ಹೈದರಾಬಾದ್: ಬಹುನಿರೀಕ್ಷೆಯ ಚಿತ್ರ 'ಇಂಡಿಯನ್ 2'ನ ಪ್ರಿ ರಿಲೀಸ್ ಕಾರ್ಯಕ್ರಮ ಹೈದರಾಬಾದ್ನಲ್ಲಿ ಭಾನುವಾರ ಸಂಜೆ ಜರುಗಿದ್ದು, ಪ್ಯಾನ್ ಇಂಡಿಯಾ ನಟ ಕಮಲ್ ಹಾಸನ್ ಭಾಗಿಯಾಗಿದ್ದಾರೆ. ನಿರ್ದೇಶಕರ ಶಂಕರ್ ಷಣ್ಮುಖನ್, ಸಿದ್ಧಾರ್ಥ್, ಎಸ್ಜೆ ಸುರ್ಯಾ, ರಕುಲ್ ಪ್ರೀತ್ ಸಿಂಗ್, ಸಮುದ್ರಕನಿ, ಬಾಬಿ ಸಿಂಹ, ಬ್ರಹ್ಮಾನಂದ ಸೇರಿದಂತೆ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ಈ ಅದ್ಬುತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತೆಲಗಿನಲ್ಲಿ ಮಾತು ಆರಂಭಿಸಿದ ಚಿತ್ರದ ನಟ ಕಮಲ್ ಹಾಸನ್ ಇದೇ ವೇಳೆ, ತೆಲಗು ಚಿತ್ರೋದ್ಯಮ ಭಾರತದ ಸಿನಿಮಾವನ್ನು ಜಾಗತಿಕ ಎತ್ತರಕ್ಕೆ ಕೊಂಡೊಯ್ಯಿತು ಎಂದು ಅವರು ಹೊಗಳಿದರು.
ಕಳೆದು ಐದು ದಶಕಗಳಿಂದ ತೆಲುಗು ಜನತೆ ನಿರಂತರವಾಗಿ ತಮಗೆ ಅಭಿಮಾನ ತೋರುತ್ತಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. 52 ವರ್ಷದ ಹಿಂದೆ ತಂತ್ರಜ್ಞನಾಗಿ ನಾನು ಹೈದರಾಬಾದ್ಗೆ ಮೊದಲು ಬಂದೆ. ತೆಲಗು ಜನರು ಅಂದು ನನ್ನ ಕೈ ಹಿಡಿದು ಇಲ್ಲಿಯವರೆಗೆ ಮಾರ್ಗದರ್ಶನ ತೋರಿದ್ದಾರೆ ಎಂದು ಭಾವುಕರಾದರು.
ನಿಮ್ಮ ಅಭಿಮಾನಕ್ಕೆ ನಾನು ಚಿರ ಋಣಿಯಾಗಿದ್ದೇನೆ. ಭಾರತದ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿದೆ. ಇದರಲ್ಲಿ ತೆಲುಗು ಸಿನಿಮಾದ ಅತಿ ದೊಡ್ಡ ಭಾಗವನ್ನು ಹೊಂದಿದೆ. ತೆಲುಗು ಜನರು ನಮ್ಮ ಜೀವನದಲ್ಲಿ ಅತಿ ದೊಡ್ಡ ಪಾತ್ರವನ್ನು ಹೊಂದಿದ್ದಾರೆ ಎಂದು ಮರೊ ಚರಿತ್ರ, ಸಾಗರ ಸಂಗಂ ಮತ್ತು ಸ್ವಾತಿ ಮುತ್ಯಂ ಮುಂತಾದ ಚಿತ್ರಗಳ ಮೆಲಕು ಹಾಕಿದರು.