ಕರ್ನಾಟಕ

karnataka

ETV Bharat / entertainment

ಬ್ಯಾಡ್​ ಚಿತ್ರದಿಂದ 'ಮಾತಿಗೂ ಮಾತಿಗೂ' ಹಾಡು ಅನಾವರಣ - BAD Movie Song - BAD MOVIE SONG

'BAD' ಚಿತ್ರದ 'ಮಾತಿಗೂ ಮಾತಿಗೂ' ಹಾಡು ಅನಾವರಣಗೊಂಡಿದೆ.

Mathigu Mathigu Song from Bad movie
ಬ್ಯಾಡ್​ ಚಿತ್ರದಿಂದ 'ಮಾತಿಗೂ ಮಾತಿಗೂ' ಹಾಡು ಅನಾವರಣ

By ETV Bharat Karnataka Team

Published : Mar 28, 2024, 8:57 AM IST

ವಿಭಿನ್ನ ಶೀರ್ಷಿಕೆಯಿಂದ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ಚಿತ್ರ 'BAD'. ಇದೇನಪ್ಪಾ ಸಿನಿಮಾದ ಹೆಸರೇ ಬ್ಯಾಡ್ ಆಗಿದೆ, ಕಂಟೆಂಟ್​ ಏನಿರಬಹುದು? ಎಂದು ಊಹಿಸುತ್ತಿರುವವರ ಸಂಖ್ಯೆಯೂ ದೊಡ್ಡದಿದೆ.​ ಸದ್ಯ ಈ ಚಿತ್ರದಿಂದ 'ಮಾತಿಗೂ ಮಾತಿಗೂ' ಎಂಬ ಹಾಡು ಬಿಡುಗಡೆಯಾಗಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಸಿನಿಮಾ‌ ಎಂಬ ಕ್ರಿಯೇಟಿವ್​ ಲೋಕದಲ್ಲಿ ನಿರ್ದೇಶಕನ ಪರಿಕಲ್ಪನೆಯಂತೆ ಚಿತ್ರಗಳು ಮೂಡಿಬರುತ್ತವೆ. ನಿರ್ದೇಶಕನ ಸ್ಟೈಲ್​​​ಗೆ ತಕ್ಕಂತೆ ವಿಭಿನ್ನ ಟೈಟಲ್ ಅನ್ನೂ ಇಡಲಾಗುತ್ತದೆ. ಕಂಟೆಂಟ್​ ಕೂಡ ಗಮನ ಸೆಳೆಯುವ ಅಂಶವೇ. ಇಂಥ ವಿಭಿನ್ನತೆಗಳು ಸಿನಿಪ್ರೇಮಿಗಳನ್ನು ಸೆಳೆಯುತ್ತವೆ. ಹೊಸ ಬಗೆಯ ಕಂಟೆಂಟ್, ಅದ್ಧೂರಿ ಮೇಕಿಂಗ್, ಪ್ಯಾನ್ ಇಂಡಿಯಾ ವ್ಯಾಪ್ತಿ ವಿಸ್ತರಿಸಿಕೊಳ್ಳುವ ಕನ್ನಡ ಸಿನಿಮಾಗಳೀಗ ಸದ್ದು ಮಾಡುತ್ತಿವೆ. ಈ ಸಾಲಿನಲ್ಲೀಗ ಪಿ.ಸಿ.ಶೇಖರ್ ನಿರ್ದೇಶನದ 'BAD' ಹಲವು ವಿಚಾರಗಳಿಂದ ಚರ್ಚೆಯಲ್ಲಿದೆ.

ಹೊಸ ಪ್ರತಿಭೆ ನಕುಲ್ ಗೌಡ ನಾಯಕನಾಗಿ ಅಭಿನಯಿಸುತ್ತಿರುವ 'BAD' ಟೀಸರ್​ನಿಂದಲೂ ಗಮ‌ನ ಸೆಳೆದಿದ್ದು, ಇದೀಗ ಹೊಸ ಹಾಡು ಅನಾವರಣಗೊಂಡಿದೆ. ಖ್ಯಾತ ಸಾಹಿತಿ ಕವಿರಾಜ್ 'ಮಾತಿಗೂ ಮಾತಿಗೂ' ಎಂಬ ಸುಂದರ ಯುಗಳಗೀತೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ. ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ಹಾಗೂ ಸುನೀಲ್ ಗುಜಗೊಂಡ ಸುಶ್ರಾವ್ಯವಾಗಿ ಹಾಡಿದ್ದಾರೆ. ಜಂಕಾರ್ ಮ್ಯೂಸಿಕ್ ಮೂಲಕ ಹೊರ ಬಂದಿರುವ ಹಾಡು ಜನಮನಸೂರೆಗೊಳ್ಳುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ಇದನ್ನೂ ಓದಿ:ಬೆಂಗಳೂರು ನೀರಿನ ಸಮಸ್ಯೆ: ಕನ್ನಡದಲ್ಲೇ ಟ್ವೀಟ್ ಮಾಡಿ ಪರಿಹಾರ ತಿಳಿಸಿದ ನಟ ಚಿರಂಜೀವಿ - Chiranjeevi

ಈ ಹಿಂದೆ ನಕುಲ್ ಗೌಡ ಪ್ರೀತಿಯ ರಾಯಭಾರಿ ಚಿತ್ರದ ಮೂಲಕ ಜನರ ಮನಗೆದ್ದಿದ್ದರು. ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್, ಅಶ್ವಿನಿ ಮುಂತಾದವರು ಬ್ಯಾಡ್‌ ಬಳಗದಲ್ಲಿದ್ದಾರೆ. ಕಾಮ, ಕ್ರೋಧ ಸೇರಿದಂತೆ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಲ್ಲಿ ಆರು ಜನ ಕಲಾವಿದರು ಅಭಿನಯಿಸಿರುವುದು ಈ ಚಿತ್ರದ ವಿಶೇಷ.

ಇದನ್ನೂ ಓದಿ:ಸಿನಿಮಾ, ರಾಜಕೀಯ ಎರಡೂ ಇಲ್ಲ: ಅಚ್ಚರಿ ಮೂಡಿಸಿದ ನಟಿ ರಮ್ಯಾ ನಡೆ - Ramya

ನಿರ್ದೇಶಕ ಪಿ.ಸಿ.ಶೇಖರ್ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಜಿ.ರಾಜಶೇಖರ್ ಕಲಾ ನಿರ್ದೇಶನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿದೆ. ಸಚಿನ್ ಜಡೇಶ್ವರ ಎಸ್.ಬಿ ಸಂಭಾಷಣೆ ಬರೆದಿದ್ದಾರೆ. ಎಸ್.ಆರ್.ವೆಂಕಟೇಶ್ ಗೌಡ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಟೀಸರ್ ಹಾಗೂ ಟ್ರೇಲರ್, ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಬ್ಯಾಡ್ ಸದ್ಯದಲ್ಲೇ ತೆರೆಗೆ ಬರಲಿದೆ.

ABOUT THE AUTHOR

...view details