ಕಾಮಿಡಿ ಶೋಗಳ ಮೂಲಕ ಪ್ರೇಕ್ಷಕರ ಮನೆಮಾತಾಗುವ ಕಲಾವಿದರು ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿಯೋದು ಸಹಜ. ಒಂದು ಕೈ ನೋಡೇ ಬಿಡೋಣ ಅನ್ನೋ ಹುಮ್ಮಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸೋರ ಪೈಕಿ ಈಗಾಗಲೇ ಕೆಲವರು ಯಶಸ್ಸು ಕಂಡಿದ್ದಾರೆ. ಅದರಂತೆ, ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರ್ ಮನು 'ಕೇದಾರ್‌ನಾಥ್ ಕುರಿ ಫಾರಂ' ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದರು. ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಈ ಚಿತ್ರದ ಬಳಿಕ ಮನು ಬಣ್ಣ ಹಚ್ಚಿರುವ ಮತ್ತೊಂದು ಚಿತ್ರವೇ 'ಕುಲದಲ್ಲಿ ಕೀಳ್ಯಾವುದೋ'.
ಕನ್ನಡ ಚಿತ್ರರಂಗದ 'ಕುಲದಲ್ಲಿ ಕೀಳ್ಯಾವುದೋ' ಶೀರ್ಷಿಕೆಯ ಹಾಡು ಇಂದಿಗೂ ಅಷ್ಟೇ ಜನಪ್ರಿಯ. ಜನಜೀವನದಲ್ಲಿ ಈ ಮಾತು ಆಗಾಗ್ಗೆ ಕೇಳಿಬರುತ್ತದೆ. ಇದೀಗ ಸಿನಿಮಾ ಶೀರ್ಷಿಕೆಯಾಗಿದ್ದು, ಮಡೆನೂರ್ ಮನು ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 2025ರ ಆರಂಭದಲ್ಲಿ ಚಿತ್ರದ ಫಸ್ಟ್ ಲುಕ್ ಅನ್ನು ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅನಾವರಣಗೊಳಿಸಿದ್ದಾರೆ.
'ಕುಲದಲ್ಲಿ ಕೀಳ್ಯಾವುದೋ' ಫಸ್ಟ್ ಲುಕ್ ಬಿಡುಗಡೆ (Photo: ETV Bharat) ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ಕಥೆ ಹೊಂದಿರುವ 'ಕುಲದಲ್ಲಿ ಕೀಳ್ಯಾವುದೋ' ಪ್ರಾಜೆಕ್ಟ್ಗೆ ಕೆ.ರಾಮ್ ನಾರಾಯಣ್ ನಿರ್ದೇಶನವಿದೆ. ಸಂತೋಷ್ ಕುಮಾರ್ ಮತ್ತು ವಿದ್ಯಾ ನಿರ್ಮಾಣದ ಸಿನಿಮಾದಲ್ಲಿ ಮಡೆನೂರು ಮನು ಜೊತೆ ಮೌನ ಗುಡ್ಡೆಮನೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇದನ್ನೂ ಓದಿ:'ಪಿನಾಕ' ಶೂಟಿಂಗ್ ಯಾವಾಗ? ಗಣೇಶ್ ಬಳಿಕ ಶ್ರೀಮುರಳಿ, ಶಿವಣ್ಣ, ಧ್ರುವ ಸರ್ಜಾರತ್ತ ಟಾಲಿವುಡ್ ಪ್ರೊಡಕ್ಷನ್ ಹೌಸ್ ಗಮನ
ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ.
ಚಿತ್ರದಲ್ಲಿ ದಿಗಂತ್, ಸೋನಾಲ್ ಮೊಂತೆರೋ, ಶರತ್ ಲೋಹಿತಾಶ್ವ, ತಬಲ ನಾಣಿ ಸೇರಿದಂತೆ ಕೆಲವರು ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಸಂಗೀತ ಸಂಯೋಜಿಸಿರುವ ಈ ಚಿತ್ರದ ಆಡಿಯೋ ರೈಟ್ಸ್ ಕೂಡ ಮನೋಮೂರ್ತಿ ಮ್ಯೂಸಿಕಲ್ ಕಂಪನಿಗೆ ಭಾರಿ ಮೊತ್ತಕ್ಕೆ ಮಾರಾಟ ಆಗಿದೆ. ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ , ರಾಮ್ ನಾರಾಯಣ್ ಹಾಡುಗಳನ್ನು ಬರೆದಿದ್ದಾರೆ. ಈ ಚಿತ್ರವನ್ನು ಯೋಗರಾಜ್ ಸಿನಿಮಾಸ್ ಅರ್ಪಿಸಲಿದೆ.
ಇದನ್ನೂ ಓದಿ:'ಒಂದು ಮಳೆಬಿಲ್ಲು'.. ಸೇರಿ ಹಿಟ್ ಸಾಂಗ್ಸ್ ಕೊಟ್ಟ ಗಾಯಕ ಅರ್ಮಾನ್ ಮಲಿಕ್ ಮದುವೆ: ಡ್ರೀಮಿ ವೆಡ್ಡಿಂಗ್ ಫೋಟೋಗಳಿಲ್ಲಿವೆ
'ಕುಲದಲ್ಲಿ ಕೀಳ್ಯಾವುದೋ' 2024ರ ನವರಾತ್ರಿ ಸಂದರ್ಭದಲ್ಲಿ ಮುಹೂರ್ತ ಸಮಾರಂಭ ನೆರವೇರಿಸಿಕೊಂಡಿತ್ತು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ನುಗ್ಗೇಹಳ್ಳಿ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು.