ಲಾಸ್ ಏಂಜಲೀಸ್:ಜಗತ್ತಿನ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿಗಳು ಎಂದರೆ ಆಸ್ಕರ್ ಪ್ರಶಸ್ತಿಗಳ ಪ್ರದಾನ ಸಮಾರಂಭವು ಮಾರ್ಚ್ 11ರಂದು ನಡೆಯಲಿದೆ. ಲಾಸ್ ಏಂಜಲೀಸ್‌ನ ಓವೇಶನ್ ಹಾಲಿವುಡ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ಅದ್ಧೂರಿ ಕಾರ್ಯಕ್ರಮ ಜರುಗಲಿದೆ. ಭಾರತದ ಕಾಲಮಾನದ ಪ್ರಕಾರ ಅಂದು ಬೆಳಗ್ಗೆ 4 ಗಂಟೆಗೆ ಈ ಸಮಾರಂಭ ಆರಂಭವಾಗಲಿದೆ.
ಇದು 96ನೇ ಅಕಾಡೆಮಿ ಪ್ರಶಸ್ತಿಗಳ ಪ್ರದಾನ ಸಮಾರಂಭವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಭಾರತದ ಸ್ಪರ್ಧಿಗಳ ಪಟ್ಟಿ ಸಾಧಾರಣವಾಗಿದೆ. ಆದಾಗ್ಯೂ, ಎಲ್ಲರ ಕಣ್ಣುಗಳು 'ಟು ಕಿಲ್ ಎ ಟೈಗರ್' ಸಾಕ್ಷ್ಯಚಿತ್ರದ ಮೇಲೆ ಇವೆ. ಯಾಕೆಂದರೆ, ಭಾರತ ಸಂಜಾತ ಕೆನಡಾದ ಚಲನಚಿತ್ರ ನಿರ್ಮಾಪಕಿ ನಿಶಾ ಪಹುಜಾ ಇದನ್ನು ನಿರ್ದೇಶಿಸಿದ್ದಾರೆ.
ಮಾರ್ಚ್ 11ರ ಸೋಮವಾರದಂದು ಮುಂಜಾನೆ 4 ಗಂಟೆಗೆ ಆಸ್ಕರ್ ಕಾರ್ಯಕ್ರಮ ಶುರುವಾಗಲಿದೆ. ಭಾರತದಲ್ಲಿ ಸ್ಟಾರ್ ಮೂವೀಸ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಮುಂಜಾನೆ 4 ಗಂಟೆಗೆ ಸಮಾರಂಭದ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು. ಅಲ್ಲದೇ, ಸ್ಟಾರ್ ಮೂವೀಸ್ ರಾತ್ರಿ 8.30ಕ್ಕೆ ಕಾರ್ಯಕ್ರಮವನ್ನು ಮರು ಪ್ರಸಾರ ಮಾಡಲಿದೆ.