ಬಾಲಿವುಡ್ ನಟಿ ಜಾನ್ವಿ ಕಪೂರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಂದೆ ಬೋನಿ ಕಪೂರ್ ತಿಳಿಸಿದ್ದಾರೆ. "ಫುಡ್ ಪಾಯ್ಸನಿಂಗ್‌ನಿಂದಾಗಿ ಜಾನ್ವಿ ಅಸ್ವಸ್ಥಗೊಂಡಿದ್ದಳು. ಗುರುವಾರ ಆಸ್ಪತ್ರೆಗೆ ದಾಖಲಿಸಿದ್ದೆವು. ಚಿಕಿತ್ಸೆ ಪಡೆದು ಚೇತರಿಸಿಕೊಂಡ ನಂತರ ನಿನ್ನೆ ಬೆಳಗ್ಗೆ ಮನೆಗೆ ಕರೆತಂದೆವು" ಎಂದು ಹೇಳಿದ್ದಾರೆ.
ಜಾನ್ವಿ ಉತ್ತಮ ಆರೋಗ್ಯಕ್ಕಾಗಿ ಅವರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಇತ್ತೀಚೆಗೆ ಇವರ ಅಭಿನಯದ 'ಮಿಸ್ಟರ್ ಆ್ಯಂಡ್ ಮಿಸಸ್ ಮಹಿ' ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಿರೀಕ್ಷೆ ತಲುಪಲು ವಿಫಲವಾಗಿತ್ತು. ಮತ್ತೊಂದೆಡೆ, 'ದೇವರ' ಜೊತೆಗೆ 'ಉಳಝ್' ಮತ್ತು 'ಸನ್ನಿ ಸಂಸ್ಕರಿಕಿ ತುಳಸಿಕುಮಾರಿ' ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಎರಡು ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿದ್ದರೆ, ಮತ್ತೊಂದು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಈ ಕೆಲಸಗಳನ್ನು ಜಾನ್ವಿ ಬ್ಯುಸಿಯಾಗಿದ್ದಾರೆ.