ಸ್ಯಾಂಡಲ್ವುಡ್ನ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಉತ್ತಮ ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಯಶಸ್ಸು ಕಾಣುತ್ತಿದ್ದಾರೆ. ನಾಗಭೂಷಣ್ ಕೂಡ ಕನ್ನಡ ಚಿತ್ರರಂಗದಲ್ಲಿ ಬೆಳೆಯುತ್ತಿರುವ ನಟ. 'ಟಗರು ಪಲ್ಯ' ಸಿನಿಮಾ ಸಕ್ಸಸ್ ಬಳಿಕ ನಾಗಭೂಷಣ್ ಮತ್ತು ಡಾಲಿ ಧನಂಜಯ್ ಮತ್ತೊಮ್ಮೆ ಚಿತ್ರವೊಂದಕ್ಕೆ ಕೈ ಜೋಡಿಸಿರೋದು ನಿಮಗೆ ತಿಳಿದಿರುವ ವಿಚಾರವೇ. ತಮ್ಮ ಮುಂದಿನ ಚಿತ್ರಕ್ಕೆ 'ವಿದ್ಯಾಪತಿ' ಎಂಬ ವಿಭಿನ್ನ ಶೀರ್ಷಿಕೆ ಇಡಲಾಗಿದೆ.
ಡಾಲಿ ಧನಂಜಯ್ ನಿರ್ಮಾಣದ ಹೊಸ ಚಿತ್ರದ ಮೂಲಕ ನಾಗಭೂಷಣ್ 'ವಿದ್ಯಾಪತಿ' ಆಗಿದ್ದಾರೆ. 'ಉಪಾಧ್ಯಕ್ಷ'ನ ಸುಂದರಿಯೀಗ ಡಾಲಿ ಬಳಗ ಸೇರ್ಪಡೆಯಾಗಿದ್ದಾರೆ. ಡಾಲಿ ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್ 'ಟಗರು ಪಲ್ಯ'ದ ಸಕ್ಸಸ್ ಬಳಿಕ ಈ 'ವಿದ್ಯಾಪತಿ' ನಿರ್ಮಾಣ ಮಾಡುತ್ತಿದ್ದು, ಸಂಕ್ರಾಂತಿ ಹಬ್ಬಕ್ಕೆ ಫಸ್ಟ್ ಲುಕ್ ರಿಲೀಸ್ ಮಾಡಿತ್ತು. ಇಂದು ಚಿತ್ರದ ನಾಯಕಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ.
'ಉಪಾಧ್ಯಕ್ಷ' ಸಿನಿಮಾ ಮೂಲಕ ಮೊದಲ ಬಾರಿ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದ ಚಿಕ್ಕಣ್ಣನ ನಾಯಕಿಯಾಗಿ ಮಿಂಚಿದ್ದ ಮಲೈಕಾ ಟಿ ವಸುಪಾಲ್ ಅವರೀಗ 'ವಿದ್ಯಾಪತಿ'ಯ ಜೋಡಿಯಾಗಿದ್ದಾರೆ. 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿರುವ ಮಲೈಕಾ 'ಉಪಾಧ್ಯಕ್ಷ' ಚಿತ್ರದ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾವೇ ಅವರಿಗೆ ದೊಡ್ಡ ಸಕ್ಸಸ್ ತಂದುಕೊಟ್ಟಿದೆ. ಉಪಾಧ್ಯಕ್ಷ ಸಿನಿಮಾದಲ್ಲಿನ ಇವರ ನಟನೆ ನೋಡಿ ಮೆಚ್ಚಿಕೊಂಡಿರುವ 'ವಿದ್ಯಾಪತಿ' ತಂಡ ತಮ್ಮ ಸಿನಿಮಾಗೆ ಮಲೈಕಾ ಟಿ ವಸುಪಾಲ್ ಅವರನ್ನು ಸ್ವಾಗತಿಸಿದೆ.
'ಉಪಾಧ್ಯಕ್ಷ' ಸಿನಿಮಾದಲ್ಲಿ ನಾಗಭೂಷಣ್ ಜೊತೆ ಪ್ರೇಮ್ ಪುತ್ರಿ ಅಮೃತಾ ನಟಿಸಿದ್ದರು. ಅಮೃತಾ ಪ್ರೇಮ್ ತಮ್ಮ ಚೊಚ್ಚಲ ಚಿತ್ರದಲ್ಲೇ ಯಶ ಕಂಡಿದ್ದಾರೆ. ಮತ್ತೊಂದೆಡೆ, ಪೋಷಕ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ನಾಗಭೂಷಣ್ ನಾಯಕನಾಗಿಯೂ ಯಶ ಕಂಡಿದ್ದಾರೆ. ಡಾಲಿ ಪಿಕ್ಚರ್ಸ್ ನಿರ್ಮಾಣದ ಮೂರನೇ ಚಿತ್ರ ಇದಾಗಿತ್ತು.