ಮುಂಬೈ:ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ ಇದೀಗ ತಾಯ್ತನದ ಸಂಭ್ರಮದಲ್ಲಿದ್ದಾರೆ. ಇತ್ತೀಚಿಗೆ ಇವರ ಸೀಮಂತ ಸಂಭ್ರಮದ (ಬೇಬಿ ಶವರ್) ಕಾರ್ಯಕ್ರಮ ಭಾನುವಾರ ಆತ್ಮೀಯರ ಸಮ್ಮುಖದಲ್ಲಿ ನಡೆದಿದ್ದು, ಸ್ನೇಹಿತರು ಮತ್ತು ಕುಟುಂಬಸ್ಥರು ಭಾಗಿಯಾಗಿದ್ದಾರೆ. ಇನ್ನು ಈ ಕಾರ್ಯಕ್ರಮದ ಅನೇಕ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸೋನಿ ರಜಾದನ್ ಅವರು ಮಗಳು ಶಹೀನ್ ಭಟ್ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಮಸಾಬಾ ಅವರ ಬೇಬಿ ಶವರ್ ಫೋಟೋಗಳನ್ನು ಹಂಚಿಕೊಂಡು ಅವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮದಲ್ಲಿ ಮಸಾಬಾ ತಿಳಿ ಕಂದು ಬಣ್ಣದ ದಿರಿಸಿನಲ್ಲಿ, ತಾಯ್ತನದ ಹೊಳಪಿನಲ್ಲಿ ಕಂಗೊಳಿಸಿದರು. ಸೋನಿ ರಜಾದನ್ ಹಂಚಿಕೊಂಡ ಚಿತ್ರದಲ್ಲಿ ಮಸಾಬಾ ಮತ್ತು ಅವರ ತಾಯಿ ನೀನಾ ಗುಪ್ತಾ ಅವರನ್ನು ಕಾಣಬಹುದಾಗಿದೆ. ನಟಿ ಸೋನಂ ಕಪೂರ್ ಕೂಡ ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮತ್ತೊಂದು ಫೋಟೋ ಹಂಚಿಕೊಂಡಿರುವ ಸೋನಂ ಕಪೂರ್, ಮಸಾಬಾ ಗುಪ್ತಾ ಮತ್ತು ಸಹೋದರಿ ರಿಯಾ ಕಪೂರ್ ಅವರನ್ನು ತಬ್ಬಿ ಹಿಡಿದಿದ್ದಾರೆ.
ಏಪ್ರಿಲ್ನಲ್ಲಿ ತಾವು ತಾಯಿಯಾಗುತ್ತಿರುವ ಕುರಿತು ಖ್ಯಾತ ಡಿಸೈನರ್ ಆಗಿರುವ ಮಸಾಬಾ ತಮ್ಮ ಅಭಿಮಾನಿಗಳೊಂದಿಗೆ ಸುದ್ದಿ ಹಂಚಿಕೊಂಡಿದ್ದರು. 2023ರ ಜನವರಿಯಲ್ಲಿ ಮಸಾಬಾ ನಟ ಸತ್ಯದೀಪ್ ಅವರೊಂದಿಗೆ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಈ ಸಮಾರಂಭದಲ್ಲಿ ಅವರ ತಾಯಿ ನೀನಾ ಗುಪ್ತಾ, ತಂದೆ ವಿವಿನ್ ರಿಚರ್ಡ್ಸ್ ಮತ್ತು ಮಲ ತಂದೆ ವಿವೇಕ್ ಮೆಹ್ರಾ ಒಟ್ಟಿಗೆ ಫೋಟೋದಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋವನ್ನು ಮಸಾಬಾ ಹಂಚಿಕೊಂಡಿದ್ದರು. ಮೊದಲ ಬಾರಿಗೆ ನಮ್ಮ ಇಡೀ ಕುಟುಂಬ ಒಟ್ಟುಗೂಡಿದ್ದೇವೆ. ನನ್ನ ಸುಂದರ ಕುಟುಂಬ ಎಂಬ ಅಡಿಬರಹವನ್ನು ಕೂಡಾ ಬರೆದಿದ್ದರು.
ಮಸಾಬಾ ಗುಪ್ತಾ ವೃತ್ತಿ ಮತ್ತು ವೈಯಕ್ತಿಕ ಜೀವನದ ಕುರಿತು ಮಸಾಬಾ ಮಸಾಬಾ ಎಂಬ ನೆಟ್ಫ್ಲಿಕ್ಸ್ನ ಸೀರಿಸ್ನಲ್ಲಿ ಸತ್ಯದೀಪ್ ಜೊತೆಗೆ ಸತ್ಯದೀಪ್ ಕಾರ್ಯ ನಿರ್ವಹಿಸಿದ್ದರು. ಈ ಮೊದಲು ಮಸಾಬಾ ನಿರ್ಮಾಪಕ ಮಧು ಮಂಟೆನಾ ಜೊತೆಗೆ 2015ರಲ್ಲಿ ಮದುವೆಯಾಗಿದ್ದರು. ಆದರೆ, 2019ರಲ್ಲಿ ಈ ಜೋಡಿ ದೂರಾಗಿತ್ತು. ಸತ್ಯದೀಪ್ ಈ ಮೊದಲು 2013ರಲ್ಲಿ ಅದಿತಿ ರಾವ್ ಹೈದರಿಯನ್ನು ವರಿಸಿದ್ದು, ಬಳಿಕ ಬೇರ್ಪಟ್ಟಿದ್ದರು.
ಇದನ್ನೂ ಓದಿ: ಹಸೆಮಣೆ ಏರಿದ ಮಸಾಬಾ ಗುಪ್ತಾ - ಸತ್ಯದೀಪ್ ಮಿಶ್ರಾ: ಈ ಜೋಡಿಗಿದು ಎರಡನೇ ಮದುವೆ