇಶ್​ಬಾಬು, ದೀಪಿಕಾ ಸೇರಿ ಹಲವು ಸೆಲೆಬ್ರಿಟಿಗಳು

For All Latest Updates

ABOUT THE AUTHOR

...view details