ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಭಾನುವಾರ ಸಂಜೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ್ದರು. ಜನಪ್ರಿಯ ತಾರೆ ಯಾವುದೇ ಸಿನಿಮಾ ಶೂಟಿಂಗ್ ಸಲುವಾಗಿ ಬಂದಿಲ್ಲ, ಬದಲಿಗೆ ಬೆಂಗಳೂರಿನಲ್ಲಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ. ಜೊತೆಗೆ, ಬೆಂಗಳೂರು ಮತ್ತು ಕನ್ನಡ ಸಿನಿಮಾ ಮೇಲಿನ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನಲ್ಲಿರುವ ಐಶಾರಾಮಿ ಕ್ಲಬ್ನಲ್ಲಿ ನಡೆದ ಡಿಜೆ ಪಾರ್ಟಿಗೆ ಸನ್ನಿ ಲಿಯೋನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ನಿನ್ನೆಯ ಪಾರ್ಟಿ ಬಲು ಅದ್ಧೂರಿಯಾಗೇ ನಡೆದಿದೆ. ಪಾರ್ಟಿಯಲ್ಲಿ ಸನ್ನಿ ಲಿಯೋನ್ ಡ್ಯಾನ್ಸ್ ಪ್ರದರ್ಶನ ಸಹ ನೀಡಿದ್ದಾರೆ. ಸನ್ನಿ ಡಿಜೆ ಪಾರ್ಟಿಯಲ್ಲಿ ಭಾಗವಹಿಸಿದ್ದ ಬೆಂಗಳೂರು ಜನತೆ ಕುಣಿದು ಕುಪ್ಪಳಿಸಿ ಸಖತ್ ಎಂಜಾಯ್ ಮಾಡಿದ್ದಾರೆ.
ನಟಿ ಸನ್ನಿ ಲಿಯೋನ್ (Photo: ETV Bharat) ಬುಕ್ ಮೈ ಶೋನಲ್ಲಿ ಈ ಪಾರ್ಟಿಯ ಟಿಕೆಟ್ಳನ್ನು ಮಾರಾಟ ಮಾಡಲಾಗಿತ್ತು. ಪಾರ್ಟಿಗೆ ಎಂಟ್ರಿ ಕೊಡುವ ಮುನ್ನ ಮಾಧ್ಯಮದವರೊಟ್ಟಿಗೆ ಸನ್ನಿ ಲಿಯೋನ್ ಸಂವಾದ ನಡೆಸಿದರು. ಈ ಸಮಯದಲ್ಲಿ ಬೆಂಗಳೂರಿನ ಬಗ್ಗೆ, ಪಾರ್ಟಿ ಬಗ್ಗೆ ಮತ್ತು ಕನ್ನಡ ಸಿನಿಮಾ ಬಗ್ಗೆ ತಮ್ಮ ಮನದಾಳ ಹಂಚಿಕೊಂಡರು.
''ನನಗೆ ಬೆಂಗಳೂರು ಎಂದರೆ ಇಷ್ಟ. ಹಾಗಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ಈ ಡಿಜೆ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದು, ಸಖತ್ ಎಕ್ಸೈಟ್ ಆಗಿದ್ದೇನೆ. ಕನ್ನಡದಲ್ಲಿ ಅವಕಾಶಗಳು ಬಂದರೆ ಸಿನಿಮಾ ಮಾಡುತ್ತೇನೆ. ಡಿಜೆ ಪಾರ್ಟಿಯಲ್ಲಿ ಎಲ್ಲರೂ ಎಂಜಾಯ್ ಮಾಡೋಣ, ಫನ್ ಮಾಡೋಣ'' - ನಟಿ ಸನ್ನಿ ಲಿಯೋನ್.
ನಟಿ ಸನ್ನಿ ಲಿಯೋನ್ (Photo: ETV Bharat) ಇದನ್ನೂ ಓದಿ:ಪತ್ನಿ ಗೀತಾ ಸಮೇತ ತಿರುಪತಿಗೆ ಮುಡಿ ಕೊಟ್ಟ ನಟ ಶಿವರಾಜ್ ಕುಮಾರ್
ನಟಿ ಸನ್ನಿ ಲಿಯೋನ್ ಸಾಮಾನ್ಯವಾಗಿ ಸಿನಿಮಾ ಶುಟಿಂಗ್ ಸಲುವಾಗಿ ಬೆಂಗಳೂರಿಗೆ ಆಗಾಗ್ಗೆ ಬರುತ್ತಿದ್ದರು. ಆದ್ರೆ ಅದು ಅವರ ತಂಡವನ್ನು ಹೊರತುಪಡಿಸಿ ಬೇರೆ ಯಾರಿಗೂ ಹೆಚ್ಚು ತಿಳಿಯುತ್ತಿರಲಿಲ್ಲ. ಆದ್ರೆ ಈ ಬಾರಿ ಬಂದಿದ್ದು ಒಂದೊಳ್ಳೆ ಕ್ಷಣವನ್ನು ಸವಿಯುವ ಸಲುವಾಗಿ. ಅದರಂತೆ ಕಳೆದ ದಿನ ಮನಮೋಹಿನಿ ಬೆಂಗಳೂರಿನಲ್ಲಿ ಪ್ರೇಕ್ಷಕರನ್ನು ಮನೆಸೆಳೆಯುವಲ್ಲಿ ಯಶ ಕಂಡಿದ್ದಾರೆ. ಹೈವೋಲ್ಟೇಜ್ ಡಿಜೆ ಪಾರ್ಟಿಯಲ್ಲಿ ಬಾಲಿವುಡ್ ಬ್ಯೂಟಿ ಕುಣಿದು ಕುಪ್ಪಳಿಸಿದ್ದಾರೆ. ಜೊತೆಗೆ ಪ್ರೇಕ್ಷಕರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ. ಟಿಕೆಟ್ ಅನೌನ್ಸ್ ಆಗಿದ್ದ ಹಿನ್ನೆಲೆ, ಬೆಂಗಳೂರಿನ ಹೆಚ್ಚಿನ ಸಂಖ್ಯೆಯ ಜನರು ಈ ಪಾರ್ಟಿಗೆ ಬಂದು ಸೇರಿದ್ದರು. ಸನ್ನಿ ಲಿಯೋನ್ ಜೊತೆ ಕುಣಿದು ಕುಪ್ಪಳಿಸಿದರು.
ನಟಿ ಸನ್ನಿ ಲಿಯೋನ್ (Photo: ETV Bharat) ಇದನ್ನೂ ಓದಿ:5 ದಿನದಲ್ಲಿ 900 ಕೋಟಿ: ಇದು 'ಪುಷ್ಪ'ರಾಜನ ವ್ಯವಹಾರ; ಆರ್ಆರ್ಆರ್, ಕಲ್ಕಿ ದಾಖಲೆ ಮೀರಿಸಿದ ಸಿನಿಮಾ
ಇನ್ನೂ ಸನ್ನಿ ಲಿಯೋನ್ ಬಗ್ಗೆ ವಿಶೇಷ ಪರಿಚಯ ಬೇಕೆ? ಡಿಜೆ ಸದ್ದಿಗೆ ಭರ್ಜರಿಯಾಗಿ ಮೈಕುಣಿಸುವಲ್ಲಿ ನಿಪುಣೆ. ತಮ್ಮ ನೃತ್ಯದ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸುತ್ತಾರೆ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಅದರಂತೆ ಕಳೆದ ಸಂಜೆ ನಡೆದ ಪಾರ್ಟಿಯಲ್ಲಿ ಪ್ರೇಕ್ಷಕರು ಮನಸೋಲುವಂತೆ ನಟಿ ಹೆಜ್ಜೆ ಹಾಕಿದ್ದರು. ಈವೆಂಟ್ ಕೆಲ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಜನಪ್ರಿಯ ತಾರೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.