ಕರ್ನಾಟಕ

karnataka

ETV Bharat / entertainment

ಇನ್ನು 4 ದಿನದಲ್ಲಿ ದೊಡ್ಡ ಪರದೆ ಮೇಲೆ ಇಂಡಿಯನ್ 2; ಇನ್ನೂ ಆರಂಭವಾಗದ ಮುಂಗಡ ಬುಕಿಂಗ್​​ - Indian 2

ಕಮಲ್ ಹಾಸನ್ ನಟಿಸಿರುವ ಮತ್ತು ಎಸ್. ಶಂಕರ್ ನಿರ್ದೇಶನದ ಬ್ಲಾಕ್‌ಬಸ್ಟರ್ ಚಲನಚಿತ್ರ ಇಂಡಿಯನ್‌ನ ಮುಂದುವರಿದ ಭಾಗವಾದ 'ಇಂಡಿಯನ್ 2' ಜುಲೈ 12 ರಂದು ಬಿಡುಗಡೆಯಾಗಲಿದೆ. ಪಾತ್ರವರ್ಗದ ಹೊರತಾಗಿಯೂ ಸಿನಿಮಾ ಪ್ರಿ-ರಿಲೀಸ್ ಹಾಗೂ ಬುಕಿಂಗ್ ಕಳೆಗುಂದಿದೆ.

By ETV Bharat Karnataka Team

Published : Jul 8, 2024, 6:58 PM IST

Kamal Haasan
ಕಮಲ್ ಹಾಸನ್ (Film poster)

ಹೈದರಾಬಾದ್ : ನಟ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹೆಚ್ಚು ಪ್ರಚಾರ ಹಾಗೂ ನಿರೀಕ್ಷಿತ ಚಿತ್ರ 'ಇಂಡಿಯನ್ 2' ಭಾರತೀಯ ಸಾಂಪ್ರದಾಯಿಕ ಚಲನಚಿತ್ರದ ಮುಂದುವರೆದ ಭಾಗವಾಗಿದೆ. ಎಸ್ ಶಂಕರ್ ನಿರ್ದೇಶನದ ಈ ಸಿನಿಮಾ ಜುಲೈ 12 ರಂದು ಬೆಳ್ಳಿ ಪರದೆಯ ಮೇಲೆ ಬರಲು ಸಿದ್ಧವಾಗಿದೆ. ಈಗಾಗಲೇ ವಿಶ್ವಾದ್ಯಂತ ಪ್ರಿ-ರಿಲೀಸ್ ಕಾರ್ಯಕ್ರಮಗಳು ನಡೆಯುತ್ತಿವೆ. ಇಂಡಿಯನ್ 2 ಹಿಂದಿನ ಹೈ-ಬಜೆಟ್, ಸ್ಟಾರ್-ಸ್ಟಡ್ಡ್ ಮತ್ತು ಪ್ಯಾನ್-ಇಂಡಿಯನ್ ನಿರ್ಮಾಣಗಳ ಯಶಸ್ಸನ್ನು ಪ್ರತಿಬಿಂಬಿಸಲು ಸಿದ್ಧವಾಗಿದೆ.

ಬ್ಲಾಕ್ಬಸ್ಟರ್ ಸಿನಿಮಾ ವಿಕ್ರಂನ ಯಶಸ್ಸಿನ ನಂತರ, ಕಮಲ್ ಹಾಸನ್ ಅವರ ಮುಂಬರುವ ಸಿನಿಮಾ ಅಪಾರ ಪ್ರಾಮುಖ್ಯತೆ ಹೊಂದಿದೆ. ಅದೇನೇ ಇದ್ದರೂ, ನಟ ಕಮಲ್ ಹಾಸನ್, ಎಸ್‌ ಜೆ ಸೂರ್ಯ, ಕಾಜಲ್ ಅಗರ್‌ವಾಲ್, ಪ್ರಿಯಾ ಭವಾನಿ ಶಂಕರ್, ರಾಕುಲ್ ಪ್ರೀತ್ ಸಿಂಗ್ ಮತ್ತು ಸಿದ್ಧಾರ್ಥ್ ಸೇರಿದಂತೆ ಐದಕ್ಕೂ ಹೆಚ್ಚು ಪ್ರಮುಖ ನಟರ ತಾರಾ ಬಳಗ ಈ ಸಿನಿಮಾದ ಹೆಗ್ಗಳಿಕೆಯಾಗಿ ಕಂಡರೂ ಚಿತ್ರದ ಬಿಡುಗಡೆ ಪೂರ್ವದ ಬಝ್ ಕೊರತೆಯಿದೆ.

'ಇಂಡಿಯನ್ 2' ಸಿನಿಮಾದ ಉತ್ಸಾಹ, ಉನ್ಮಾದ ಮತ್ತು ನಿರೀಕ್ಷಿತ ಗಲ್ಲಾಪೆಟ್ಟಿಗೆಯ ಯಶಸ್ಸನ್ನು ಸ್ವಲ್ಪಮಟ್ಟಿಗೆ ತಗ್ಗಿದೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೂರು ವಿಭಿನ್ನ ಭಾಷೆಗಳಲ್ಲಿ ಈ ಚಿತ್ರವು ವಿಶ್ವಾದ್ಯಂತ ತೆರೆಗೆ ಬರಲು ಕೇವಲ ನಾಲ್ಕು ದಿನಗಳು ಉಳಿದಿವೆಯಾದರೂ, ಬುಕಿಂಗ್ ಇನ್ನೂ ಪ್ರಾರಂಭವಾಗಿಲ್ಲ. ಇದಲ್ಲದೇ, ಸಿನಿಮಾ ಮೂರು ಗಂಟೆಗಳ ರನ್ಟೈಮ್ ಹೊಂದಿದೆ. ತಮಿಳು, ಹಿಂದಿ, ಮತ್ತು ತೆಲುಗಿನಲ್ಲಿ 'ಇಂಡಿಯನ್​ 2' ಬಿಡುಗಡೆಯಾಗಲು ಸಜ್ಜಾಗಿದೆ. 'ಇಂಡಿಯನ್ 2' ಸಿನಿಮಾ ಶಂಕರ್ ಮತ್ತು ಅನಿರುದ್ಧ್ ರವಿಚಂದರ್ ನಡುವಿನ ಮೊದಲ ಸಹಯೋಗವನ್ನು ಗುರುತಿಸುತ್ತದೆ.

ಈ ಆಕ್ಷನ್-ಪ್ಯಾಕ್ಡ್ ಸೀಕ್ವೆಲ್‌ನಲ್ಲಿ ಕಮಲ್ ಹಾಸನ್ ವೀರಶೇಖರನ್ ಸೇನಾಪತಿಯ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಎಸ್‌. ಜೆ ಸೂರ್ಯ, ಕಾಜಲ್ ಅಗರ್ವಾಲ್, ಪ್ರಿಯಾ ಭವಾನಿ ಶಂಕರ್, ರಾಕುಲ್ ಪ್ರೀತ್ ಸಿಂಗ್, ಸಿದ್ಧಾರ್ಥ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್ ಮತ್ತು ಸಮುದ್ರಕನಿ ಸೇರಿದಂತೆ ತಾರಾಬಳಗವಿದೆ.

ಇದನ್ನೂ ಓದಿ :ಜಾಗತಿಕ ಮಟ್ಟದಲ್ಲಿ ಭಾರತೀಯ ಸಿನಿಮಾಗಳು ಮಿಂಚಲು ತೆಲುಗು ಸಿನಿಮಾಗಳ ಪಾತ್ರ ಹೆಚ್ಚಿದೆ; ಕಮಲ್​ ಹಾಸನ್​ - Kamal Haasan Hails Telugu Cinema

ABOUT THE AUTHOR

...view details