ಕರ್ನಾಟಕ

karnataka

ETV Bharat / entertainment

'ಸಲಾರ್ 2' ಶೂಟಿಂಗ್​ನಲ್ಲಿ ಪ್ರಶಾಂತ್​​ ನೀಲ್​: ಜೂ. ಎನ್‌ಟಿಆರ್ ಜೊತೆಗಿನ ಚಿತ್ರ ಸೆಟ್ಟೇರೋದು ಯಾವಾಗ? - PRASHANTH NEEL - PRASHANTH NEEL

ಪ್ರಶಾಂತ್ ನೀಲ್ ಸದ್ಯ 'ಸಲಾರ್ 2' ಶೂಟಿಂಗ್​ನಲ್ಲಿ ನಿರತರಾಗಿದ್ದು, ಜೂನಿಯರ್ ಎನ್‌ಟಿಆರ್ ಜೊತೆಗಿನ ಚಿತ್ರ ಈ ವರ್ಷದ ಅಂತ್ಯದಲ್ಲಿ ಸೆಟ್ಟೇರುವ ಸಾಧ್ಯತೆಯಿದೆ.

Prashanth Neel, Jr NTR
ಪ್ರಶಾಂತ್​​ ನೀಲ್​, ಜೂ. ಎನ್​ಟಿಆರ್​ (ANI image)

By ETV Bharat Karnataka Team

Published : May 8, 2024, 3:25 PM IST

ದಕ್ಷಿಣ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯ ನಿರ್ದೇಶಕರ ಪೈಕಿ ಓರ್ವರಾಗಿ ಗುರುತಿಸಿಕೊಂಡಿರುವ ಪ್ರಶಾಂತ್ ನೀಲ್ ಅವರು ಆರ್‌ಆರ್‌ಆರ್ ಖ್ಯಾತಿಯ ಜೂನಿಯರ್ ಎನ್‌ಟಿಆರ್ ಜೊತೆ ಸಿನಿಮಾ ಮಾಡಲಿರುವುದು ನಿಮಗೆ ತಿಳಿದಿರುವ ವಿಚಾರವೇ. ವರದಿಗಳ ಪ್ರಕಾರ, ಪ್ರಶಾಂತ್ ನೀಲ್ ಸದ್ಯ 'ಸಲಾರ್ 2' ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಜೂನಿಯರ್ ಎನ್‌ಟಿಆರ್ ಜೊತೆಗಿನ ಚಿತ್ರ 2025ಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ.

ಆದಾಗ್ಯೂ ಇತ್ತೀಚಿನ ವರದಿಗಳ ಪ್ರಕಾರ, ಪ್ರಶಾಂತ್​​ ನೀಲ್ ಪ್ರಸ್ತುತ ಜೂನಿಯರ್ ಎನ್‌ಟಿಆರ್ ಅವರ ಚಿತ್ರದ ಸ್ಕ್ರಿಪ್ಟ್‌ ಕೆಲಸದಲ್ಲಿಯೂ ನಿರತರಾಗಿದ್ದಾರೆ. ಹಾಗಾಗಿ ಈ ವರ್ಷದ ಕೊನೆಯಲ್ಲಿ ಸಿನಿಮಾ ನಿರ್ಮಾಣ ಕೆಲಸವನ್ನು ಪ್ರಾರಂಭಿಸಲು ಪ್ಲಾನ್​​​​ ಹಾಕಿಕೊಂಡಿದ್ದಾರೆ. ಅಷ್ಟರಲ್ಲಿ ನಟ ತಮ್ಮ ಎರಡು ಬಹುನಿರೀಕ್ಷಿತ ಚಿತ್ರಗಳಾದ ಯುದ್ಧ 2, ದೇವರ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಲಿದ್ದಾರೆ.

ಕೊರಟಾಲ ಶಿವ ನಿರ್ದೇಶನದಲ್ಲಿ ಬರುತ್ತಿರುವ 'ದೇವರ' 2024ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಬಾಲಿವುಡ್​ ತಾರೆಯರಾದ ಜಾಹ್ನವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದು, ಇದು ಅವರ ತೆಲುಗು ಚೊಚ್ಚಲ ಚಿತ್ರ. ಕರಾವಳಿ ಪ್ರದೇಶಗಳ ಹಿನ್ನೆಲೆಯಲ್ಲಿ ಸಿನಿಮಾ ನಿರ್ಮಾಣಗೊಂಡಿದೆ.

ಬಾಲಿವುಡ್​​ ಬೆಡಗಿ ಜಾಹ್ನವಿ ಕಪೂರ್​​ ಇದೇ ಮೊದಲ ಬಾರಿ ಆರ್​​ಆರ್​ಆರ್​ ಸ್ಟಾರ್ ಜೊತೆ ಸ್ಕ್ರೀನ್​ ಶೇರ್ ಮಾಡಿದ್ದರೆ, ಸೈಫ್ ಅಲಿ ಖಾನ್​​ ವಿಲನ್​​ ಆಗಿ ನಟಿಸಿದ್ದಾರೆ. ಕರಾವಳಿ ಪ್ರದೇಶಗಳನ್ನು ಆಧರಿಸಿದ ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಬಹುನಿರೀಕ್ಷಿತ ಚಿತ್ರದ ಮೊದಲ ಭಾಗ ಅಕ್ಟೋಬರ್​ 10ರಂದು ಚಿತ್ರಮಂದಿರ ಪ್ರವೇಶಿಸಲಿದೆ.

ಇದನ್ನೂ ಓದಿ:ವಿಜಯ್ ವರ್ಮಾ, ತಮನ್ನಾ ಡಿನ್ನರ್ ಡೇಟ್: ಮೋಹಕ ವಿಡಿಯೋ ನೋಡಿ - Vijay Varma Tamannaah

ದೇವರ ಚಿತ್ರವಲ್ಲದೇ ಜೂನಿಯರ್ ಎನ್‌ಟಿಆರ್ ವಾರ್ 2 ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಚಿತ್ರೀಕರಣ ಸಾಗಿದೆ. ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರ 2025ರ ಜುಲೈ 4ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯ ಈ ಚಿತ್ರ 2019ರ ವಾರ್ ಎಂಬ ಆ್ಯಕ್ಷನ್ ಥ್ರಿಲ್ಲರ್​ನ ಮತ್ತೊಂದು ಭಾಗ. ಚಿತ್ರದಲ್ಲಿ ವಾಣಿ ಕಪೂರ್, ಟೈಗರ್ ಶ್ರಾಫ್ ಸಹ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ:'ಪಿಕು'ಗೆ 9 ವರ್ಷ: ಸಿನಿಮಾ ಸೆಟ್​ ಫೋಟೋ ಶೇರ್; ಬಿಗ್​ ಬಿ, ಇರ್ಫಾನ್​​ ಖಾನ್​ ಬಗ್ಗೆ ದೀಪಿಕಾ ಹೇಳಿದ್ದಿಷ್ಟು - Piku

ಜೂನಿಯರ್ ಎನ್​​​ಟಿಆರ್ ಸದ್ಯ ವಾರ್ 2 ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಜುಲೈ ವೇಳೆಗೆ ತಮ್ಮ ಎರಡೂ ಪ್ರೊಜೆಕ್ಟ್​ಗಳನ್ನು ಪೂರ್ಣಗೊಳಿಸಲಿದ್ದಾರೆ. ನಂತರ ಪ್ರಶಾಂತ್​​ ನೀಲ್ ಅವರ ಚಿತ್ರದ ಕಡೆ ಗಮನ ಹರಿಸಲಿದ್ದಾರೆ. ಒಟ್ಟಾರೆ ಈ ನಟ ನಿರ್ದೇಶಕ ಜೋಡಿಯ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ABOUT THE AUTHOR

...view details