ಹೈದರಾಬಾದ್ (ತೆಲಂಗಾಣ): ಅಕ್ಕಿನೇನಿ ನಾಗಾರ್ಜುನ ಮುಂಬೈ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಾಗ ಅನಿರೀಕ್ಷಿತ ಘಟನೆಯೊಂದು ನಡೆದಿತ್ತು. ಏರ್ಪೋರ್ಟ್ನಿಂದ ನಾಗಾರ್ಜುನ ಹೊರಗೆ ಬರುತ್ತಿರುವುದನ್ನು ಕಂಡು ಅಭಿಮಾನಿಯೊಬ್ಬರು ಅವರನ್ನು ಭೇಟಿ ಮಾಡಲು ಹತ್ತಿರಕ್ಕೆ ಬಂದಿದ್ದರು. ಆದರೆ, ಇದನ್ನು ಗಮನಿಸಿದ ಅಂಗರಕ್ಷಕ ಆ ಅಭಿಮಾನಿಯನ್ನು ಕ್ಷಣಾರ್ಧದಲ್ಲಿ ಪಕ್ಕಕ್ಕೆ ಎಳೆದಿದ್ದನು. ಇದರಿಂದ ಆ ಅಭಿಮಾನಿ ಕೆಳಗೆ ಬಿದ್ದಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ನಾಗಾರ್ಜುನ್: ಇಷ್ಟಕ್ಕೂ ಆಗಿದ್ದೇನು ಗೊತ್ತಾ? - Nagarjuna Apologises - NAGARJUNA APOLOGISES
ಇತ್ತಿಚೇಗೆ ಮುಂಬೈ ಏರ್ಪೋರ್ಟ್ನಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಈ ಸಂಬಂಧ ಟಾಲಿವುಡ್ ಕಿಂಗ್ ನಾಗಾರ್ಜುನ್ ಆ ಅಭಿಮಾನಿಯಲ್ಲಿ ಕ್ಷಮೇ ಯಾಚಿಸಿದ್ದಾರೆ. ಅಷ್ಟಕ್ಕೂ ಆ ಘಟನೆ ನಡೆದಿದ್ದೇನು ಎಂಬುದನ್ನ ತಿಳಿಯೋಣಾ ಬನ್ನಿ..
Published : Jun 24, 2024, 12:45 PM IST
ಮಾನವೀಯತೆ ಏನಾಯಿತು ಎಂದು ನೆಟ್ಟಿಗರು ನಾಗಾರ್ಜುನ್ ಅವರನ್ನು ಪ್ರಶ್ನಿಸಿದ್ದರು. ಆದರೆ, ನಾಗಾರ್ಜುನ ತನ್ನ ಅಂಗರಕ್ಷಕ ಅಭಿಮಾನಿಯನ್ನು ಪಕ್ಕಕ್ಕೆ ಎಳೆದುಕೊಂಡು ಹೋದ ಘಟನೆಯನ್ನು ನಾನು ನಿಜವಾಗಿ ನೋಡಿರಲಿಲ್ಲ. ಇತ್ತೀಚೆಗಷ್ಟೇ ಈ ವಿಷಯ ಗಮನಕ್ಕೆ ಬಂದಿದ್ದರಿಂದ ಪ್ರತಿಕ್ರಿಯಿಸಿದ್ದಾರೆ. "ಈ ಘಟನೆ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಹೀಗಾಗಬಾರದಿತ್ತು. ನಾನು ಆ ಅಭಿಮಾನಿಗೆ ಕ್ಷಮೆಯಾಚಿಸುತ್ತೇನೆ. ಮುಂದೆ ಹೀಗಾಗದಂತೆ ಸೂಕ್ತ ಕ್ರಮಕೈಗೊಳ್ಳುತ್ತೇನೆ" ಎಂದು ಟಾಲಿವುಡ್ ನಟ ನಾಗರ್ಜುನ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.