ಕರ್ನಾಟಕ

karnataka

ETV Bharat / entertainment

"ಗೋಪಿಲೋಲ" ಟ್ರೇಲರ್ ರಿಲೀಸ್​​: ಅ.4ಕ್ಕೆ ಸಿನಿಮಾ ಬಿಡುಗಡೆ - Gopilola Trailer - GOPILOLA TRAILER

ಬಿಡುಗಡೆ ಹೊಸ್ತಿಲಲ್ಲಿರುವ ''ಗೋಪಿಲೋಲ''ಶೀರ್ಷಿಕೆಯ ಕನ್ನಡದ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಆರ್ ರವೀಂದ್ರ ನಿರ್ದೆಶನದ ಈ ಚಿತ್ರ ಅಕ್ಟೋಬರ್ 4ರಂದು ಬಿಡುಗಡೆಯಾಗಲಿದೆ.

''Gopilola" trailer release
"ಗೋಪಿಲೋಲ" ಟ್ರೇಲರ್ ರಿಲೀಸ್​​ ಈವೆಂಟ್​ (ETV Bharat)

By ETV Bharat Karnataka Team

Published : Sep 24, 2024, 7:22 PM IST

''ಗೋಪಿಲೋಲ''ಶೀರ್ಷಿಕೆಯ ಕನ್ನಡದ ಬಹುನಿರೀಕ್ಷಿತ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡ ಈಗಾಗಲೇ ಪ್ರಚಾರ ಪ್ರಾರಂಭಿಸಿದ್ದು, ಇದೀಗ ಟ್ರೇಲರ್​ ಅನಾವರಣಗೊಂಡಿದೆ. ಚಿತ್ರತಂಡ ಈಗಾಗಲೇ ಟೀಸರ್ ಹಾಗೂ ಹಾಡುಗಳ‌ ಮೂಲಕ ಬಹುತೇಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಬಿಡುಗಡೆ ಹೊಸ್ತಿಲಲ್ಲಿರುವ ಸಿನಿಮಾದ ಟ್ರೇಲರ್​ ರಿಲೀಸ್​​ ಈವೆಂಟ್​​ ಅದ್ದೂರಿಯಾಗಿ ನೆರವೇರಿದೆ. ಎಸ್.ವಿ.ರಾಜೇಂದ್ರಸಿಂಗ್ ಬಾಬು, ಜೋಸೈಮನ್, ದೊಡ್ಡಣ್ಣ, ಶ್ರೀನಗರ ಕಿಟ್ಟಿ, ಕೆ.ಮಂಜು, ಎಂ.ಜಿ.ರಾಮಮೂರ್ತಿ, ಕೃಷ್ಣೇಗೌಡ, ಪಿ.ಸಿ.ಶೇಖರ್ ಸೇರಿದಂತೆ ಹಲವರು "ಗೋಪಿಲೋಲ" ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ತಮ್ಮ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.

"ಗೋಪಿಲೋಲ" ಟ್ರೇಲರ್ ರಿಲೀಸ್​​ ಈವೆಂಟ್​ (ETV Bharat)

ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂಬ ವಿಶ್ವಾಸ:ನಿರ್ಮಾಪಕ ಎಸ್ ಆರ್ ಸನತ್ ಕುಮಾರ್ ಮಾತನಾಡಿ, ಈ ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂಬ ನಂಬಿಕೆ ನನಗಿದೆ. ಅಂತಹ ಉತ್ತಮ ಅಂಶಗಳು ನಮ್ಮ ಚಿತ್ರದಲ್ಲಿದೆ. ಕಥೆಯನ್ನು ನಾನೇ ಬರೆದಿದ್ದೇನೆ. ಕೃಷಿ ಕುಟುಂಬದಿಂದ ಬಂದವನು ನಾನು. ನೈಸರ್ಗಿಕ ಕೃಷಿಗೆ ಸಂಬಂಧಿಸಿದ ಚಿತ್ರ ಮಾಡಿದ ಸಂತೋಷ ನನಗಿದೆ. ಮಿಥುನ್ ಅಶೋಕನ್ ಅವರ ಸಂಗೀತ ಸಂಯೋಜನೆಯಲ್ಲಿ ಆರು ಹಾಡುಗಳು ಸುಂದರವಾಗಿ ಮೂಡಿ ಬಂದಿವೆ. ಎಲ್ಲ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ "ಗೋಪಿಲೋಲ" ಉತ್ತಮ ಚಿತ್ರವಾಗಿ ಹೊರಹೊಮ್ಮುತ್ತಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದಗಳು ಎಂದು ತಿಳಿಸಿದರು.

"ಗೋಪಿಲೋಲ" ಟ್ರೇಲರ್ ರಿಲೀಸ್​​ ಈವೆಂಟ್​ನಲ್ಲಿ ನಾಯಕ ನಾಯಕಿಯರು (ETV Bharat)

ನಿರ್ಮಾಪಕರು ಚಿತ್ರದ ಬಗ್ಗೆ ಸಾಕಷ್ಟು ಹೇಳಿದ್ದಾರೆ. "ಗೋಪಿಲೋಲ" ನೈಸರ್ಗಿಕ ಕೃಷಿಯ ಕುರಿತಾದ ಹಾಗೂ ಸುಂದರ ಪ್ರೇಮಕಥೆಯುಳ್ಳ ಚಿತ್ರ. ಜನರಿಗೆ ಒಂದೊಳ್ಳೆ ಸಂದೇಶ ಕೂಡ ಇದೆ ಎಂದರು ನಿರ್ದೇಶಕ ಆರ್ ರವೀಂದ್ರ.

ಇದನ್ನೂ ಓದಿ:ಡಿವೋರ್ಸ್ ವದಂತಿ ನಡುವೆ ಪ್ಯಾರಿಸ್ ಫ್ಯಾಶನ್ ವೀಕ್​​​ನಲ್ಲಿ ಮಿಂಚು ಹರಿಸಿದ ನೀಲಿ ಕಣ್ಣಿನ ಚೆಲುವೆ - Aishwarya Rai

ಇದು ನಾಯಕನಾಗಿ ನನ್ನ ಮೊದಲ ಚಿತ್ರ. ಸನತ್ ಕುಮಾರ್ ಅವರು ಉತ್ತಮ ಕಥೆ ಬರದಿದ್ದಾರೆ. ಅಷ್ಟೇ ಚೆನ್ನಾಗಿ ರವೀಂದ್ರ ಅವರು ನಿರ್ದೇಶನ‌ ಮಾಡಿದ್ದಾರೆ‌. ನನ್ನ ಪಾತ್ರ ಕೂಡ ಚೆನ್ನಾಗಿದೆ. ಆ್ಯಕ್ಷನ್, ಲವ್, ಸಸ್ಪನ್ಸ್ ಹೀಗೆ ನೋಡುಗನಿಗೆ ಬೇಕಾದ ಎಲ್ಲ ಅಂಶಗಳು ನಮ್ಮ ಚಿತ್ರದಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆ ಕಂಟೆಂಟ್ ಇದೆ. ಅದೇ ನಮ್ಮ ಚಿತ್ರದ ಹೀರೋ ಎನ್ನಬಹುದು ಎಂದು ನಾಯಕ ಹಾಗೂ ಸಹ ನಿರ್ಮಾಪಕ ಮಂಜುನಾಥ್ ಅರಸ್ ತಿಳಿಸಿದರು.

ಇದನ್ನೂ ಓದಿ:ಮಲೈಕಾ ಅರೋರಾ ಮಲತಂದೆಯ ಪ್ರಾರ್ಥನಾ ಸಭೆ: ಅರ್ಜುನ್​​ ಕಪೂರ್​, ಕರೀನಾ ಸೇರಿ ಸೆಲೆಬ್ರಿಟಿಗಳು ಭಾಗಿ - Malaika Arora

ಈವೆಂಟ್​ನಲ್ಲಿ ನಾಯಕಿ‌ ನಿಮಿಷ, ಹಿರಿಯ ನಟಿ ಪದ್ಮಾ ವಾಸಂತಿ, ನಟ ಕೆಂಪೇಗೌಡ ಸೇರಿದಂತೆ ಮೊದಲಾದವರು "ಗೋಪಿಲೋಲ" ಚಿತ್ರದ ಕುರಿತು ತಮ್ಮ ವಿಶ್ವಾಸ ವ್ಯಕ್ತಪಡಿಸಿದರು. ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್ ಆರ್ ಸನತ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದು, ಮಂಜುನಾಥ್ ಅರಸು ಅವರ ಸಹ ನಿರ್ಮಾಣವಿದೆ. ಚಿತ್ರ ಅಕ್ಟೋಬರ್ 4ರಂದು ಬಿಡುಗಡೆಯಾಗಲಿದೆ.

ABOUT THE AUTHOR

...view details