ಕರ್ನಾಟಕ

karnataka

ETV Bharat / entertainment

ಮಾಲಿವುಡ್ ನಟ ಮೋಹನ್ ಲಾಲ್‌ ಕಂಠದಿಂದ ಕನ್ನಡದ ಹಾಡು: ಅಣ್ಣಾವ್ರ ಹಾಡಿಗೆ ನೆಟ್ಟಿಗರ ಬಹುಪರಾಕ್ - Mohanlal Sang Kannada Song - MOHANLAL SANG KANNADA SONG

ಮಾಲಿವುಡ್ ನಟ ಮೋಹನ್ ಲಾಲ್‌ ಅವರು ಕನ್ನಡದ ಹಾಡನ್ನು ಹಾಡಲು ಪ್ರಯತ್ನಿಸಿದ್ದು ಆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

MOHANLAL SANG KANNADA SONG
ಮಾಲಿವುಡ್ ನಟ ಮೋಹನ್ ಲಾಲ್‌ (IANS)

By ETV Bharat Karnataka Team

Published : May 21, 2024, 7:09 PM IST

ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ ಲಾಲ್‌ ಅವರು ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್ ಅವರು ನಟನೆಯ 'ಎರಡು ಕನಸು' ಚಿತ್ರದ 'ಎಂದೆಂದೂ ನಿನ್ನನು ಮರೆತು ನಾನಿರಲಾರೆ..' ಹಾಡನ್ನು ಹಾಡುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಮೊಬೈಲ್‌ನಲ್ಲಿ ಅಣ್ಣಾವ್ರ ಹಾಡು ನೋಡುತ್ತಾ ಗುನುಗಿರುವ ವಿಡಿಯೋ ಇದಾಗಿದ್ದು, ನೆಟ್ಟಿಗರು ಕೂಡ ಮನಸೋತಿದ್ದಾರೆ. ಡಾ. ರಾಜ್‌ಕುಮಾರ್ ಜೊತೆ ಮೋಹನ್‌ ಲಾಲ್ ಅವರು ಅವಿನಾಭಾವ ಸಂಬಂಧ ಹೊಂದಿದ್ದರು, ಇಬ್ಬರ ನಡುವೆ ಒಂದೊಳ್ಳೆ ಬಾಂಧವ್ಯವಿತ್ತು ಅನ್ನೋದಕ್ಕೆ ಈ ವೈರಲ್​ ವಿಡಿಯೋ ಸಾಕ್ಷಿಯಾಗಿದೆ ಎಂದು ಹಲವರು ಕಾಮೆಂಟ್​ ಮಾಡಿದ್ದಾರೆ.

ಮೋಹನ್‌ ಲಾಲ್ ಮಲಯಾಳಂನಲ್ಲಿ ಜನಪ್ರಿಯ ನಟರಾಗಿದ್ದು, ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ಅವರಿಗೆ ಕನ್ನಡದಲ್ಲೂ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಪುನೀತ್​ ರಾಜ್​ಕುಮಾರ್​ ಜೊತೆ 'ಮೈತ್ರಿ' ಸಿನಿಮಾದಲ್ಲಿ ಮೋಹನ್ ಲಾಲ್ ಕನ್ನಡದಲ್ಲಿ ನಟಿಸಿದ್ದರು.

ಈ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಗಿರಿರಾಜ್ ನಿರ್ದೇಶನದ ಸಾಮಾಜಿಕ ಕಳಕಳಿಯುಳ್ಳ ಈ ಚಿತ್ರದಲ್ಲಿ ಮಹಾದೇವ್ ಗೊಡ್ಕೆ ಎನ್ನುವ ವಿಜ್ಞಾನಿ ಪಾತ್ರದಲ್ಲಿ ನಟಿಸಿದ್ದರು. ಈ ಸೋಶಿಯಲ್ ಡ್ರಾಮಾ ಚಿತ್ರದಲ್ಲಿ ಅಪ್ಪು-ಮೋಹನ್ ಲಾಲ್ ಜುಗಲ್‌ಬಂದಿ ಸಿನಿ ರಸಿಕರಿಗೆ ಇಷ್ಟವಾಗಿತ್ತು.

50 ವರ್ಷಗಳ ಹಿಂದೆ ತೆರೆಕಂಡಿದ್ದ ಎರಡು ಕನಸು ಚಿತ್ರಕ್ಕೆ ದೊರೆ-ಭಗವಾನ್ ಆ್ಯಕ್ಷನ್ ಕಟ್ ಹೇಳಿದ್ದು, ವಾಣಿ ಅವರು ಬರೆದ ಕಾದಂಬರಿ ಆಧರಿಸಿ ಈ ಸಿನಿಮಾ ಮೂಡಿ ಬಂದಿತ್ತು. ರಾಜನ್‌-ನಾಗೇಂದ್ರ ಸಂಗೀತದಲ್ಲಿ ಒಟ್ಟು 6 ಹಾಡುಗಳು ಮೂಡಿ ಬಂದಿದ್ದವು. ಪಿ.ಬಿ. ಶ್ರೀನಿವಾಸ್ ಹಾಗೂ ವಾಣಿ ಜಯರಾಂ ಈ ಹಾಡಿಗೆ ದನಿಯಾಗಿದ್ದರು.

30 ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡಿದ್ದ ಎರಡು ಕನಸು ಸಿನಿಮಾ 1982ರಲ್ಲಿ ರೀ ರಿಲೀಸ್ ಆಗಿ ಶತದಿನೋತ್ಸವ ಆಚರಿಸಿತ್ತು. 2015ರಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದು ಸಿನಿಮಾ ಗಮನ ಸೆಳೆದಿತ್ತು. ಚಿತ್ರದ ಆಲ್ಬಮ್‌ ಕೂಡ ಸೂಪರ್ ಹಿಟ್ ಆಗಿತ್ತು. ಎಲ್ಲಾ ಹಾಡುಗಳಿಗೆ ಚಿ. ಉದಯಶಂಕರ್ ಸಾಹಿತ್ಯ ಬರೆದಿದ್ದರು. ಸದ್ಯ ಸೂಪರ್ ಸ್ಟಾರ್ ಆಗಿರುವ ಮೋಹನ್ ಲಾಲ್ ಅಣ್ಣಾವ್ರ ಸಿನಿಮಾ ಹಾಡಿಗೆ ಹಾಡಲು ಪ್ರಯತ್ನಿಸುತ್ತಿರುವುದು ಹೆಮ್ಮೆಯ ವಿಷ್ಯ.

ಇದನ್ನೂ ಓದಿ:ದೀಕ್ಷಿತ್​ ಶೆಟ್ಟಿ ಹೊಸ ಸಿನಿಮಾ 'ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ' ಪೋಸ್ಟರ್ ರಿಲೀಸ್ - bank of bhagya lakshmi movie poster

ABOUT THE AUTHOR

...view details