ಬೆಂಗಳೂರು: ಸ್ಯಾಂಡಲ್ವುಡ್ನ ಖ್ಯಾತ ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಭೀಮ' ಸಿನಿಮಾ ಕಳೆದ ವಾರ ತೆರೆಕಂಡು ಭರ್ಜರಿ ಪ್ರದರ್ಶನವಾಗಿದೆ. ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಮುಂದುವರಿದಿದ್ದು, ಸಿನಿಮಾ ಸಕ್ಸಸ್ ಕನ್ನಡ ಚಿತ್ರರಂಗದಲ್ಲಿ ಭರವಸೆಯ ಕಿರಣ ಮೂಡಿಸಿದೆ. ಸಾಲು ಸಾಲು ಕನ್ನಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದು, ನಾಳೆ ಬಹುನಿರೀಕ್ಷಿತ ಚಿತ್ರಗಳಾದ 'ಕೃಷ್ಣಂ ಪ್ರಣಯ ಸಖಿ' ಮತ್ತು 'ಗೌರಿ' ಅದ್ಧೂರಿಯಾಗಿ ತೆರೆಗಪ್ಪಳಿಸಲಿದೆ.
ಶೀರ್ಷಿಕೆ ಹಾಗೂ ಹಾಡುಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ಸಖತ್ ಟಾಕ್ ಆಗುತ್ತಿರುವ ಸಿನಿಮಾ 'ಕೃಷ್ಣಂ ಪ್ರಣಯ ಸಖಿ'. ಗೋಲ್ಡನ್ ಸ್ಡಾರ್ ಗಣೇಶ್ ಎಂಟು ಬ್ಯೂಟಿಫುಲ್ ಹೀರೋಯಿನ್ಗಳ ಜೊತೆ ರೊಮ್ಯಾನ್ಸ್ ಮಾಡಿರುವ 'ಕೃಷ್ಣಂ ಪ್ರಣಯ ಸಖಿ' ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಸಿನಿಮಾದ ಕ್ರೇಜ್ ದುಪ್ಪಟ್ಟಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಹಾಗೂ ನಿರ್ಮಾಪಕ ಪ್ರಶಾಂತ್ ಜಿ.ರುದ್ರಪ್ಪ ಫ್ಯಾನ್ಸ್ ಪೇಯ್ಡ್ ಪ್ರೀಮಿಯರ್ ಶೋ ಆಯೋಜಿಸುತ್ತಿದ್ದಾರೆ. ಇಂದು ಮಾಲ್ ಒಂದರಲ್ಲಿ ನಡೆಯಲಿರುವ ಕೃಷ್ಣಂ ಪ್ರಣಯ ಸಖಿ ಪ್ರೀಮಿಯರ್ ಶೋನ ಟಿಕೆಟ್ಗಳೆಲ್ಲ ಸೋಲ್ಡ್ ಔಟ್ ಆಗಿವೆ.
20006ರಲ್ಲಿ ಮುಂಗಾರು ಮಳೆ ಸಿನಿಮಾ ಹಾಡುಗಳು ಸೂಪರ್ ಹಿಟ್ ಆಗುವುದರ ಜೊತೆಗೆ ಗಣೇಶ್ ಅವರಿಗೆ ಗೋಲ್ಡನ್ ಸ್ಟಾರ್‌ಡಮ್ ತಂದುಕೊಟ್ಟಿತ್ತು. ಸದ್ಯ ಕೃಷ್ಣಂ ಪ್ರಣಯ ಸಖಿ ಸಾಂಗ್ಸ್ ಸೂಪರ್ ಡೂಪರ್ ಹಿಟ್ ಆಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸುವ ಸೂಚನೆ ಸಿಗುತ್ತಿದೆ. ಸಿನಿಪ್ರೇಮಿಗಳ ಕ್ರೇಜ್ ನೋಡ್ತಿದ್ರೆ ಗೋಲ್ಡನ್ ಸ್ಟಾರ್ ಮತ್ತೆ ಗೋಲ್ಡನ್ ಟೈಮ್ ಶುರುವಾಗುವ ಭರವಸೆ ಇದೆ.
ಈಗಾಗಲೇ ಚಿನ್ನಮ್ಮ, ಮೈ ಮ್ಯಾರೇಜ್ ಫಿಕ್ಸ್ ಹಾಡುಗಳು ಯೂಟ್ಯೂಬ್ನಲ್ಲಿ ಮಿಲಿಯನ್ಗಟ್ಟಲೆ ವೀಕ್ಷಣೆಯಾಗಿ, ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. 'ದ್ವಾಪರ' ಹಾಡಂತೂ ಸಖತ್ ಟ್ರೆಂಡ್ ಆಗಿದೆ. ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಹಾಟ್ ಫೇವರೆಟ್ ಆಗಿದೆ. ಇಷ್ಟು ಕ್ರೇಜ್ ಹುಟ್ಟಿಸಿರೋ ಕೃಷ್ಣಂ ಪ್ರಣಯ ಸಖಿ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ವಿಚಾರದಲ್ಲೂ ಮುನ್ನಡೆ ಸಾಧಿಸಿದ್ದು, ಹೌಸ್ಫುಲ್ ಆಗಿದೆ.