ಕರ್ನಾಟಕ

karnataka

ETV Bharat / entertainment

'ಕಲ್ಕಿ 2898 ಎಡಿ': ಭರ್ಜರಿ ಪ್ರೀ-ಬುಕಿಂಗ್‌, ಆರ್​ಆರ್​ಆರ್ ದಾಖಲೆ ಪುಡಿ ಪುಡಿ - Kalki 2898 AD - KALKI 2898 AD

ಇದೇ ಜೂ.27ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿರುವ 'ಕಲ್ಕಿ 2898 ಎಡಿ' ಸಾಕಷ್ಟು ವಿಚಾರಗಳಿಂದ ಗಮನ ಸೆಳೆಯುತ್ತಿದೆ.

Kalki 2898 AD Poster
ಕಲ್ಕಿ 2898 ಎಡಿ ಪೋಸ್ಟರ್ (Film Poster)

By ETV Bharat Karnataka Team

Published : Jun 19, 2024, 1:31 PM IST

ನಾಗ್ ಅಶ್ವಿನ್ ಆ್ಯಕ್ಷನ್​ ಕಟ್​ ಹೇಳಿರುವ ಮುಂದಿನ ಬಹುನಿರೀಕ್ಷಿತ ಸೈನ್ಸ್​ ಫಿಕ್ಷನ್​​​​ ಥ್ರಿಲ್ಲರ್ 'ಕಲ್ಕಿ 2898 ಎಡಿ' ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ಜೂನ್ 27 ರಂದು ತೆರೆಗಪ್ಪಳಿಸಲಿರುವ ಚಿತ್ರದ ಸುತ್ತ ಸಾಕಷ್ಟು ವಿಚಾರಗಳಿದ್ದು, ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿರುವ 'ಕಲ್ಕಿ 2898 ಎಡಿ' ದಾಖಲೆ ನಿರ್ಮಿಸಿದೆ. ಪ್ರೀ ಬುಕಿಂಗ್​​ ವಿಚಾರವಾಗಿ ಸಾಕಷ್ಟು ಸದ್ದು ಮಾಡಿದೆ.

ಇತ್ತೀಚೆಗೆ ವಿದೇಶದಲ್ಲಿ 'ಕಲ್ಕಿ 2898 ಎಡಿ' ಪ್ರೀ-ಬುಕಿಂಗ್‌ ಓಪನ್ ಆಗಿದೆ. ಕೆಲವೇ ಗಂಟೆಗಳಲ್ಲಿ ಮಿಲಿಯನ್ ಡಾಲರ್ ಪ್ರೀ-ಸೇಲ್ ವ್ಯವಹಾರ ನಡೆದಿದ್ದು, ಬ್ಲಾಕ್​ಬಸ್ಟರ್ 'ಆರ್​ಆರ್​ಆರ್​' ದಾಖಲೆಗಳನ್ನು ಪುಡಿಗಟ್ಟಿದೆ. ವ್ಯವಹಾರವೀಗ ಎರಡು ಮಿಲಿಯನ್ ಡಾಲರ್ ತಲುಪಿದೆ. ಈ 2 ಮಿಲಿಯನ್ ಡಾಲರ್ ವ್ಯವಹಾರ, ಕೇವಲ ಉತ್ತರ ಅಮೆರಿಕಾದ್ದು. ಬಿಡುಗಡೆಗೂ ಮುನ್ನವೇ ಶರವೇಗದಲ್ಲಿ ಅಡ್ವಾನ್ಸ್ ಟಿಕೆಟ್​ ವ್ಯವಹಾರ ನಡೆಸುತ್ತಿರುವ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಬಿಡುಗಡೆಗೆ 8 ದಿನ ಬಾಕಿ ಇದ್ದು, ಈ ವ್ಯವಹಾರ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಇನ್ನು ಆಸ್ಟ್ರೇಲಿಯಾದಲ್ಲಿ ಇದುವರೆಗೆ 5,000 ಟಿಕೆಟ್‌ಗಳು ಮಾರಾಟವಾಗಿವೆ ಎಂದು ಸ್ವತಃ ಚಿತ್ರತಂಡ ಮಾಹಿತಿ ನೀಡಿದೆ.

'ಕಲ್ಕಿ 2898 ಎಡಿ' ಪ್ರಮೋಷನ್ ಜೋರಾಗೇ ನಡೆಯುತ್ತಿದೆ. 'ವರ್ಲ್ಡ್ ಆಫ್ ಕಲ್ಕಿ' ಹೆಸರಿನಲ್ಲಿ ವಿಡಿಯೋಗಳು ಬಿಡುಗಡೆಯಾಗಲಿವೆ. ಎಪಿಸೋಡ್​ಗಳಾಗಿ ಚಿತ್ರತಂಡ ಪ್ರಸ್ತುತಪಡಿಸಲಿದೆ. ''ಈ ಕಥೆ ಎಲ್ಲದರ ಕ್ಲೈಮ್ಯಾಕ್ಸ್. ಅತ್ಯುತ್ತಮವಾದುದನ್ನು ನೀಡುತ್ತೇವೆ'' ಎಂದು ನಿರ್ದೇಶಕ ನಾಗ್ ಅಶ್ವಿನ್ ತಿಳಿಸಿದ್ದಾರೆ. ಇನ್ನೂ ಚಿತ್ರದ ಬುಜ್ಜಿ (ವಾಹನ) ಈಗಾಗಲೇ ಹಲವು ನಗರಗಳಲ್ಲಿ ಸದ್ದು ಮಾಡಿರುವುದು ನಿಮಗೆ ಗೊತ್ತೇ ಇದೆ. ಶೀಘ್ರದಲ್ಲೇ ದೆಹಲಿಯ ಬೀದಿಗಳಲ್ಲಿ ರೌಂಡ್ಸ್ ಹಾಕಲಿದೆ. ಪ್ರಚಾರದ ಭಾಗವಾಗಿ 'ಭೈರವ ಗೀತೆ' ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ 5 ಮಿಲಿಯನ್ ವೀಕ್ಷಣೆಗಳೊಂದಿಗೆ ಟ್ರೆಂಡಿಂಗ್ ಆಗಿದೆ.

ಇದನ್ನೂ ಓದಿ:'ಭೈರತಿ ರಣಗಲ್' ಜಾಗಕ್ಕೆ 'ಭೀಮ'ನ ಎಂಟ್ರಿ:‌ ಹ್ಯಾಟ್ರಿಕ್ ಹೀರೋನ ಸಿನಿಮಾ ಮುಂದೂಡಿಕೆ - Bhairathi Ranagal Postponed

ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಜೊತೆಗೆ, ಬಾಲಿವುಡ್​​ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ, ಬಿಗ್ ಬಿ ಅಮಿತಾಭ್ ಬಚ್ಚನ್, ಸೌತ್​​​ ಸೂಪರ್ ಸ್ಟಾರ್ ಕಮಲ್ ಹಾಸನ್, ಬಹುಭಾಷಾ ನಟಿ ದಿಶಾ ಪಟಾನಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ವೈಜಯಂತಿ ಮೂವೀಸ್ ನಿರ್ಮಾಣದ ಭಾರತೀಯ ಚಿತ್ರರಂಗದ ಬಿಗ್​ ಬಜೆಟ್ ಸಿನಿಮಾ. ಈಗಾಗಲೇ ಪೋಸ್ಟರ್​ಗಳು, ಟೀಸರ್, ಹಾಡು, ವಿಡಿಯೋಗಳು​ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ. ಹೀಗೆ ಸಾಕಷ್ಟು ಸದ್ದು ಮಾಡಿರುವ 'ಕಲ್ಕಿ 2898 ಎಡಿ' ಇದೇ 27ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಪ್ರಜ್ವಲ್ ದೇವರಾಜ್ ಅಭಿನಯದ ಮಾಫಿಯಾ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ - Mafia Movie Release Date Fix

ABOUT THE AUTHOR

...view details