ಕರ್ನಾಟಕ

karnataka

ETV Bharat / entertainment

ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಪಾರು ಧಾರವಾಹಿಯ ಆದಿ: 'ಅನಿಮಾ' ಟೈಟಲ್ ಪೋಸ್ಟರ್ ರಿಲೀಸ್ - Anima Poster - ANIMA POSTER

'ಪಾರು' ಧಾರವಾಹಿಯ ಆದಿ ಪಾತ್ರದ ಮೂಲಕ ಜನಪ್ರಿಯರಾಗಿರುವ ಶರತ್ ಪದ್ಮನಾಭ್ ನಟನೆಯ ಚೊಚ್ಚಲ ಚಿತ್ರ 'ಅನಿಮಾ'ದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ

Anima title poster release
'ಅನಿಮಾ' ಟೈಟಲ್ ಪೋಸ್ಟರ್ ರಿಲೀಸ್

By ETV Bharat Karnataka Team

Published : Mar 28, 2024, 11:57 AM IST

ಕನ್ನಡ ಕಿರುತೆರೆಯಲ್ಲಿ 'ಪಾರು' ಸೀರಿಯಲ್ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಆದಿ (ಶರತ್ ಪದ್ಮನಾಭ್) ನಾಯಕ ನಟನಾಗಿ ಹಿರಿತೆರೆ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಶರತ್ ನಾಯಕನಾಗಿ ಬಣ್ಣ ಹಚ್ಚಿರುವ ಚೊಚ್ಚಲ ಸಿನಿಮಾಗೆ 'ಅನಿಮಾ' ಎಂಬ ಶೀರ್ಷಿಕೆ ಇಡಲಾಗಿದೆ. 'ಅನಿಮಾ' ಎಂದರೆ ಪ್ರತಿಬಿಂಬ, ಕಾಣದ ಕನ್ನಡಿ ಎಂದರ್ಥ.

'ಅನಿಮಾ' ಟೈಟಲ್ ಪೋಸ್ಟರ್ ರಿಲೀಸ್

ಅನಿಮಾ ಸಿನಿಮಾಗೆ ವರ್ಧನ್ ಎಂ.ಹೆಚ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ರೈತರ ಕುರಿತ ಹೊನ್ನು ಬಿತ್ಯಾರು ಎಂಬ ಕಿರುಚಿತ್ರ ಮಾಡಿದ್ದ ವರ್ಧನ್ ಅನಿಮಾ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಟೈಟಲ್ ಪೋಸ್ಟರ್ ವಿಭಿನ್ನವಾಗಿದೆ. ದಟ್ಟ ಕಾಡಿನ ಮಧ್ಯೆ ಸಾಗುತ್ತಿರುವ ಕಾರು ನಾನಾ ಕಥೆಯನ್ನು ಬಿಚ್ಚಿಡುವಂತೆ ತೋರುತ್ತಿದೆ.

ಶರತ್ ಪದ್ಮನಾಭ್ ಪೋಸ್ಟ್: ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಟೈಟಲ್ ಪೋಸ್ಟರ್ ಹಂಚಿಕೊಂಡ ನಟ ಶರತ್ ಪದ್ಮನಾಭ್ "ಅನಿಮಾ. ನಮ್ಮ ಸಿನಿಮಾ, ನಿಮ್ಮ ಸಿನಿಮಾ ಆಗುವ ಮೊದಲ ಹೆಜ್ಜೆ. ಒಂದು ಪೋಸ್ಟರ್ ಅನ್ನು ನಿಮ್ಮ ಮುಂದಿಡುತ್ತಿದ್ದೇವೆ. ಒಂದು ರೋಚಕವಾದ ಕಥೆ ಹೇಳಲು ಆದಷ್ಟು ಬೇಗ ಬರುತ್ತೇವೆ. ನಮ್ಮ ತಂಡಕ್ಕೆ ನಿಮ್ಮ ಬೆಂಬಲವಿರಲಿ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:'ಹೀರಾಮಂಡಿ' ಕಾರ್ಯಕ್ರಮಕ್ಕೆ ಅದಿತಿ ರಾವ್​ ಹೈದರಿ ಗೈರು; ದೃಢಪಟ್ಟ ಮದುವೆ ವಿಚಾರ - Aditi Skips Heeramandi Event

ಶರತ್ ಪದ್ಮನಾಭ್ ನಾಯಕ ನಟನಾಗಿ ನಟಿಸುತ್ತಿದ್ದು, ಅನುಷಾ ಕೃಷ್ಣ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಪಂಕಜ್ ಎಸ್.ನಾರಾಯಣ್, ಯುವ ಶೆಟ್ಟಿ, ವಾಣಿ, ಸೂರಿ, ಸುಷ್ಮಿತಾ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ 'ಅನಿಮಾ' ಕಥಾನಕ ಕೊನೆ ಹಂತದ ಚಿತ್ರೀಕರಣದಲ್ಲಿದೆ. ಬೆಂಗಳೂರು, ಸಕಲೇಶಪುರ, ಮಡಿಕೇರಿ, ಹುಲಿಯೂರು ದುರ್ಗ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಎ ಡ್ರೀಮರ್ಸ್ ಸ್ಟುಡಿಯೋ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗ್ತಿದೆ. ಎನ್.ಕೆ.ರಾಜ್ ಛಾಯಾಗ್ರಹಣ, ವಿರಾಜ್ ವಿಶ್ವ ಸಂಭಾಷಣೆ, ರೋನಾದ ಬಕ್ಕೇಶ್ ಹಿನ್ನೆಲೆ ಸಂಗೀತ, ಉಜ್ವಲ್ ಚಂದ್ರ ಸಂಕಲನ ಅನಿಮಾ ಚಿತ್ರಕ್ಕಿದೆ.

ಇದನ್ನೂ ಓದಿ:ಬ್ಯಾಡ್​ ಚಿತ್ರದಿಂದ 'ಮಾತಿಗೂ ಮಾತಿಗೂ' ಹಾಡು ಅನಾವರಣ - BAD Movie Song

ABOUT THE AUTHOR

...view details