ಕರ್ನಾಟಕ

karnataka

ETV Bharat / entertainment

ಕೇಂದ್ರದ ಒತ್ತಡಕ್ಕೆ ಮಣಿದ ನೆಟ್​ಫ್ಲಿಕ್ಸ್​: IC814 ವೆಬ್​ಸಿರೀಸ್​ನಲ್ಲಿ ಅಪಹರಣಕಾರರ ನಿಜ ಹೆಸರು ಬಳಕೆ - IC814 Web Series - IC814 WEB SERIES

ಒಟಿಟಿ ಮಾಧ್ಯಮ ನೆಟ್​ಫ್ಲಿಕ್ಸ್​​ನಲ್ಲಿ ಪ್ರಸಾರವಾಗುತ್ತಿರುವ ಕಂದಹಾರ್​ ವಿಮಾನ ಅಪಹರಣ ಕಥಾಹಂದರದ IC814 ವೆಬ್​ಸಿರೀಸ್​ನಲ್ಲಿ ಅಪಹರಣಕಾರರ ನಿಜವಾದ ಹೆಸರನ್ನು ಬಳಸಲು ಚಿತ್ರತಂಡ ಒಪ್ಪಿದೆ. ಅಪಹರಣಕಾರರಿಗೆ ಹಿಂದೂಗಳ ಹೆಸರನ್ನು ಬಳಸಿದ್ದಕ್ಕೆ ಸಾಮಾಜಿಕ ಮಾಧ್ಯಮ ಮತ್ತು ರಾಜಕೀಯವಾಗಿ ಭಾರೀ ಟೀಕೆ ವ್ಯಕ್ತವಾಗಿತ್ತು.

IC814 ವೆಬ್​ಸಿರೀಸ್
IC814 ವೆಬ್​ಸಿರೀಸ್ (Film poster)

By ETV Bharat Entertainment Team

Published : Sep 3, 2024, 10:21 PM IST

Updated : Sep 4, 2024, 2:21 PM IST

ನವದೆಹಲಿ/ಮುಂಬೈ:ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿರುವ ಕಂದಹಾರ್​ ವಿಮಾನ ಅಪಹರಣ ಕಥಾಹಂದರದ ವೆಬ್​ಸಿರೀಸ್​ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದ್ದು, ಅಪಹರಣಕಾರರ ನಿಜವಾದ ಹೆಸರನ್ನು ಬಳಸಲು ಸೂಚಿಸಿತ್ತು. ಇದಕ್ಕೆ ಮಣಿದ ಚಿತ್ರತಂಡ ಸಿರೀಸ್​ನಲ್ಲಿ ಭಯೋತ್ಪಾದಕರ ನಿಜವಾದ ಹೆಸರನ್ನು ಬಳಸಿದೆ.

1999ರಲ್ಲಿ ಪ್ರಯಾಣಿಕರಿದ್ದ ವಿಮಾನವನ್ನು ಕಂದಹಾರ್​ ನಿಲ್ದಾಣದಲ್ಲಿ ಹೈಜಾಕ್​ ಮಾಡಲಾಗಿತ್ತು. ಈ ಕುರಿತ ಸಿರೀಸ್​ನಲ್ಲಿ ವಿಜಯ್​ ವರ್ಮಾ, ನಾಸಿರುದ್ದೀನ್​ ಶಾ, ಪಂಕಜ್​ ಕಪೂರ್​ ಸೇರಿದಂತೆ ಕೆಲ ಜನಪ್ರಿಯ ಕಲಾವಿದರು ನಟಿಸಿದ್ದಾರೆ. ಐಸಿ814 ಸರಣಿಯಲ್ಲಿ ಭಯೋತ್ಪಾದಕರ ಬಗ್ಗೆ ಸಿಂಪತಿ ಮೂಡುವಂತೆ ಚಿತ್ರಿಸಲಾಗಿದೆ. ಕೆಲವು ಕಟ ಸತ್ಯಗಳನ್ನು ಬೇಕಂತಲೇ ತಿರುಚಲಾಗಿದೆ ಎಂಬ ಆರೋಪವಿದೆ.

ಇದೆಲ್ಲಕ್ಕಿಂತ ಮಿಗಿಲಾಗಿ ಭಯೋತ್ಪಾದಕರ ನಿಜವಾದ ಹೆಸರನ್ನೇ ಕೈಬಿಡಲಾಗಿದೆ. ಅವರಿಗೆ ಹಿಂದುಕೋಡ್​ಗಳನ್ನು (ಹೆಸರುಗಳನ್ನು) ಬಳಸಲಾಗಿದೆ. ಹೀಗಾಗಿ ವೆಬ್​ಸಿರೀಸ್​ ಪ್ರಸಾರವನ್ನು ನಿಲ್ಲಿಸಬೇಕು ಎಂಬ ಒತ್ತಾಯ ಜೋರಾಗಿ ಕೇಳಿಬಂದಿತ್ತು.

ತಪ್ಪು ತಿದ್ದಿಕೊಂಡ ನೆಟ್​ಫ್ಲಿಕ್ಸ್​:ಈ ಬಗ್ಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದ ಬಳಿಕ IC814 ಸರಣಿಯಲ್ಲಿ ಆದ ಲೋಪಗಳನ್ನು ತಿದ್ದಿಕೊಳ್ಳಲಾಗುವುದು ಎಂದು ನೆಟ್​ಫ್ಲಿಕ್ಸ್​ ಹೇಳಿದೆ. ನೆಟ್​ಫ್ಲಿಕ್ಸ್​ ಇಂಡಿಯಾದ ಕಂಟೆಂಟ್ ವೈಸ್ ಪ್ರೆಸಿಡೆಂಟ್ ಮೋನಿಕಾ ಶೇರ್ಗಿಲ್ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, 1999 ರ ವಿಮಾನ ಅಪಹರಣದ ಬಗ್ಗೆ ಮಾಹಿತಿ ಇಲ್ಲದ ಪ್ರೇಕ್ಷಕರ ಅನುಕೂಲಕ್ಕಾಗಿ ಭಯೋತ್ಪಾದಕರ ನಿಜ ಹೆಸರಿನ ಜೊತೆಗೆ ಅವರ ಕೋಡ್​ ನೇಮ್​ಗಳನ್ನು ಸಹ ಪ್ರದರ್ಶಿಸುತ್ತಿದ್ದೇವೆ. ಕೋಡ್​ ನೇಮ್​ಗಳು ನಿಜವಾದ ಆಪರೇಷನ್​ನಲ್ಲಿ ಬಳಸಲಾಗಿತ್ತು ಎಂದಿದ್ದಾರೆ. ಇದೀಗ ಸರಣಿಯಲ್ಲಿ ಭಯೋತ್ಪಾದಕರ ಹೆಸರುಗಳನ್ನು ಪ್ರದರ್ಶಿಸಲಾಗುತ್ತಿದೆ.

ಸಿರೀಸ್​​ನಲ್ಲಿನ ಲೋಪಗಳೇನು?:ವೆಬ್​ ಸಿರೀಸ್​​ನಲ್ಲಿ ವಿಮಾನ ಅಪಹರಣ ಮಾಡಿದ ಉಗ್ರರಾದ ಸನ್ನಿ ಅಹ್ಮದ್ ಖಾಜಿ, ಮಿಸ್ತ್ರಿ ಜೂಹುರ್ ಇಬ್ರಾಹಿಂ, ಶಾಖಿರ್, ಶಾಹಿದ್ ಅಖ್ತರ್ ಶಯೀದ್, ಇಬ್ರಾಹಿಂ ಅಥರ್ ಬಳಸಲಾಗಿಲ್ಲ. ಈ ಹೆಸರುಗಳನ್ನು ಬೇರೆ ರೀತಿಯಾಗಿ ಕರೆಯಲಾಗಿದೆ. ಹಿಂದೂ ಕೋಡ್​ ಆಗಿ ಅಪಹರಣಕಾರರ ಪಾತ್ರಗಳಿಗೆ ಶಂಕರ್​ ಮತ್ತು ಭೋಲಾ ಎಂದು ಕರೆಯಲಾಗಿದೆ. ಭಯೋತ್ಪಾದಕರನ್ನು ವೈಭವೀಕರಿಸಲಾಗಿದೆ. ಅಪಹರಣ ಪ್ರಕರಣದಲ್ಲಿ ಪಾಕಿಸ್ತಾನ, ಐಎಸ್​ಐಗಳ ಕೈವಾಡ ಇಲ್ಲ ಎಂಬಂತೆ ಚಿತ್ರೀಕರಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ.

ಅಲ್ಲದೇ ಘಟನೆ ನಡೆದಾಗ ಭಯೋತ್ಪಾದಕರೊಂದಿಗೆ ಸಂಧಾನ ನಡೆಸಿದ ಅಜಿತ್ ದೋವಲ್ ಹಾಗೂ ಇತರರನ್ನು ಹೆಚ್ಚಾಗಿ ತೋರಿಸಿಲ್ಲ. ಸಂಧಾನದ ಘಟನೆಯನ್ನು ಹಾಸ್ಯದ ಮಾದರಿಯಲ್ಲಿ ಚಿತ್ರಿಸಲಾಗಿದೆ. ವಿಮಾನ ಹೈಜಾಕ್​ ಘಟನೆಯ ನಿಜವಾದ ಸತ್ಯವನ್ನೇ ಮರೆಮಾಚುವ ರೀತಿ ಸಿರೀಸ್​​ನಲ್ಲಿ ತೋರಿಸಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ವೆಬ್ ಸರಣಿಯ ಪ್ರಸಾರ ನಿಲ್ಲಿಸಬೇಕೆಂದು ಒತ್ತಾಯಿಸಿ ದೆಹಲಿ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಲಾಗಿದೆ.

ಇದನ್ನೂ ಓದಿ:'ಪಾರು ಪಾರ್ವತಿ' ಚಿತ್ರಕ್ಕಾಗಿ 1 ತಿಂಗಳಲ್ಲಿ 10 ಕೆ.ಜಿ ತೂಕ ಇಳಿಸಿಕೊಂಡ ಬಿಗ್ ಬಾಸ್ ಖ್ಯಾತಿಯ ದೀಪಿಕಾದಾಸ್ - Deepika Das

Last Updated : Sep 4, 2024, 2:21 PM IST

ABOUT THE AUTHOR

...view details