ದಾವಣಗೆರೆ: "ಯಾವುದೇ ಲಿಂಗಾಯತ ಸಭೆ ನಡೆದಿಲ್ಲ, ಕಚೇರಿ ಉದ್ಘಾಟನೆಗೆ ನನ್ನ ಬೀಗರನ್ನೇ ನಾನು ಕರೆದಿಲ್ಲ. ಅಂತಹದ್ದರಲ್ಲಿ ಯತ್ನಾಳ್ ಟೀಂ, ಮತ್ತೊಂದು ಟೀಂ ಬರುತ್ತಾ?" ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಮೂಡಿದ್ದ ಗೊಂದಲಕ್ಕೆ ತೆರೆ ಎಳೆದರು.
ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, "ರಾಜ್ಯಧ್ಯಕ್ಷರ ಬದಲಾವಣೆ ಬಗ್ಗೆ ಪಕ್ಷ, ಕಮಿಟಿ, ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ. ನಾಲ್ಕು ಗೋಡೆ ಮಧ್ಯೆ ತೀರ್ಮಾನ ಆಗುತ್ತೆ. ಯಾವುದೇ ಲಿಂಗಾಯತ ಸಭೆ ನಡೆದಿಲ್ಲ. ದೆಹಲಿ ಕಚೇರಿ ಉದ್ಘಾಟನೆ ವಿಚಾರಕ್ಕೆ ಉಪ್ಪು ಹುಳಿ ಖಾರ ಬೆರೆಸಲಾಗಿದೆ. ಕೇಂದ್ರ ಸಚಿವರನ್ನು ಮಾತ್ರ ನನ್ನ ಕಚೇರಿ ಉದ್ಘಾಟನೆಗೆ ಕರೆದಿದ್ದೇನೆ. ಇಲ್ಲಿ ಯಾರನ್ನೂ ಕರೆದಿಲ್ಲ. ಪಕ್ಕದಲ್ಲಿರುವ ನನ್ನ ಬೀಗರನ್ನೇ ಕರೆದಿಲ್ಲ. ಅಂತಹದ್ದರಲ್ಲಿ ಯತ್ನಾಳ್ ಟೀಂ, ಮತ್ತೊಂದು ಟೀಂ ಸಭೆ ಮಾಡಲು ಬರುತ್ತೆ ಅಂತಾ ಉಪ್ಪು ಹುಳಿ ಖಾರ ಹಾಕಿದ್ದಾರೆ. ಪಕ್ಷದಲ್ಲಿ ಎಲ್ಲವೂ ಸರಿಯಾಗಲಿದೆ" ಎಂದರು.
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿಗೆ ಪ್ರತಿಕ್ರಿಯೆ : ಮೋದಿ ದೂರದೃಷ್ಟಿ ಚಿಂತನೆಯಿಂದ ದೆಹಲಿಯಲ್ಲಿ ನಾವು ಗೆದ್ದಿದ್ದೇವೆ. ದೆಹಲಿ ಜನ ತೀರ್ಮಾನ ಮಾಡಿ ಗೆಲ್ಲಿಸಿದ್ದಾರೆ. ನನಗೂ ಒಂದು ಕ್ಷೇತ್ರ ಉಸ್ತುವಾರಿ ಕೊಟ್ಟಿದ್ದರು, ಆ ಕ್ಷೇತ್ರವು ಗೆದ್ದಿದೆ. ಕಾಂಗ್ರೆಸ್ನವರು ಇಲ್ಲಸಲ್ಲದ ಆರೋಪ ಮಾಡುತ್ತಾರೆ. ಒಳ್ಳೆಯ ಬಜೆಟ್ ಮಂಡನೆ ಆಗಿದೆ. ಅದಕ್ಕೂ ಆರೋಪ ಮಾಡುತ್ತಿದ್ದಾರೆ. ಕಣ್ಣಿನ ಪೊರೆ ತೆಗೆದು ನೋಡಬೇಕಿದೆ. ಇವಿಎಂ ಬಗ್ಗೆ ಆರೋಪ ಮಾಡ್ತಿದ್ದಾರೆ. ಕೈಲಾಗದವರು ಮೈ ಪರಚಿಕೊಂಡಂತೆ ಆಗಿದೆ. ಅನೇಕ ರೈಲ್ವೆ ಯೋಜನೆ ನೀಡಲಾಗಿದೆ. ಈ ಬಾರಿ ಬಜೆಟ್ನಲ್ಲಿ ಅತೀ ಹೆಚ್ಚು ಹಣ ನೀಡಲಾಗಿದೆ. ದಾವಣಗೆರೆ-ಚಿತ್ರದುರ್ಗ-ತುಮಕೂರು ರೈಲ್ವೆ ಮಾರ್ಗ ಮುಗಿಸುತ್ತೇವೆ. ನರೇಂದ್ರ ಮೋದಿಯವರು ಕಾರ್ಯವೈಖರಿ ಜನಕ್ಕೆ ಇಷ್ಟ ಆಗಿದೆ" ಎಂದರು.
ಇದನ್ನೂ ಓದಿ: ಹೈಕಮಾಂಡ್ ಭೇಟಿಗೆ ಸಿಗದ ಅವಕಾಶ: ದೆಹಲಿಯಿಂದ ಯತ್ನಾಳ್ ಟೀಂ ವಾಪಸ್, ಮುಂದಿನ ನಡೆ ಏನು?