ಕರ್ನಾಟಕ

karnataka

ETV Bharat / entertainment

ನಾನು 'ಮಾತನಾಡುವ, ನಡೆಯುವ, ತಿನ್ನುವ ಸ್ಥಿತಿಯಲ್ಲಿರಲಿಲ್ಲ': ನಟಿ ಜಾಹ್ನವಿ ಕಪೂರ್ - Janhvi Kapoor - JANHVI KAPOOR

ಇತ್ತೀಚೆಗೆ ಅನಾರೋಗ್ಯದಿಂದ ಬಳಲಿದ್ದ ನಟಿ ಜಾಹ್ನವಿ ಕಪೂರ್, ಸಂದರ್ಶನವೊಂದರಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Janhvi Kapoor
ನಟಿ ಜಾಹ್ನವಿ ಕಪೂರ್ (ANI)

By ETV Bharat Karnataka Team

Published : Jul 24, 2024, 7:06 PM IST

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇತ್ತೀಚೆಗಷ್ಟೇ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಫುಡ್​ ಪಾಯ್ಸನ್​​​ ಹಿನ್ನೆಲೆ ಆರೋಗ್ಯದಲ್ಲಿ ಏರುಪೇರಾಗಿ, ಬಳಿಕ ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಂಡರು. ತಮ್ಮ ಉಲಜ್ಹ್ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಬಾಲಿವುಡ್​​ ಬೆಡಗಿ, ಸಂದರ್ಶನವೊಂದರಲ್ಲಿ ತಮ್ಮ ಇತ್ತೀಚಿನ ಅನಾರೋಗ್ಯ ಅನುಭವದ ಬಗ್ಗೆ ಹಂಚಿಕೊಂಡರು.

ವರದಿಗಳ ಪ್ರಕಾರ, ಜಾಹ್ನವಿ ಜುಲೈ 16ರ ಮಂಗಳವಾರ, ಚೆನ್ನೈನಿಂದ ಮುಂಬೈಗೆ ಮರಳಿದರು. ಬುಧವಾರದ ವೇಳೆಗೆ ಆರೋಗ್ಯದಲ್ಲಿ ಕೊಂಚ ಏರುಪೇರಾಯಿತು. ಹಾಗಾಗಿ, ಎಲ್ಲಿಗೂ ಹೋಗದೇ ಮನೆಯಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದರು. ಅಪಾಯಿಂಟ್​ಮೆಂಟ್​​ ಡೇಟ್ಸ್​​​ನಲ್ಲಿ ಬದಲಾವಣೆ ಮಾಡಿಕೊಂಡರು.

ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ನಟಿ, "ನಾನು ಚೆನ್ನೈಗೆ ಹೋಗಿದ್ದೆ. ವಿಮಾನ ನಿಲ್ದಾಣದಲ್ಲಿ ಏನೋ ತಿಂದಿದ್ದೆ ಅನಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಎಂದುಕೊಂಡೆ. ನಂತರ, ಎಲ್ಲ ರೀತಿಯ ಟೆಸ್ಟ್​​ಗಳನ್ನು ಮಾಡಿಸಲಾಯಿತು. ದೇಹದಲ್ಲಿ ನೋವು, ದೌರ್ಬಲ್ಯ, ನಡುಗುವಿಕೆಯಂತ ಅನುಭಗಳಾಗಿತ್ತು'' ಎಂದು ಅವರು ತಿಳಿಸಿದರು. ಒಟ್ಟಾರೆ ತಮ್ಮ ಈ ಅನಾರೋಗ್ಯ ಅನುಭವವನ್ನು 'ಭಯಾನಕ' ಎಂದು ಉಲ್ಲೇಖಿಸಿದ್ದಾರೆ.

ವೈದ್ಯಕೀಯ ಪರೀಕ್ಷೆಗಳು ನಟಿಯ ಯಕೃತ್ತಿನ ಕಿಣ್ವದ ಮಟ್ಟವು (liver enzyme levels) ಹೆಚ್ಚಾಗಿದೆ ಎಂಬುದನ್ನು ಸೂಚಿಸಿತು. ನಟಿಗೆ ಚಿಕಿತ್ಸೆ ನೀಡುತ್ತಿದ್ದ ಆರೋಗ್ಯ ವೃತ್ತಿಪರರು ಕಳವಳ ವ್ಯಕ್ತಪಡಿಸಿ, ಸೂಕ್ತ ಚಿಕಿತ್ಸೆ ನೀಡಿದ್ದರು. ಆಸ್ಪತ್ರೆಯಲ್ಲಿರುವಾಗ ತಮ್ಮ ಮುಂಬರುವ ಮ್ಯೂಸಿಕ್​ ವಿಡಿಯೋಗಾಗಿ ಹಾಗೂ ತಮ್ಮ ಇತರ ಜವಾಬ್ದಾರಿಗಳನ್ನು ನಿರ್ವಹಿಸಲು ಫಿಟ್​ ಆಗಿರಲು ತಮ್ಮ ಗಮನ ಕೇಂದ್ರಿಕರಿಸಿದ್ದರು.

ತಾವು ಎದುರಿಸಿದ ಅನಾರೋಗ್ಯ ಸ್ಥಿತಿ, ಚಲಿಸಲು ಸಾಧ್ಯವಾಗದಂತಹ ಕ್ಷಣವನ್ನು ನೆನಪಿಸಿಕೊಂಡರು. ಆ ಕಠಿಣ ಸಂದರ್ಭವನ್ನು 'ಅಂಗವಿಕಲತೆ' ಮತ್ತು 'ಪಾರ್ಶ್ವವಾಯು'ವಿನಂತಹ ಅನುಭವ ಎಂದು ಉಲ್ಲೇಖಿಸಿದರು. ಬಾತ್​​​​ರೂಮ್‌ಗೂ ಹೋಗಲಾಗದಂತಹ ಪರಿಸ್ಥಿತಿ ಇತ್ತು ಎಂಬುದನ್ನು ಒಪ್ಪಿಕೊಂಡರು. "ನನಗೆ ರೆಸ್ಟ್‌ರೂಮ್‌ಗೂ ಹೋಗಲು ಸಾಧ್ಯವಾಗಲಿಲ್ಲ. ಮಾತನಾಡಲು, ನಡೆಯಲು ಅಥವಾ ತಿನ್ನುವ ಸ್ಥಿತಿಯಲ್ಲಿರಲಿಲ್ಲ. ನನ್ನ ದೇಹಕ್ಕೆ ಆಸ್ಪತ್ರೆಯಲ್ಲಿ ಸಿಕ್ಕ ವಿಶ್ರಾಂತಿಯ ಅಗತ್ಯವಿತ್ತೇನೋ ಎಂದು ನನಗನಿಸಿತು" ಎಂದು ಅನುಭವ ಹಂಚಿಕೊಂಡರು.

ಇದನ್ನೂ ಓದಿ:ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟಿ ಜಾಹ್ನವಿ ಕಪೂರ್ - Janhvi Kapoor Hospitalised

ನಟಿಯ ಸಿನಿಮಾ ವಿಚಾರ ಗಮನಿಸುವುದಾದರೆ, ಕೊನೆಯದಾಗಿ 'ಮಿಸ್ಟರ್ ಅಂಡ್​​​​ ಮಿಸಸ್ ಮಹಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮೇ 31ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ರಾಜ್‌ಕುಮಾರ್ ರಾವ್ ಜೊತೆ ಕಾಣಿಸಿಕೊಂಡಿದ್ದರು. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು. ಸದ್ಯದ ಉಲಜ್ಹ್ ಜೊತೆಗೆ, ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನದ ಮುಂಬರುವ ಚಿತ್ರ 'ಕರ್ಣ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ಸೂರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಜೂನಿಯರ್ ಎನ್​ಟಿಆರ್​​ ಜೊತೆ 'ದೇವರ' ಸಿನಿಮಾದಲ್ಲಿ ನಟಿಸಿದ್ದು, ಸೆಪ್ಟೆಂಬರ್ 27ಕ್ಕೆ ಬಹುಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ರಾಮ್ ​ಚರಣ್​​​ ಜೊತೆಗಿನ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ. ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ ಪ್ರಾಜೆಕ್ಟ್​ ಕೂಡ ನಟಿಯ ಬಳಿಯಿದೆ. ಉಲಜ್ಹ್ ಆಗಸ್ಟ್ 2ಕ್ಕೆ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಲಂಡನ್​​​ನಿಂದ ಅನುಷ್ಕಾ - ವಿರಾಟ್​ ಹೊಸ ಫೋಟೋ ವೈರಲ್​​: ಫ್ಯಾನ್ಸ್​​ ಮೆಚ್ಚುಗೆ - Virat Anushka

ABOUT THE AUTHOR

...view details