ಫ್ರಾನ್ಸ್ನ ಕೇನ್ಸ್‌ನಲ್ಲಿ ನಡೆಯುವ ಫಿಲ್ಮ್ ಫೆಸ್ಟಿವಲ್ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಲಾ ಸಿನೆಫ್ ವಿಭಾಗದಲ್ಲಿ ಮೈಸೂರಿನ ಚಿದಾನಂದ ಅವರ 'ಸನ್ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ' (Sunflowers Were The First Ones to Know) ಕಿರುಚಿತ್ರ ಪ್ರಶಸ್ತಿ ಪಡೆದುಕೊಂಡು, ಕನ್ನಡದ ಕೀರ್ತಿ ಹೆಚ್ಚಿಸಿದ್ದರು. ಇದೀಗ 'ಸನ್ಫ್ಲವರ್ಸ್' ಆಸ್ಕರ್ ವೇದಿಕೆಯಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದೆ.
ಹೌದು, 97ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಭಾರತೀಯ ಚಲನಚಿತ್ರಗಳು ಪ್ರಾಬಲ್ಯ ಸಾಧಿಸಲಿವೆ. ಇತ್ತೀಚೆಗೆ, ಅಮೀರ್ ಖಾನ್ ಅವರ ಮಾಜಿ ಪತ್ನಿ, ನಿರ್ಮಾಪಕಿ-ನಿರ್ದೆಶಕಿ ಕಿರಣ್ ರಾವ್ ನಿರ್ದೇಶನದ ಸೋಷಿಯಲ್ ಡ್ರಾಮಾ 'ಲಾಪತಾ ಲೇಡೀಸ್' ಆಯ್ಕೆಯಾಗಿದ್ದು, ಇದೀಗ 'ಸನ್ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ' ಕಿರುಚಿತ್ರ ಸಹ ಆಸ್ಕರ್ 2025 ವೇದಿಕೆ ಪ್ರವೇಶಿಸುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಕೇನ್ಸ್ ಚಲನಚಿತ್ರೋತ್ಸವ 2024ರಲ್ಲಿ ಗೆಲುವಿನ ನಗೆ ಬೀರಿದ್ದ ಕನ್ನಡ ಕಿರುಚಿತ್ರವೀಗ ಆಸ್ಕರ್ 2025ಕ್ಕೆ ಅರ್ಹತೆ ಪಡೆದುಕೊಂಡಿದೆ.
'ಸನ್ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ' 97ನೇ ಆಸ್ಕರ್ನಲ್ಲಿ 'ಲೈವ್ ಆ್ಯಕ್ಷನ್ ಕಿರುಚಿತ್ರ ವಿಭಾಗ'ದಲ್ಲಿ ಅರ್ಹತೆ ಪಡೆದಿದೆ. ಈ ಕಿರುಚಿತ್ರವನ್ನು ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನಿರ್ಮಿಸಿದೆ. ನವೆಂಬರ್ 4 ರಂದು, ಎಫ್‌ಟಿಐಐ ಸಾಮಾಜಿಕ ಮಾಧ್ಯಮದ ಮೂಲಕ ಪ್ರೇಕ್ಷಕರು, ಕನ್ನಡಿಗರೊಂದಿಗೆ ಶುಭ ಸುದ್ದಿಯನ್ನು ಹಂಚಿಕೊಂಡಿದೆ. ತನ್ನ ಪೋಸ್ಟ್‌ನಲ್ಲಿ, 'ಸನ್ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ ಅಧಿಕೃತವಾಗಿ 'ಲೈವ್ಆ್ಯಕ್ಷನ್ ಕಿರುಚಿತ್ರ ವಿಭಾಗ'ದಲ್ಲಿ ಆಸ್ಕರ್ 2025ಕ್ಕೆ ಆಯ್ಕೆಯಾಗಿದೆ. ಇದು ಗ್ರಾಮೀಣ ಕಥೆಯನ್ನು ಆಧರಿಸಿದೆ.