ಕರ್ನಾಟಕ

karnataka

ETV Bharat / entertainment

ಯಶ್ 'ಟಾಕ್ಸಿಕ್​​​'ಗಾಗಿ ಭಾರತಕ್ಕೆ ಬಂದ ಹಾಲಿವುಡ್ ಸ್ಟಂಟ್ ಮ್ಯಾನ್​​: ರಾಕಿಂಗ್​ ಸ್ಟಾರ್​​ ಹಾಡಿ ಹೊಗಳಿದ ಜೆ.ಜೆ ಪೆರಿ - JJ PERRY JOINS YASH TOXIC

ಯಶ್ ಮುಖ್ಯಭೂಮಿಕೆಯ 'ಟಾಕ್ಸಿಕ್​​​' ಆ್ಯಕ್ಷನ್​ ಕಂಪೋಸ್ ಮಾಡಲು ಹಾಲಿವುಡ್ ಸ್ಟಂಟ್ ಮ್ಯಾನ್ ಜೆ.ಜೆ ಪೆರಿ (J.J Perry) ಭಾರತಕ್ಕೆ ಬಂದಿಳಿದಿದ್ದಾರೆ.

JJ Perry Joins Yash Toxic
ಯಶ್​ ಟಾಕ್ಸಿಕ್​ ತಂಡ ಸೇರಿದ ಜೆ.ಜೆ ಪೆರಿ (Photo: ETV Bharat)

By ETV Bharat Entertainment Team

Published : Nov 9, 2024, 3:49 PM IST

'ಕೆಜಿಎಫ್ ಚಾಪ್ಟರ್ 2' ಬಳಿಕ ರಾಕಿಂಗ್ ಸ್ಟಾರ್ ಅಭಿನಯಿಸುತ್ತಿರುವ ಹೈ ವೋಲ್ಟೇಜ್ ಸಿನಿಮಾ ''ಟಾಕ್ಸಿಕ್''. ಚಿತ್ರದ ಮೋಷನ್ ಪಿಕ್ಚರ್​ನಿಂದಲೇ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಖತ್​ ಟಾಕ್ ಆಗುತ್ತಿರುವ ಚಿತ್ರವಿದು. ಬಹು ಭಾಷೆಯ ಸ್ಟಾರ್ ನಟ, ನಟಿಯರ ವಿಚಾರಕ್ಕೂ ಬೇಜಾನ್ ಗಮನ ಸೆಳೆದಿದೆ.

ಕೆಲ ದಿನಗಳ ಹಿಂದಷ್ಟೇ, ಫಾಸ್ಟರ್ ಅಂಡ್ ಫ್ಯೂರಿಯಸ್, ಜುರಾಸಿ ಪಾರ್ಕ್ ಅಂತಹ ಸೂಪರ್ ಹಿಟ್ ಸಿನಿಮಾಗಳ ಹಾಲಿವುಡ್ ಸ್ಟಂಟ್ ಮ್ಯಾನ್ ಜೆ.ಜೆ ಪೆರ್ರಿ (J.J Perry) ಬೆಂಗಳೂರಿಗೆ ಬಂದು ಟಾಕ್ಸಿಕ್ ಚಿತ್ರದ ಆ್ಯಕ್ಷನ್ ಸಿಕ್ವೇನ್ಸ್ ಮಾಡಿದ್ದಾರೆ ಎಂಬ ಅಂತೆ ಕಂತೆಗಳು ಕೇಳಿಬಂದಿತ್ತು. ಇದೀಗ, ಟಾಕ್ಸಿಕ್ ಚಿತ್ರದ ಸ್ಟಂಟ್ಸ್​​​ ಅನ್ನು ಜೆ.ಜೆ ಪೆರ್ರಿ ಕಂಪೋಸ್ ಮಾಡುತ್ತಿರೋದು ನಿಜ. ವಿಚಾರವೀಗ ಆಫೀಶಿಯಲ್ ಆಗಿದೆ.

ಮುಂಬೈಗೆ ಬಂದಿಳಿದ ಸಾಹಸ ನಿರ್ದೇಶಕ:ಈ‌ ಮಾತಿಗೆ ಸಾಕ್ಷಿಯೆಂಬಂತೆ ಸಾಹಸ ನಿರ್ದೇಶಕ ಜೆ.ಜೆ ಪೆರಿ ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಟಾಕ್ಸಿಕ್ ಸಿನಿಮಾ ಶೂಟಿಂಗ್ ಸೆಟ್​ಗೆ ವಿಸಿಟ್ ಕೊಡುತ್ತಿದ್ದೇನೆ. ಈ ಬಗ್ಗೆ ಸಾಕಷ್ಟು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಸದ್ಯ ಟಾಕ್ಸಿಕ್​​ ಶೂಟಿಂಗ್​ ಮುಂಬೈನಲ್ಲಿ ಭರದಿಂದ ಸಾಗಿದೆ. ಜೆ.ಜೆ ಪೆರಿ ಸೆಟ್​ಗೆ ಎಂಟ್ರಿ ಕೊಡಲಿದ್ದಾರೆ. ಏರ್​ಪೋರ್ಟ್​​ನಲ್ಲಿ ಪಾಪರಾಜಿಗಳೊಂದಿಗೆ ಮಾತನಾಡಿದ ಅವರು, ''ಭಾರತವನ್ನು ಪ್ರೀತಿಸುತ್ತೇನೆ. ನಾನು ಯಶ್​ ಜೊತೆ ಫನ್ ಮಾಡಲಿದ್ದೇನೆ. ಅವರು ಕ್ರೇಜಿ. ನನ್ನ ಸಹೋದರ. ಈ ಪ್ರಾಜೆಕ್ಟ್​ ಅದ್ಭುತವಾಗಿ ಮೂಡಿ ಬರಲಿದೆ. ನಾನು ಬಹಳ ಉತ್ಸುಕನಾಗಿದ್ದೇನೆ. ಯಶ್​ ಅದ್ಭುತ ನಟ, ಅತ್ಯುತ್ತಮ ಆ್ಯಕ್ಷನ್​ ಸ್ಟಾರ್​. ಒಳ್ಳೆಯ ವ್ಯಕ್ತಿತ್ವ. ನನ್ನ ಸಹೋದರ. ನನ್ನ ಸ್ನೇಹಿತ ಎಂದು ಹೇಳಿಕೊಳ್ಳಲು ಬಹಳ ಹೆಮ್ಮೆಯಾಗುತ್ತಿದೆ. ನಿರ್ದೇಶಕಿ ಗೀತು ಮೋಹನ್ ದಾಸ್​ ಜೊತೆ ಕೆಲಸ ಮಾಡಲು ಸಖತ್​ ಎಕ್ಸೈಟ್ ಆಗಿದ್ದೇನೆ. ಭಾರತದಲ್ಲಿ ಇವರೆಲ್ಲರೊಂದಿಗೆ ಕೆಲಸ ಮಾಡುವುದು ಖುಷಿಯ ವಿಚಾರ'' ಎಂದು ಹೇಳಿಕೊಂಡಿದ್ದಾರೆ.

ಆ ವಿಡಿಯೋ ವೈರಲ್ ಆಗಿತ್ತು:ಒಂದು ವರ್ಷದ ಹಿಂದೆ ಯಶ್ ರೈಫಲ್ ಹಿಡಿದು ಶೂಟ್ ಮಾಡುತ್ತಿದ್ದ ಒಂದು ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋ ನೋಡಿದವರು ಯಶ್ ಶೂಟಿಂಗ್ ಗೇಮ್ ಆಡುತ್ತಿದ್ದಾರೆಂದು ಅಂದುಕೊಂಡಿದ್ದರು. ಆದ್ರೆ ಅದು ಕೇವಲ ಶೂಟಿಂಗ್ ಗೇಮ್ ಅಲ್ಲ. ಅಂದೇ ಯಶ್ ಈ ರೈಫಲ್ ಶೂಟಿಂಗ್ ಟ್ರೈನಿಂಗ್ ಅನ್ನು ಹಾಲಿವುಡ್ ಸಾಹಸ ನಿರ್ದೇಶಕನಿಂದ ಪಡೆದಿದ್ದರು ಎಂಬುದಕ್ಕೆ ಸದ್ಯ ವೈರಲ್​ ಆಗುತ್ತಿರುವ ವಿಡಿಯೋ ಸಾಕ್ಷಿ.

ಇನ್ನೂ, ಹಾಲಿವುಡ್ ಸ್ಟಾರ್ಸ್​​ಗೆ ಸ್ಟಂಟ್ ಡಬಲ್ ಆಗಿ ಜೆಜೆ ಪೆರಿ ಕೆಲಸ ಮಾಡಿದ್ದಾರೆ. 80ರ ದಶಕದ ಸಿನಿಮಾಗಳಲ್ಲಿ ಸ್ಟಂಟ್ ಡಬಲ್ ಆಗಿ, ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರ ಕಟ್ಟುಮಸ್ತಾದ ಮೈಕಟ್ಟು, ಸ್ಟಂಟ್ ಮಾಡುವ ಕಲೆ ಹೊಂದಿರುವುದರಿಂದ ಹಾಲಿವುಡ್ ಸಿನಿಮಾ ನಟರ ಅಚ್ಚುಮೆಚ್ಚಿನ ಸ್ಟಂಟ್ ಮ್ಯಾನ್ ಆಗಿದ್ದಾರೆ.

ಪ್ಯಾನ್​​ ವರ್ಲ್ಡ್ ಮಟ್ಟದಲ್ಲಿ ಚಿತ್ರ ತಯಾರಿ:ಟಾಕ್ಸಿಕ್ ಬಗ್ಗೆ ಗಮನಿಸೋದಾದ್ರೆ, ಪ್ಯಾನ್​​ ವರ್ಲ್ಡ್ ಮಟ್ಟದಲ್ಲಿ ಚಿತ್ರ ತಯಾರಾಗುತ್ತಿದೆ. ಡ್ರಗ್ ಮಾಫಿಯಾ ಕಥೆಯೆಂದು ನಂಬಲಾಗಿದೆ. ಹೀಗಾಗಿ ಈ ಸಿನಿಮಾದಲ್ಲಿ ಒಳ್ಳೆ ಶೂಟರ್ ಹಾಗೂ ಕಾರ್ ರೇಸರ್ ಆಗಿ ಯಶ್​​ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಜೆಜೆ ಪೆರಿ ಬಳಿ ರೈಫಲ್ ಶೂಟ್ ಹಾಗೂ ಕಾರ್ ರೇಸಿಂಗ್ ತರಬೇತಿಯನ್ನು ಪಡೆದಿದ್ದಾರೆ ಅಂತಾ ಯಶ್ ಆಪ್ತರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:12 ವರ್ಷಗಳಲ್ಲಿ 80 ಸಿನಿಮಾ: ಸ್ಯಾಂಡಲ್​​ವುಡ್​​ ಉನ್ನತಿಯ ಕನಸು ಕಂಡಿದ್ದ ಶಂಕರ್​ ನಾಗ್​​ ಜನ್ಮದಿನ

ಜೊತೆಗೆ ಯಶ್ ಲುಕ್, ಗೆಟಪ್ ಎಲ್ಲದರ ಬಗ್ಗೆಯೂ ಅಭಿಮಾನಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದ ಅನೌನ್ಸ್‌ಮೆಂಟ್ ಟೀಸರ್ ನೋಡಿದವರು ಇದು ಡ್ರಗ್ಸ್ ಮಾಫಿಯಾ ಕುರಿತಾದ ಸಿನಿಮಾ ಎನ್ನುತ್ತಿದ್ದಾರೆ. ಈಗಾಗಲೇ ಯಶ್ ಜೊತೆ ನಯನತಾರ ಅಭಿನಯಿಸಿದ್ದಾರೆ ಎಂಬ ಮಾಹಿತಿ ಇದ್ದು, ಇದೀಗ ಹಾಲಿವುಡ್ ಸ್ಟಂಟ್ ಮಾಸ್ಟರ್ ಟಾಕ್ಸಿಕ್ ತಂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ:ಪ್ರಭಾಸ್​ 'ಕಣ್ಣಪ್ಪ' ನೋಟ, ಅಲ್ಲು ಅರ್ಜುನ್​-ಶ್ರೀಲೀಲಾ 'ಪುಷ್ಪ 2' ಡ್ಯಾನ್ಸ್ ಲುಕ್​​​ ಲೀಕ್​​

ಈ ಸಿನಿಮಾವನ್ನು ಮಲಯಾಳಂ ಲೇಡಿ ಡೈರೆಕ್ಟರ್ ಗೀತು ಮೋಹನ್‌ ದಾಸ್ ನಿರ್ದೇಶಿಸುತ್ತಿರೋದು ಮತ್ತೊಂದು ಕುತೂಹಲ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ನಿರ್ಮಾಪಕ ವೆಂಕಟ್ ನಾರಾಯಣ್ ಕೋನಂಕಿ ಹಾಗೂ ಯಶ್ ಸೇರಿ ಬರೋಬ್ಬರಿ 500 ಕೋಟಿ ರೂ. ವೆಚ್ಚದಲ್ಲಿ ಟಾಕ್ಸಿಕ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಬಹುನಿರೀಕ್ಷಿತ ಚಿತ್ರವನ್ನು ಮುಂದಿನ ವರ್ಷ ಏಪ್ರಿಲ್​ನಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್​ ಹಾಕಿಕೊಳ್ಳಲಾಗಿದೆ.

ABOUT THE AUTHOR

...view details