ಹೈದರಾಬಾದ್: ತಮ್ಮ ಗರ್ಲ್ಫ್ರೆಂಡ್ ಸಬಾ ಆಜಾದ್ ನಟನೆಯ 'ಮಿನಿಮಮ್' ಚಿತ್ರಕ್ಕೆ ಬಾಲಿವುಡ್ ನಟ ಹೃತಿಕ್ ರೋಶನ್ ಪ್ರೋತ್ಸಾಹ ನೀಡಿದ್ದಾರೆ. 26ನೇ ಯುಕೆ ಏಷ್ಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಚಿತ್ರ ಪ್ರದರ್ಶನದ ಕಾಣುತ್ತಿದ್ದು, ತಮ್ಮ ಗೆಳತಿಗೆ ಪ್ರೀತಿ, ಬೆಂಬಲ ವ್ಯಕ್ತಪಡಿಸಲು ನಟ ಹೃತಿಕ್ ಹಿಂದೆ ಬಿದ್ದಿಲ್ಲ. ನಟಿ, ಗಾಯಕಿಯಾಗಿ ಗುರುತಿಸಿಕೊಂಡಿರುವ ಸಬಾ ಆಜಾದ್ ಚಿತ್ರ ಯುಕೆ ಏಷ್ಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನ ಕಾಣುತ್ತಿರುವ ಹಿನ್ನಲೆ ನಟ ಹರ್ಷ ವ್ಯಕ್ತಪಡಿಸಿ, ತನ್ನ ಪ್ರೀತಿಯ ಮನದನ್ನೆಗೆ ಶುಭ ಕೋರಿದ್ದಾರೆ.
ಸಬಾ ನಟನೆಯ 'ಮಿನಿಮಮ್' ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಹೃತಿಕ್ ರೋಶನ್, ಇದೀಗ ಇನ್ಸ್ಟಾಗ್ರಾಂನಲ್ಲಿ ಆಕೆಯನ್ನು ಮನಸಾರೆ ಹೊಗಳಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಂನ ಸ್ಟೋರಿಯಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದು, ಚಿತ್ರ 26ನೇ ಯುಕೆ ಏಷ್ಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನ ಕಾಣಲಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ತಮ್ಮ ಗೆಳತಿ ಜೊತೆಗೆ ಚಿತ್ರ ತಂಡವನ್ನು ಹೊಗಳಿರುವ ನಟ ರೋಶನ್, ಚಿತ್ರದ ವೀಕ್ಷಣೆಯು ಅದ್ಬುತ ಅನುಭವ ಆಗಿರಲಿದೆ ಎಂಬ ಅಡಿಬರಹದ ಜೊತೆಗೆ ಕೈತಟ್ಟುವ ಮತ್ತು ಹೃದಯದ ಎಮೋಜಿಯೊಂದಿಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ರುಮನಾ ಮೊಲ್ಲಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಸಬಾ ಜೊತೆಗೆ ನಮಿತಾ ದಾಸ್, ಗೀತಾಂಜಲಿ ಕಲುಕರ್ಣಿ, ರುಮನ, ನಸೀರುದ್ದೀನ್ ಶಾ ನಟನೆ ಮಾಡುತ್ತಿದ್ದಾರೆ.