ಕರ್ನಾಟಕ

karnataka

ETV Bharat / entertainment

'ಎಡಿಹೆಚ್‌ಡಿ'ಯಿಂದ ಬಳಲುತ್ತಿರುವ ಫಹಾದ್ ಫಾಸಿಲ್: ಶಾಕಿಂಗ್​ ಸುದ್ದಿ ಕೊಟ್ಟ ಸೂಪರ್ ಸ್ಟಾರ್ - Fahadh Faasil - FAHADH FAASIL

'ಆವೇಶಂ' ಸಿನಿಮಾ ಯಶಸ್ಸಿನಲ್ಲಿರುವ ಸೌತ್ ಸ್ಟಾರ್ ಫಹಾದ್ ಫಾಸಿಲ್, ತಮಗೆ ಎಡಿಹೆಚ್‌ಡಿ ಸಮಸ್ಯೆ ಇರುವುದಾಗಿ ಹೇಳಿಕೊಂಡಿದ್ದಾರೆ.

Fahadh Faasil
ಸೌತ್ ಸ್ಟಾರ್ ಫಹಾದ್ ಫಾಸಿಲ್ (A still from film)

By ETV Bharat Karnataka Team

Published : May 28, 2024, 4:26 PM IST

ಫಹಾದ್ ಫಾಸಿಲ್, ದಕ್ಷಿಣ ಚಿತ್ರರಂಗದ ಹೆಸರಾಂತ ನಟ. ಈವರೆಗೆ ಹಲವು ಹಿಟ್​​ ಚಿತ್ರಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ತಮ್ಮ ಲೇಟೆಸ್ಟ್ 'ಆವೇಶಂ' ಸಿನಿಮಾ ಯಶಸ್ಸಿನಲ್ಲಿರುವ 41ರ ಹರೆಯದ ನಟ ಇದೀಗ ತಮ್ಮ ಅನಾರೋಗ್ಯದ ಬಗ್ಗೆ ಬಹಿರಂಗಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಫಹಾದ್ ಫಾಸಿಲ್ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಏಪ್ರಿಲ್​ನಲ್ಲಿ ತೆರೆಕಂಡ ನಟನ ಆವೇಶಂ ಸಿನಿಮಾ ದೊಡ್ಡ ಮಟ್ಟದ ಗೆಲುವು ಕಂಡಿದೆ. ಈ ಸಿನಿಮಾದಲ್ಲಿನ ಅವರ ಪಾತ್ರ ಸಿನಿಪ್ರಿಯರನ್ನು ಸೆಳೆಯುವಲ್ಲಿ ಯಶ ಕಂಡಿದೆ. 'ಆವೇಶಂ' ಯಶಸ್ಸಿ ನಲೆಯಲ್ಲಿ ತೇಲುತ್ತಿರುವ ಫಹಾದ್ ಫಾಸಿಲ್ ಬಗ್ಗೆ ಶಾಕಿಂಗ್​ ವಿಚಾರ ಹೊರಬಿದ್ದಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಬಿಚ್ಚಿಟ್ಟಿದ್ದಾರೆ.

ತಾವು ಎಡಿಹೆಚ್‌ಡಿ (Attention-deficit/hyperactivity disorder) ಎದುರಿಸುತ್ತಿರುವುದಾಗಿ ಹಿರಂಗಪಡಿಸಿದ್ದಾರೆ. ಕೇರಳದ ಕೋತಮಂಗಲಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಫಹಾದ್ ಫಾಸಿಲ್ ತಮ್ಮ ಇತ್ತೀಚಿನ ಸಮಸ್ಯೆ ಮತ್ತು ಎಡಿಹೆಚ್‌ಡಿ ಕುರಿತು ವೈದ್ಯರೊಂದಿಗೆ ನಡೆಸಿದ ಚರ್ಚೆಯನ್ನು ಹಂಚಿಕೊಂಡರು.

ಪೀಸ್ ವ್ಯಾಲಿ ಚಿಲ್ಡ್ರನ್​​ ವಿಲೇಜ್‌ನ ಈವೆಂಟ್‌ನಲ್ಲಿ, ಫಹಾದ್ ಎಡಿಹೆಚ್‌ಡಿ ಗುಣಪಡಿಸುವ ಬಗ್ಗೆ ಮಾತನಾಡಿದರು. ವೈದ್ಯರೊಂದಿಗಿನ ಮಾತುಕತೆ ವಿವರಿಸುತ್ತಾ, "ಚಿಕ್ಕ ವಯಸ್ಸಿನಲ್ಲಿ ರೋಗ ಪತ್ತೆಯಾದರೆ ಅದನ್ನು ಸುಲಭವಾಗಿ ಗುಣಪಡಿಸಬಹುದು ಎಂದು ಅವರು ನನಗೆ ತಿಳಿಸಿದರು. 41ನೇ ವಯಸ್ಸಿಗೆ ರೋಗ ಪತ್ತೆಯಾದರೆ ಅದನ್ನು ಗುಣಪಡಿಸಬಹುದೇ ಎಂದು ನಾನು ಅವರಲ್ಲಿ ಕೇಳಿದೆ. ನನಗೆ ಎಡಿಹೆಚ್‌ಡಿ ಸಮಸ್ಯೆ ಇದೆ'' ಎಂದು ತಿಳಿಸಿದರು.

ಇದನ್ನೂ ಓದಿ:'ಕೆಜಿಎಫ್'​​ ಹಾದಿಯಲ್ಲಿ 'ಪುಷ್ಪ'? ಬ್ಲಾಕ್​ಬಸ್ಟರ್ ಸಿನಿಮಾಗಳ ಪಾರ್ಟ್ 3 ಸೆಟ್ಟೇರೋದ್ಯಾವಾಗ? - KGF And Pushpa

ಸಿನಿಮಾ ವಿಚಾರ ಗಮನಿಸುವುದಾದರೆ, ಫಹಾದ್ ಫಾಸಿಲ್​​ ಅವರ 'ಆವೇಶಂ' ಏಪ್ರಿಲ್ 11 ರಂದು ಚಿತ್ರಮಂದಿರ ಪ್ರವೇಶಿಸಿತು. ಜಾಗತಿಕವಾಗಿ 100 ಕೋಟಿ ರೂಪಾಯಿ ಸಂಗ್ರಹಿಸಿದೆ. ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಥಿಯೇಟರ್ ಯಶಸ್ಸಿನ ನಂತರ, ಆವೇಶಂ ಪ್ರೈಮ್ ವಿಡಿಯೋದಲ್ಲೂ ಲಭ್ಯವಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಸದ್ಯ ರಜನಿಕಾಂತ್ ಅವರ ವೆಟ್ಟೈಯನ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ಅಕ್ಟೋಬರ್‌ನಲ್ಲಿ ತೆರೆಕಾಣಲಿದೆ. ಅದಕ್ಕೂ ಮುನ್ನ ಆಗಸ್ಟ್ 15 ರಂದು ಅಲ್ಲು ಅರ್ಜುನ್ ಜೊತೆಗಿನ ಪುಷ್ಪ 2: ದಿ ರೂಲ್ ಬಿಡುಗಡೆ ಆಗಲಿದೆ. ಪುಷ್ಪ ಸೀಕ್ವೆಲ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಲಲಿದ್ದಾರೆ. ಇದಲ್ಲದೇ ಸೂಪರ್ ಹಿಟ್ ದೃಶ್ಯಂ ಖ್ಯಾತಿಯ ನಿರ್ದೇಶಕ ಜೀತು ಜೋಸೆಫ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ತಮಿಳು ಚಿತ್ರ ಮಾರೀಸನ್ ಕೂಡ ನಟನ ಕೈಯಲ್ಲಿದೆ.

ಇದನ್ನೂ ಓದಿ:ದೀಕ್ಷಿತ್ ಶೆಟ್ಟಿ ನಟನೆಯ 'ಬ್ಯಾಂಕ್ ಆಫ್​ ಭಾಗ್ಯಲಕ್ಷ್ಮೀ' ಅನಿಮೇಷನ್‌ ಟೀಸರ್​ಗೆ ಮೆಚ್ಚುಗೆ - Bank Of Bhagyalakshmi

ABOUT THE AUTHOR

...view details