ಕರ್ನಾಟಕ

karnataka

ETV Bharat / entertainment

ಯಶ್​​​ 'ಟಾಕ್ಸಿಕ್'​​ಗೆ ನಯನತಾರಾ ಸೇರಿ ಹಲವರ ಎಂಟ್ರಿ: ನಿರ್ಮಾಪಕರ ಸ್ಪಷ್ಟನೆ ಹೀಗಿದೆ - Nayanthara Entry To Toxic - NAYANTHARA ENTRY TO TOXIC

ಯಶ್​ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್​​ನಲ್ಲಿ ಐಶ್ವರ್ಯಾ ರೈ ಬಚ್ಚನ್​, ಕರೀನಾ ಕಪೂರ್ ಖಾನ್​​, ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಶಿ ಅತಿಥಿ ಪಾತ್ರ ಮಾಡಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕೆವಿಎನ್ ಪ್ರೊಡಕ್ಷನ್​​ನ ಕಾರ್ಯಕಾರಿ ನಿರ್ಮಾಪಕ ಸುಪ್ರೀತ್ ಪ್ರತಿಕ್ರಿಯಿಸಿದ್ದಾರೆ.

Yash starrer 'Toxic' muhurat ceremony
ಯಶ್​​​ ನಟನೆಯ 'ಟಾಕ್ಸಿಕ್'​​ ಮುಹೂರ್ತ ಸಮಾರಂಭ (ETV Bharat)

By ETV Bharat Entertainment Team

Published : Sep 4, 2024, 1:08 PM IST

ಕೆವಿಎನ್ ಪ್ರೊಡಕ್ಷನ್​​ನ ಕಾರ್ಯಕಾರಿ ನಿರ್ಮಾಪಕ ಸುಪ್ರೀತ್ ಮಾತು (ETV Bharat)

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್​​​'. ಕನ್ನಡದ ಬ್ಲಾಕ್​​​ಬಸ್ಟರ್ ಚಿತ್ರಗಳಾದ ಕೆಜಿಎಫ್​​​ 1 ಮತ್ತು ಕೆಜಿಎಫ್​ ಚಾಪ್ಟರ್​​ 2 ಚಿತ್ರಗಳ ಮೂಲಕ ವಿಶ್ವಾದ್ಯಂತ ಗುರುತಿಸಿಕೊಂಡಿರುವ ರಾಕಿಂಗ್​ ಸ್ಟಾರ್​​ ಯಶ್​ ಅಭಿನಯದ ಮುಂದಿನ ಸಿನಿಮಾ ಎಂದ ಮೇಲೆ ಕುತೂಹಲ, ನಿರೀಕ್ಷೆಗಳು ಹೆಚ್ಚೇ ಅಲ್ವೇ?. ಬರುವ ವರ್ಷ ತೆರೆಕಾಣಲಿರುವ ಈ ಸಿನಿಮಾ ಬಗ್ಗೆ ಸಿನಿಪ್ರಿಯರೂ ಸೇರಿದಂತೆ ಸಿನಿಗಣ್ಯರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಪ್ಯಾನ್​ ಇಂಡಿಯಾ ಪ್ರಾಜೆಕ್ಟ್​​​ 'ಟಾಕ್ಸಿಕ್​​' ಮುಹೂರ್ತ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಕಳೆದ ಡಿಸೆಂಬರ್​​ನಲ್ಲಿ ಸಿನಿಮಾ ಅನೌನ್ಸ್​​ ಆಗಿ ನಿರ್ದೇಶಕರು ಮತ್ತು ನಿರ್ಮಾಣ ತಂಡ ಘೋಷಣೆಯಾಗಿತ್ತು. ಅದಾದ ನಂತರ ಯಾವುದೇ ಅಪ್ಡೇಟ್ಸ್ ಕೊಡದ ಚಿತ್ರತಂಡ ಕೆಲವು ದಿನಗಳ ಹಿಂದಷ್ಟೇ ಶೂಟಿಂಗ್​​ ಪ್ರಾರಂಭಿಸಿದೆ. ಪ್ಯಾನ್​ ಇಂಡಿಯಾ ಸ್ಟಾರ್ ಯಶ್​ ಜೊತೆ ತೆರೆ ಹಂಚಿಕೊಳ್ಳುವ ನಾಯಕ ನಟಿ ಯಾರು ಎಂಬ ಕುತೂಹಲ ಈ ಮೊದಲಿನಿಂದಲೂ ಇದೆ. ಐಶ್ವರ್ಯಾ ರೈ ಬಚ್ಚನ್​, ಕರೀನಾ ಕಪೂರ್ ಖಾನ್​​, ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಶಿ ಅವರ ಹೆಸರುಗಳು ಈ ಪ್ರೊಜೆಕ್ಟ್​ಗಳೊಂದಿಗೆ ಕೇಳಿಬರುತ್ತಿದೆ. ಚಿತ್ರತಂಡ ಅಧಿಕೃತ ಮಾಹಿತಿ ಕೊಡೋವರೆಗೂ ಇವೆಲ್ಲವೂ ವದಂತಿಯಷ್ಟೇ.​

'ಟಾಕ್ಸಿಕ್' ಅಖಾಡಕ್ಕೆ ಸೌತ್​ ಸಿನಿಮಾ ಇಂಡಸ್ಟ್ರಿಯ ಲೇಡಿ ಸೂಪರ್​ ಸ್ಟಾರ್​​ ನಯನತಾರಾ ಎಂಟ್ರಿ ಕೊಡಲಿದ್ದಾರೆ ಮತ್ತು 1,000 ಜನರೊಂದಿಗೆ ಬೆಂಗಳೂರಿನಲ್ಲಿ ಶೂಟಿಂಗ್​ ನಡೆಸಲಾಗುತ್ತಿದೆ ಎಂಬ ವದಂತಿಗಳು ದೊಡ್ಡ ಮಟ್ಟದಲ್ಲೇ ಹರಡಿವೆ. ಈ ಹಿನ್ನೆಲೆಯಲ್ಲಿ 'ಈಟಿವಿ ಭಾರತ' ವರದಿಗಾರರು ಚಿತ್ರದ ಹಿಂದಿರುವ ಕೆವಿಎನ್ ಪ್ರೊಡಕ್ಷನ್​​ನ ಕಾರ್ಯಕಾರಿ ನಿರ್ಮಾಪಕ ಸುಪ್ರೀತ್ ಅವರನ್ನು ಸಂಪರ್ಕಿಸಿ ಸ್ಪಷ್ಟನೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆ ಪ್ರಕರಣ; ಕೋರ್ಟ್​ಗೆ 231 ಸಾಕ್ಷ್ಯಗಳನ್ನೊಳಗೊಂಡ 3,991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ - Renukaswamy Murder Case

ವರದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕೆವಿಎನ್ ಪ್ರೊಡಕ್ಷನ್​​ನ ಕಾರ್ಯಕಾರಿ ನಿರ್ಮಾಪಕ ಸುಪ್ರೀತ್, ''ಸಮಯ ಬಂದಾಗ ನಾಯಕ ನಟಿಯ ಮಾಹಿತಿ ಕೊಡಲಿದ್ದಾರೆ. ಅವರೇ ಸೂಕ್ತ ಮಾಹಿತಿ ಒದಗಿಸಲಿದ್ದಾರೆ. ಸಿನಿಮಾ ಶೂಟಿಂಗ್​​ ನಡೆಯುತ್ತಿದೆ ಎಂಬುದನ್ನಷ್ಟೇ ಹೇಳಬಲ್ಲೆ. ಎಲ್ಲೂ ಶಿಫ್ಟ್​​ ಆಗಿಲ್ಲ. ಬೆಂಗಳೂರಿನಲ್ಲೇ ಶೂಟಿಂಗ್​ ನಡೆಯುತ್ತಿದೆ. ಉಳಿದ ವಿಚಾರಗಳನ್ನು ಈಗಲೇ ಹೇಳಲು ಸಾಧ್ಯವಿಲ್ಲ'' ಎಂದು ತಿಳಿಸಿದರು.

ಇದನ್ನೂ ಓದಿ:'ಪಾರು ಪಾರ್ವತಿ' ಚಿತ್ರಕ್ಕಾಗಿ 1 ತಿಂಗಳಲ್ಲಿ 10 ಕೆ.ಜಿ ತೂಕ ಇಳಿಸಿಕೊಂಡ ಬಿಗ್ ಬಾಸ್ ಖ್ಯಾತಿಯ ದೀಪಿಕಾದಾಸ್ - Deepika Das

ಬೆಂಗಳೂರಿನ ಬೃಹತ್​​​ ಸೆಟ್​​ನಲ್ಲೇ ಮುಹೂರ್ತ ಕಾರ್ಯಕ್ರಮ ನಡೆದಿದೆ. ಇದೀಗ ಶೂಟಿಂಗ್​​ ಕೂಡಾ ಅಲ್ಲೇ ನಡೆಯುತ್ತಿದೆ. ಕೆವಿನ್ ನಿರ್ಮಾಣ ಸಂಸ್ಥೆ 19 ಪ್ರೊಜೆಕ್ಟ್​ ಅನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಡ್ರಗ್ ಮಾಫಿಯಾ ಕಥೆಯನ್ನೊಳಗೊಂಡ ಈ ಚಿತ್ರಕ್ಕೆ ಗೀತು ಮೋಹನ್​ ದಾಸ್​ ಆ್ಯಕ್ಷನ್​​ ಕಟ್​ ಹೇಳುತ್ತಿದ್ದಾರೆ.

ABOUT THE AUTHOR

...view details