ಹೈದರಾಬಾದ್:ನಟ ಶಾಹೀದ್ ಕಪೂರ್ 'ತೇರಿ ಬಾತೊ ಮೆ ಹೈಸಾ ಉಲ್ಜಾ ಜಿಯಾ' ಸಿನಿಮಾದಲ್ಲಿ ನಟಿ ಕೃತಿ ಸನೋನ್ ಜೊತೆ ನಟಿಸಿದ್ದು, ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಕೊಂಚ ತಡವಾಗಿ ಚಿತ್ರದ ಪ್ರಚಾರ ಆರಂಭಿಸಿರುವ ಅವರು, ಅನೇಕ ವಿಚಾರಗಳ ಕುರಿತು ಮುಕ್ತವಾಗಿ ಚರ್ಚಿಸಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿರುವ ಅವರು, ವೈಯಕ್ತಿಕ ಮತ್ತು ಖಾಸಗಿ ಜೀವನದ ಕುರಿತು ಮಾತನಾಡಿದ್ದಾರೆ. ಅಲ್ಲದೇ ಇದೇ ವೇಳೆ, ನಟ ಹೃತಿಕ್ ರೋಶನ್ ಅವರು ಸ್ಟಾರ್ಡಮ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದಾರೆ
ಸ್ಟಾರ್ಡಮ್ ಹೊರೆ ಕುರಿತು ಮಾತನಾಡಿದ್ದ ನಟ ಹೃತಿಕ್ ರೋಶನ್, ಯಾವುದೇ ನಿರೀಕ್ಷೆಗಳು ಇಲ್ಲದೇ ಹೋದಾಗ ತಾವು ಕೊಂಚ ನೆಮ್ಮದಿಯಾಗಿರುತ್ತೇನೆ. ಸೆಲೆಬ್ರಿಟಿ ಎಂಬುದು ಜವಾಬ್ದಾರಿ. ಅಲ್ಲದೇ, ನನಗೆ ನಟನೆಯ ಕೌಶಲ್ಯವನ್ನು ಕಳೆದುಕೊಳ್ಳುವ ಇಚ್ಛೆ ಇಲ್ಲ. ಇದೇ ಕಾರಣಕ್ಕೆ ನಾನು ಸೆಲಿಬ್ರಿಟಿ ಮನಸ್ಥಿತಿಯನ್ನು ತ್ಯಾಗ ಮಾಡುತ್ತೇನೆ ಎಂದಿದ್ದರು. ಇದೀಗ ಶಾಹೀದ್ ಇದಕ್ಕೆ ವಿರುದ್ಧವಾಗಿ ಸಮಸ್ಯೆ ಹೊಂದಿರುವುದಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಈ ಬೇಲಿಯ ವಿರುದ್ಧ ಬದಿಯಲ್ಲಿ ಇದ್ದೇನೆ. ನನಗೆ ವಿರುದ್ಧವಾದ ಸಮಸ್ಯೆ ಇದೆ ಎಂದು ಕಪೂರ್ ತಿಳಿಸಿದ್ದಾರೆ.
ಹೃತಿಕ್ ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿದೆ. ಕಾರಣ ಅದೇ ರೀತಿಯ ಪರಿಸ್ಥಿತಿಯನ್ನು ನಾನು ಅನುಭವಿಸಿದ್ದೆ. ಆದರೆ, ಅವರು ಆಯ್ಕೆ ಮಾಡಿದ ಸಿನಿಮಾಗಳು ಬೇರೆ. ನಾನು ಮಾಡುವ ನಿರ್ಧಾರಗಳು ಮತ್ತು ನನ್ನ ಆಯ್ಕೆಗಳು ಭಿನ್ನ. ಅವರ ಪ್ರಯಾಣವೂ ನನಗಿಂತ ವಿಭಿನ್ನವಾಗಿದೆ ಎಂದರು.