ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಬಗೆಯ ಸಿನಿಮಾಗಳು ಸೆಟ್ಟೇರುತ್ತವೆ. ಟ್ರೇಲರ್, ಟೀಸರ್, ಗ್ಲಿಂಪ್ಸ್ ಬಿಡುಗಡೆ ಆಗೋದು ಹೊಸತೇನಲ್ಲ. ಆದ್ರೆ ಬಿಡುಗಡೆ ಆದ ಕೆಲವೇ ಕೆಲವು ಸಿನಿಮಾಗಳ ಟೀಸರ್, ಟ್ರೇಲರ್ಗಳು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶ ಕಾಣುತ್ತವೆ. ಅದರಂತೆ ಇದೀಗ ಸಿನಿಪ್ರಿಯರ ಗಮನ ಸೆಳೆದಿರುವ ಟೀಸರ್ ''ವೃತ್ತ''. ವೃತ್ತ ಅಂದ ತಕ್ಷಣ ಒಂದು ಸರ್ಕಲ್ನಲ್ಲಿ ನಡೆಯೋ ಸ್ಟೋರಿ ಇರಬೇಕು ಅಂತಾ ಅನಿಸೋದು ಸಹಜ. ಆದ್ರೆ ಈ ವೃತ್ತ ಸಿನಿಮಾದ ಕಾನ್ಸೆಪ್ಟ್ ಬೇರೇನೆ ಇದೆ.
ಸಿನಿಮಾ ಕಂಪ್ಲೀಟ್ ಮಾಡಿ ಟೀಸರ್ ಬಿಡುಗಡೆ ಮಾಡಿರೋ ವೃತ್ತ ತಂಡಕ್ಕೆ ನಟ ನಿನಾಸಂ ಸತೀಶ್ ಅವರ ಸಾಥ್ ಸಿಕ್ಕಿದೆ. ಸಿನಿಮಾ ಟೀಸರ್, ಟ್ರೇಲರ್ ನೋಡಿ ಚಿತ್ರವನ್ನು ತಮ್ಮದೇ ಬ್ಯಾನರ್ ಅಡಿಯಲ್ಲಿ ಪ್ರೆಸೆಂಟ್ ಮಾಡೋದಕ್ಕೆ ಸತೀಶ್ ನಿರ್ಧಾರ ಮಾಡಿದ್ದಾರೆ. ಟೀಸರ್ ಲಾಂಚ್ಗೆ ಬಂದು ಹೊಸಬರ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ.
ನಟ ನೀನಾಸಂ ಸತೀಶ್ ಮಾತನಾಡಿ, ಹೊಸ ತಂಡವಾದ್ರು ಸಹ ಎಲ್ಲಾ ರೀತಿಯಲ್ಲೂ ತಯಾರಿ ಮಾಡಿಕೊಂಡೆ ಬಂದಿದ್ದಾರೆ ಅನ್ನೋದು ಟೀಸರ್ ನೋಡಿದ್ರೆ ತಿಳಿಯುತ್ತದೆ. ಹೊಸಬರ ಸಿನಿಮಾ ಅನ್ನೋ ಕಾರಣಕ್ಕೆ ಬಂದಿಲ್ಲ. ಸಿನಿಮಾ ಚೆನ್ನಾಗಿದೆ ಅನ್ನೋ ಕಾರಣಕ್ಕೆ ಸಪೋರ್ಟ್ ಮಾಡುತ್ತಿದ್ದೇನೆ. ಸದ್ಯ ಟೀಸರ್ ಬಿಡುಗಡೆ ಮಾಡಿರುವ ತಂಡ ಆದಷ್ಟು ಬೇಗ ಟ್ರೇಲರ್ ಲಾಂಚ್ ಮಾಡಿ ಇದೇ ವರ್ಷಾಂತ್ಯದಲ್ಲಿ ತೆರೆಗೆ ಬರೋ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಚಿತ್ರದ ತಾರಾಗಣದಲ್ಲಿ ನಾಯಕನಾಗಿ ಮಾಹಿರ್ ಮೊಹಿದ್ದೀನ್, ಚೈತ್ರಾ ಜೆ ಆಚಾರ್, ಹತಿಣಿ ಸುಂದರ ರಾಜನ್ ಅಭಿನಯಿಸಿದ್ದಾರೆ. ನಾಯಕನಾಗಿ ಕಾಣಿಸಿಕೊಳ್ತಿರೋ ಮಾಹಿರ್ ಸಾಕಷ್ಟು ವರ್ಷಗಳಿಂದ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಟೀಸರ್ನಲ್ಲಿ ಮಾಹಿರ್ ಅಭಿನಯ ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲಿ ಅದ್ಬುತ ಕಲಾವಿದನಾಗಿ ಚಿತ್ರರಂಗದಲ್ಲಿ ಉಳಿದುಕೊಳ್ಳುವ ಎಲ್ಲಾ ಭರವಸೆಗಳಿವೆ.