ಕರ್ನಾಟಕ

karnataka

ETV Bharat / entertainment

ಸಮಾನತೆಯ ಸಂದೇಶ ಜೊತೆ ಮೆಹಬೂಬಾ ರಿಲೀಸ್​​ ಡೇಟ್ ಅನೌನ್ಸ್ - ಸ್ಯಾಂಡಲ್​​ವುಡ್​​ ಹೊಸ ಸಿನಿಮಾ

ಬಿಗ್​ಬಾಸ್ ವಿನ್ನರ್ ಶಶಿ ಅಭಿನಯದ ಮೆಹಬೂಬಾ ಚಿತ್ರ ಮಾರ್ಚ್ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಮೆಹಬೂಬಾ ರಿಲೀಟ್ ಡೇಟ್ ಅನೌನ್ಸ್
ಮೆಹಬೂಬಾ ರಿಲೀಟ್ ಡೇಟ್ ಅನೌನ್ಸ್

By ETV Bharat Karnataka Team

Published : Feb 19, 2024, 12:05 PM IST

ಬಿಗ್​​ಬಾಸ್ ಹಾಗೂ ಮಾಡರ್ನ್ ರೈತ ಶಶಿ ಅಭಿನಯದ ಚಿತ್ರ 'ಮೆಹಬೂಬಾ'. ಈಗಾಗಲೇ ಸ್ಯಾಂಡಲ್​​ವುಡ್​​ನಲ್ಲಿ ಕೆಲವೊಂದು ವಿಚಾರವಾಗಿ ಗಮನ ಸೆಳೆಯುತ್ತಿರುವ ಮೆಹಬೂಬಾ ಚಿತ್ರ ಫೈನಲಿ ಪ್ರೇಕ್ಷಕ ಮುಂದೆ ಬರೋದಕ್ಕೆ ಸಜ್ಜಾಗಿದೆ‌. ಚಿತ್ರದಲ್ಲಿ ಶಶಿ ಜೋಡಿಯಾಗಿ ಗೊಂಬೆಗಳ ಲವ್ ಚಿತ್ರದ ಪಾವನಾ ಜೊತೆಯಾಗಿದ್ದಾರೆ‌. ಈಗಾಗಲೇ ಎರಡು ಹಾಡುಗಳಿಂದ್ಲೇ ಸದ್ದು ಸುದ್ದಿ ಮಾಡಿರೋ ಸಿನಿಮಾ ಇದು. ಹಲವು ವಿಶೇಷ ಮತ್ತು ವಿಶಿಷ್ಠ ವಿಚಾರಗಳಿಂದ ಕುತೂಹಲ ಮೂಡಿಸಿದ್ದ ಸಿನಿಮಾ ರಿಲೀಸ್ ಡೇಟ್ ಅನ್ನು ಚಿತ್ರತಂಡ ವಿಶೇಷವಾಗಿ ಅನೌನ್ಸ್ ಮಾಡಿ ಗಮನ ಸೆಳೆದಿದೆ.

ಮೆಹಬೂಬಾ ರಿಲೀಟ್ ಡೇಟ್ ಅನೌನ್ಸ್

ನಾಯಕ ಶಶಿ ಹಿಂದೂ ಹುಡುಗನಂತೆ ಮತ್ತು ನಾಯಕಿ ಪಾವನಾ ಗೌಡ ಮುಸ್ಲಿಂ ಯುವತಿಯ ಧಿರಿಸಿನಲ್ಲಿ ಸರ್ವ ಧರ್ಮ ಸಮಾನತೆಯ ಸಾರುವ ವಿಷಯ ಹೇಳುತ್ತಾ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದಾರೆ. ವಿಶೇಷ ಎಂದರೆ ನಾಯಕ ಮತ್ತು ನಾಯಕಿ ಕೈಯಲ್ಲಿ ರಿಲೀಸ್ ಡೇಟ್ ಬೋರ್ಡ್ ಇಟ್ಟುಕೊಂಡು ವಿಧಾನಸೌಧ, ನ್ಯಾಯಾಲಯ, ಪೊಲೀಸ್ ಠಾಣೆ, ಮಸೀದಿ, ಮಾರ್ಕೆಟ್, ಮಂದಿರದ ಬಳಿ ಸರ್ವ ಧರ್ಮ ಸಮಾನತೆ ಸಾರಿ ಜನರನ್ನು ಥಿಯೇಟರ್​ಗೆ ಕರೆದಿದ್ದಾರೆ. ವಿಶಿಷ್ಠ ರೀತಿಯಲ್ಲಿ ಪ್ರಚಾರ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೆಹಬೂಬಾ ರಿಲೀಟ್ ಡೇಟ್ ಅನೌನ್ಸ್

ನಿಮಗೆಲ್ಲ ಗೊತ್ತಿರೋ ಹಾಗೇ, ಕನ್ನಡ ಬಿಗ್ ಬಾಸ್ ಸೀಸನ್ 6ರಲ್ಲಿ ಸಕತ್ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ, ಮಾಡರ್ನ್ ರೈತ ಎಂಬ ಹೆಸರಿನಿಂದ ಕನ್ನಡಿಗರ ಮನಗೆದ್ದು ಬಿಗ್ ಬಾಸ್ ಟ್ರೋಫಿಯನ್ನು ಎತ್ತಿ ಹಿಡಿದಿದವರು ಯುವ ರೈತ ಶಶಿ ಕುಮಾರ್. 'ಮೆಹಬೂಬಾ' ಸಿನಿಮಾ ಮೂಲಕ ಮಾಡರ್ನ್ ರೈತ ಶಶಿ ಹೀರೊ ಆಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ದಕ್ಷ್ ಎಂಟರ್​ಟೈನ್ಮೆಂಟ್ಸ್ ಸಹಯೋಗದಲ್ಲಿ ಬಾಲಾಜಿ ಮೋಷನ್ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ ಶಶಿ ನಟನೆಯೊಂದಿಗೆ ನಿರ್ಮಾಣವನ್ನೂ ಮಾಡಿದ್ದಾರೆ. ಅನೂಪ್ ಆಂಟೋನಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಮೆಹಬೂಬಾ ರಿಲೀಟ್ ಡೇಟ್ ಅನೌನ್ಸ್

ಕೇರಳದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಮೆಹಬೂಬಾ ಚಿತ್ರವನ್ನ ನಿರ್ಮಾಣ ಮಾಡಲಾಗಿದೆ. ಮ್ಯಾಥ್ಯೂಸ್‌ ಮನು ಸಂಗೀತ ನಿರ್ದೇಶನ ಇರುವ, ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಈವರೆಗೂ ರಿಲೀಸ್ ಆಗಿರೋ ಕಂಟೆಂಟ್ಸ್ ಎಲ್ಲವೂ ಅದ್ಭುತವಾಗಿ ಮೂಡಿಬಂದಿವೆ. ಮಾರ್ಚ್ 15ಕ್ಕೆ ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದ್ದು, ಈ ಚಿತ್ರದ ಟ್ರೈಲರ್ ಸದ್ಯದಲ್ಲೇ ರಿಲೀಸ್ ಆಗಲಿದೆ.

ಮೆಹಬೂಬಾ ರಿಲೀಟ್ ಡೇಟ್ ಅನೌನ್ಸ್

ಇದನ್ನೂ ಓದಿ: ರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಕುಣಿದು ಕುಪ್ಪಳಿಸಿದ ಗುರುಕಿರಣ್, ಪ್ರೇಮ್

ABOUT THE AUTHOR

...view details