ಕರ್ನಾಟಕ

karnataka

ETV Bharat / entertainment

'ಚಂದು ಚಾಂಪಿಯನ್'​​: ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ ಕಾರ್ತಿಕ್ ಆರ್ಯನ್ ಲುಕ್​ - ಚಂದು ಚಾಂಪಿಯನ್

'ಚಂದು ಚಾಂಪಿಯನ್'​​ ಸಿನಿಮಾದಿಂದ ಕಾರ್ತಿಕ್ ಆರ್ಯನ್ ಅವರ ಲುಕ್ ಅನಾವರಣಗೊಂಡಿದೆ. ​

Chandu Champion
ಚಂದು ಚಾಂಪಿಯನ್

By ETV Bharat Karnataka Team

Published : Jan 27, 2024, 1:03 PM IST

ಬಾಲಿವುಡ್​ನಲ್ಲಿ ಬೇಡಿಕೆ ಹೊಂದಿರುವ ಯಂಗ್​ ಸ್ಟಾರ್ ಕಾರ್ತಿಕ್ ಆರ್ಯನ್. ನಟನ ಮುಂದಿನ ಬಹುರೀಕ್ಷಿತ ಸಿನಿಮಾ 'ಚಂದು ಚಾಂಪಿಯನ್'​​. ಸಿನಿಮಾದಿಂದ ನಟನ ಮತ್ತೊಂದು ಅದ್ಭುತ ಲುಕ್​​ ಹೊರಬಿದ್ದಿದೆ. ಈ ಬಾರಿ ಸೇನಾ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಣರಾಜ್ಯೋತ್ಸವದ ಸಂದರ್ಭ ಫೋಟೋ ಹಂಚಿಕೊಂಡ ನಟ ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ.

ಕಬೀರ್ ಖಾನ್ ಆ್ಯಕ್ಷನ್​ ಕಟ್​ ಹೇಳುತ್ತಿರುವ ಈ ಚಿತ್ರ ಫ್ರೀಸ್ಟೈಲ್ ಸ್ವಿಮ್ಮಿಂಗ್‌ನಲ್ಲಿ ಭಾರತದ ಮೊದಲ ಪ್ಯಾರಾಲಿಂಪಿಕ್ ಗೋಲ್ಡ್ ಚಾಂಪಿಯನ್ ಮುರಳಿಕಾಂತ್ ಪೇಟ್ಕರ್ ಅವರ ಜೀವನವನ್ನು ಆಧರಿಸಿದೆ. ಕಾರ್ತಿಕ್ ಆರ್ಯನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರೆ, ಭುವನ್ ಅರೋರಾ, ಪಲಕ್ ಲಾಲ್ವಾನಿ ಮತ್ತು ಅಡೋನಿಸ್ ಕಪ್ಸಾಲಿಸ್ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಫೋಟೋ ಹಂಚಿಕೊಂಡ ಕಾರ್ತಿಕ್ ಆರ್ಯನ್, "ಚಾಂಪಿಯನ್ ಆಗಿರುವುದು ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿದೆ. ಜೈ ಹಿಂದ್. ಗಣರಾಜ್ಯೋತ್ಸವದ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ. ಈ ಚಿತ್ರ ಜೂನ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ'.

ಕಾರ್ತಿಕ್ ಆರ್ಯನ್​​ ಅವರ ಚಂದು ಚಾಂಪಿಯನ್ ಸಿನಿಮಾ ಕಂಗನಾ ರಣಾವತ್ ಅವರ ಎಮರ್ಜೆನ್ಸಿ ಸಿನಿಮಾ ಜೊತೆ ಪೈಪೋಟಿ ನಡೆಸಲಿದೆ. ಕಂಗನಾ ಅವರ ಈ ಬಹುನಿರೀಕ್ಷಿತ ಸಿನಿಮಾವನ್ನು 2023ರ ನವೆಂಬರ್​ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದ್ರೆ 2023ರ ಕೊನೆಗೆ ಬ್ಯಾಕ್​ ಟು ಬ್ಯಾಕ್​ ಚಿತ್ರಗಳು ತೆರೆಕಂಡ ಹಿನ್ನೆಲೆ ಸಿನಿಮಾವನ್ನು ಮುಂದೂಡಲಾಯ್ತು. ಇದೀಗ ಜೂನ್​ನಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಘೋಷಿಸಿದೆ. ಎಮರ್ಜೆನ್ಸಿ ಚಿತ್ರದಲ್ಲಿ ಪ್ರತಿಪಕ್ಷ ನಾಯಕ ಜೆ.ಪಿ ನಾರಾಯಣ್ ಪಾತ್ರದಲ್ಲಿ ಅನುಪಮ್ ಖೇರ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ಶ್ರೇಯಸ್ ತಲ್ಪಾಡೆ ಮತ್ತು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್​ ಶಾ ಪಾತ್ರದಲ್ಲಿ ಮಿಲಿಂದ್ ಸೋಮನ್ ನಟಿಸಿದ್ದಾರೆ.

ಇದನ್ನೂ ಓದಿ:ಒಟಿಟಿಗೆ ಎಂಟ್ರಿ ಕೊಟ್ಟ 'ಸಪ್ತಸಾಗರದಾಚೆ ಎಲ್ಲೋ ಸೈಡ್​​ ಬಿ'

ಚಂದು ಚಾಂಪಿಯನ್ ಸಿನಿಮಾವನ್ನು ಕಬೀರ್ ಖಾನ್ ನಿರ್ದೇಶಿಸಿದ್ದಾರೆ. ಕ್ರೀಡಾಪಟುವಿನ ಕಥೆಯನ್ನಾಧರಿಸಿದೆ. ಚಂದು ಪಾತ್ರದಲ್ಲಿ ಕಾರ್ತಿಕ್ ನಟಿಸಿದ್ದಾರೆ. ಕಾರ್ತಿಕ್ ಆರ್ಯನ್​ ಮತ್ತು ಕಬೀರ್ ಖಾನ್ ಕಾಂಬಿನೇಶನ್​ನ ಮೊದಲ ಚಿತ್ರವಿದು. ಕಬೀರ್ ಖಾನ್ ಇತ್ತೀಚೆಗೆ ರಣ್​​ವೀರ್ ಸಿಂಗ್ ಮುಖ್ಯಭೂಮಿಕೆಯ ಸ್ಪೋರ್ಟ್ಸ್ ಡ್ರಾಮಾ '83' ಅನ್ನು ನಿರ್ದೇಶಿಸಿದ್ದರು. ಇದೀಗ 'ಚಂದು ಚಾಂಪಿಯನ್'​​ ಮೂಲಕ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:ಬಿಗ್​ ಬಾಸ್ ಫಿನಾಲೆಗೆ ಕ್ಷಣಗಣನೆ: ಗೆಲುವಿನ ನಗೆ ಬೀರೋರು ಯಾರು?

ಇನ್ನೂ ಕಾರ್ತಿಕ್ ಆರ್ಯನ್​ ಕೊನೆಯದಾಗಿ 'ಸತ್ಯಪ್ರೇಮ್ ಕಿ ಕಥಾ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಕಿಯಾರಾ ಅಡ್ವಾಣಿ ಜೊತೆ ಎರಡನೇ ಬಾರಿ ತೆರೆ ಹಂಚಿಕೊಂಡಿದ್ದರು. ಸಮೀರ್ ವಿದ್ವಾನ್ಸ್ ನಿರ್ದೇಶನದ ಈ ಚಿತ್ರ ಬಹುತೇಕ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ. ಇನ್ನೂ ಅನೀಸ್ ಬಾಜ್ಮಿ ಅವರ ಭೂಲ್ ಭುಲೈಯಾ 3, ಆಶಿಕಿ 3, ಹನ್ಸಲ್ ಮೆಹ್ತಾ ಅವರ ಕ್ಯಾಪ್ಟನ್ ಇಂಡಿಯಾ, ಕಿರಿಕ್ ಪಾರ್ಟಿಯ ಹಿಂದಿ ರೀಮೇಕ್ ಮತ್ತು ಕರಣ್ ಜೋಹರ್ ಅವರ ಹೆಸರಿಡದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details