ಮುಂಬೈ (ಮಹಾರಾಷ್ಟ್ರ): 2025ನೇ ಸಾಲಿನ ಅಕಾಡೆಮಿ ಪ್ರಶಸ್ತಿಗೆ ತಮ್ಮ 'ಲಾಪತಾ ಲೇಡಿಸ್' ಸಿನಿಮಾವನ್ನು ಭಾರತದಿಂದ ಕಳುಹಿಸಲು ಪರಿಗಣಿಸಲಾಗುವುದು ಎಂದು ಭಾವಿಸುತ್ತೇನೆ ಎಂದು ನಿರ್ದೇಶಕಿ ಕಿರಣ್ ರಾವ್ ಹೇಳಿದ್ದಾರೆ. ಆಸ್ಕರ್ ವೇದಿಕೆಯಲ್ಲಿ ತಮ್ಮ ಚಿತ್ರ ದೇಶವನ್ನು ಪ್ರತಿನಿಧಿಸಬೇಕು ಎಂಬುದು ಕಿರಣ್ ರಾವ್ ಅವರ ಬಹುದಿನಗಳ ಕನಸು. ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ (ಎಫ್‌ಎಫ್‌ಐ) ಉತ್ತಮ ಚಿತ್ರವನ್ನು ಮಾತ್ರ ಆಯ್ಕೆ ಮಾಡುತ್ತದೆ ಎಂಬುದಾಗಿಯೂ ರಾವ್ ತಿಳಿಸಿದ್ದಾರೆ.
’ಆಸ್ಕರ್ ಗೆದ್ದರೆ ನನ್ನ ಕನಸು ನನಸಾಗುತ್ತೆ’;ನನ್ನ ಸಿನಿಮಾ ಆಸ್ಕರ್ ಪ್ರಶಸ್ತಿ ಗೆದ್ದರೆ ನನ್ನ ಒಂದು ಕನಸು ನನಸಾಗುತ್ತದೆ. ಆದ್ರೆ ಈ ಪ್ರಶಸ್ತಿಗೆ ಪ್ರವೇಶ ಪಡೆಯಲು ಒಂದು ಪ್ರಕ್ರಿಯೆ ಇದ್ದು, ನನ್ನ ಸಿನಿಮಾವನ್ನು ಪರಿಗಣಿಸಲಾಗುವುದು ಎಂದು ನಾನು ಭಾವಿಸುತ್ತೇನೆ. ಉತ್ತಮ ಚಿತ್ರ ಮಾತ್ರ ಆಯ್ಕೆ ಆಗಲಿದೆ ಎಂಬುದು ಖಚಿತ. 'ಲಾಪತಾ ಲೇಡೀಸ್' 2001ರ ಗ್ರಾಮೀಣ ಭಾರತದ ಕಥೆ. ಇಬ್ಬರ ಶಕ್ತಿಯುತ ಕಥೆಯಾಗಿದ್ದು, ಅವರು ರೈಲು ಪ್ರಯಾಣದ ಸಂದರ್ಭ ಆಕಸ್ಮಿಕವಾಗಿ ಭೇಟಿ ಆಗುತ್ತಾರೆ. ಚಿತ್ರವನ್ನು ಕಿರಣ್ ಅವರ ಕಿಂಡ್ಲಿಂಗ್ ಪ್ರೊಡಕ್ಷನ್ಸ್ ಮತ್ತು ಅಮೀರ್ ಖಾನ್ ಪ್ರೊಡಕ್ಷನ್ಸ್ ನಿರ್ಮಿಸಿದೆ. ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾದ ಈ ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ಚಿತ್ರದಲ್ಲಿ ರವಿ ಕಿಶನ್, ಛಾಯಾ ಕದಮ್ ಮತ್ತು ಗೀತಾ ಅಗರ್ವಾಲ್ ಶರ್ಮಾ ಜೊತೆಗೆ ನಿತಾಂಶಿ ಗೋಯಲ್, ಪ್ರತಿಭಾ ರಂಟಾ ಮತ್ತು ಸ್ಪರ್ಶ ಶ್ರೀವಾಸ್ತವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.