'ಬಿಗ್ ಬಾಸ್ ಸೀಸನ್ 11'ರ ನಾಲ್ಕನೇ ವಾರಾಂತ್ಯದ ಎಲಿಮಿನೇಷನ್ ಬಗೆಗಿನ ಕುತೂಹಲ ಬಹಳಾನೇ ಇತ್ತು. ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ಎಪಿಸೋಡ್ಗಳನ್ನು ಈ ಬಾರಿ ಕಿಚ್ಚ ಸುದೀಪ್ ಅವರು ನಡೆಸಿಕೊಟ್ಟಿಲ್ಲ. ಬದಲಾಗಿ ಚಂದನವನದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಮತ್ತು ಜನಪ್ರಿಯ ಹೋಸ್ಟ್ ಸೃಜನ್ ಲೋಕೇಶ್ ಅವರುಗಳು ತಮ್ಮದೇ ಶೈಲಿಯಲ್ಲಿ ನಡೆಸಿಕೊಟ್ಟರು. ನಿನ್ನೆ ಸಂಚಿಕೆಯ ಕೊನೆಯಲ್ಲಿ ತಿಳಿದು ಬರಬೇಕಿದ್ದ ಎಲಿಮಿನೇಷನ್ ಸ್ಪರ್ಧಿಯ ಹೆಸರನ್ನು ಬಿಗ್ ಬಾಸ್ ಬಹಿರಂಗಪಡಿಸದೇ ಇಂದಿನ ಸಂಚಿಕೆಗೆ ಕಾಯ್ದಿರಿಸಿದ್ದಾರೆ. ಆದ್ರೆ ಓರ್ವ ಸ್ಪರ್ಧಿ ಹೊರಹೋಗುವ ಮುನ್ನವೇ ಮನೆಯಲ್ಲಿ ದೊಡ್ಡ ಮಟ್ಟದ ವಾದ ವಿವಾದ ನಡೆದಿದೆ.
''ತ್ರಿವಿಕ್ರಮ್-ಮೋಕ್ಷಿತಾ ಮಧ್ಯೆ ಹೊತ್ತಿಕೊಳ್ತಾ ಬೆಂಕಿ?'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ. ದೃಶ್ಯದಲ್ಲಿ ಕರುಣಾಮಯಿಯಂತಿದ್ದ ಪಾರು ಖ್ಯಾತಿಯ ಮೋಕ್ಷಿತಾ ಅವರು ಮನೆಯಲ್ಲಿ ಇದೇ ಮೊದಲ ಬಾರಿ ತಾಳ್ಮೆ ಕಳೆದುಕೊಂಡು, ತಮ್ಮ ಆಕ್ರೋಶ ಹೊರಹಾಕಿರುವುದನ್ನು ಕಾಣಬಹುದು. ತ್ರಿವಿಕ್ರಮ್ ಅವರೊಂದಿಗೆ ಮಾತಿನ ಚಕಮಕಿ ಜೋರಾಗೇ ನಡೆದಿದೆ.
ಕಳೆದ ರಾತ್ರಿ ಪ್ರಸಾರವಾದ ಸಂಚಿಕೆಯಲ್ಲಿ ಎಲಿಮಿನೇಷನ್ಗೆ ನಾಮಿನೇಷನ್ ಆದವರ ಪೈಕಿ ಒಬ್ಬೊಬ್ಬರನ್ನೇ ಸೇವ್ ಮಾಡುತ್ತಾ ಬರಲಾಯಿತು. ಕೊನೆಯಲ್ಲಿ ಮೋಕ್ಷಿತಾ ಮತ್ತು ಹಂಸ ಅವರುಗಳು ಉಳಿದಿದ್ದಾರೆ. ಈ ಇಬ್ಬರಲ್ಲಿ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿದು ಬರಲಿದೆ. ಕೊನೆಯಲ್ಲಿ ಬಿಗ್ ಬಾಸ್ ಈ ಇಬ್ಬರ ಬಳಿಯೂ ಅಭಿಪ್ರಾಯ ಕೇಳಿದಾಗ, ಓರ್ವರನ್ನು ನೇರ ಮಾಮಿನೇಟ್ ಮಾಡಲು ತಿಳಿಸಿದಾಗ ಮೋಕ್ಷಿತಾ ಅವರು ತ್ರಿವಿಕ್ರಮ್ ಆಟದ ಬಗ್ಗೆ ಮಾತನಾಡಿದ್ದರು. ಸ್ಟ್ರಾಟಜಿ ನಡೆಯುತ್ತಿದೆ ಎಂದು ತಿಳಿಸಿ ಅವರ ಹೆಸರನ್ನು ಸೂಚಿಸಿದ್ದರು. ಅಲ್ಲಿಗೆ ಕಳೆದ ಎಪಿಸೋಡ್ ಮುಕ್ತಾಯಗೊಂಡಿದೆ.