ಕರ್ನಾಟಕ

karnataka

ETV Bharat / entertainment

ಬಹಳ ವಿಭಿನ್ನವಾಗಿ ಬಿಡುಗಡೆಯಾಯ್ತು ದೀಪಿಕಾ ದಾಸ್​ರ 'ಪಾರು ಪಾರ್ವತಿ' ಪೋಸ್ಟರ್: ವಿಡಿಯೋ ನೋಡಿ - Paru Parvathy - PARU PARVATHY

ದೀಪಿಕಾ ದಾಸ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ''ಪಾರು ಪಾರ್ವತಿ''ಯ ಪೋಸ್ಟರ್ ಅನಾವರಣಗೊಂಡಿದೆ.

Paru Parvathy film team
ಪಾರು ಪಾರ್ವತಿ ಚಿತ್ರತಂಡ (ETV Bharat)

By ETV Bharat Karnataka Team

Published : Sep 30, 2024, 8:27 PM IST

ಕನ್ನಡದ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್' ಸ್ಪರ್ಧಿಗಳು ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚೋದು ಹೊಸತೇನೆಲ್ಲ. ಕನ್ನಡ ಕಿರುತೆರೆ ಮತ್ತು ಬಿಗ್​ ಬಾಸ್​​​ ಮೂಲಕ ಹೆಚ್ಚು ಗಮನ ಸೆಳೆದಿರುವ ದೀಪಿಕಾ ದಾಸ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ''ಪಾರು ಪಾರ್ವತಿ''. ರೋಹಿತ್ ಕೀರ್ತಿ ಆ್ಯಕ್ಷನ್​ ಕಟ್​ ಹೇಳುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಜೋರಾಗೇ ನಡೆಯುತ್ತಿದೆ. ಇತ್ತೀಚೆಗೆ ಈ ಚಿತ್ರದ ಮೊದಲ ಪೋಸ್ಟರ್ ಬಹಳ ವಿಭಿನ್ನವಾಗಿ ಅನಾವರಣಗೊಂಡಿದೆ.

ಈ ಪೋಸ್ಟರ್​​​ಗೆ "ಇನ್ಫಿನಿಟಿ ರೋಡ್" ಎಂಬ ಹೆಸರಿಡಲಾಗಿದೆ. ಟ್ರಾವೆಲ್, ಅಡ್ವೆಂಚರ್‌ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್​ ಅನ್ನು ಪ್ರಕೃತಿಯ ಮಡಿಲಲ್ಲೇ ಬಿಡುಗಡೆ ಮಾಡಿರುವುದು ವಿಶೇಷ.

ಅರ್ಥಪೂರ್ಣವಾಗಿ ನಡೆದ ಸಮಾರಂಭ:ಥಾರ್ ಬೆಂಗಳೂರು ಸಂಸ್ಥೆಯ ಸಹಯೋಗದೊಂದಿಗೆ ಇತ್ತೀಚೆಗೆ ಈ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು. ಪ್ರಕೃತಿ ಸಂರಕ್ಷಣೆಯ ಸಂದೇಶ ನೀಡಲು ಗಿಡ ನೆಡುವುದರ ಮೂಲಕ ಸಮಾರಂಭವನ್ನು ಇನ್ನಷ್ಟು ಅರ್ಥಪೂರ್ಣವಾಗಿ ನಡೆಸಿದರು. ಗಿಡ ನೆಡುವುದು ಮಾತ್ರವಲ್ಲದೇ, ಅದರ ಪೋಷಣೆಗೆ ಬೇಕಾದ ಕ್ರಮಗಳ ಬಗ್ಗೆ ಕೂಡಾ ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಸುಮಾರು ನೂರಕ್ಕೂ ಅಧಿಕ ಜನರಿಗೆ ಗಿಡಗಳನ್ನು ನೀಡಿದರು. ಎಮ್​ಆರ್​ಟಿ ಮ್ಯೂಸಿಕ್ ಯೂಟ್ಯೂಬ್ ಚಾನಲ್​ನಲ್ಲಿ ಫಸ್ಟ್ ಲುಕ್ ಪೋಸ್ಟರ್ ಲಾಂಚ್​​ನ ವಿಡಿಯೋ ಅನಾವರಣಗೊಂಡಿದ್ದು, ಸಖತ್​​ ವೈರಲ್ ಆಗುತ್ತಿದೆ.

ಇದನ್ನೂ ಓದಿ:'ಭೈರಾದೇವಿ' ಶೋನಲ್ಲಿ ಪ್ರೇಕ್ಷಕಿ ಮೈ ಮೇಲೆ ಬಂತು ದೇವರು?: ಹತ್ತಾರು ಮಂದಿ ಹಿಡಿದರೂ ಬಗ್ಗದ ಮಹಿಳೆಯ ವಿಡಿಯೋ ಇಲ್ಲಿದೆ - Bhairadevi

ಚಿತ್ರದ ಬಗ್ಗೆ ನಿರ್ದೇಶಕ ಹೇಳುವುದಿಷ್ಟು:ದೀಪಿಕಾ ದಾಸ್ ಹಾಗೂ ಪೂನಂ ಸರ್ ನಾಯಕ್ ಮತ್ತು ಫವಾಜ್ ಅಶ್ರಫ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಚಿತ್ರದ ಬಗ್ಗೆ ನಿರ್ದೇಶಕ ರೋಹಿತ್ ಕೀರ್ತಿ ಮಾತನಾಡಿ ಇನ್ಫಿನಿಟಿ ರೋಡ್ ಪೋಸ್ಟರ್,‌ ಎರಡು ಪಾತ್ರಗಳ ಪ್ರಯಾಣ ಹಾಗೂ ಅವರ ಸಾಹಸಗಳನ್ನು ತೋರಿಸುತ್ತದೆ‌. ಅಂತ್ಯವಿಲ್ಲದ ಅನ್ವೇಷಣೆ ಪ್ರತಿನಿಧಿಸುತ್ತದೆ. ಫಸ್ಟ್ ಲುಕ್ ಪೋಸ್ಟರ್​​ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅಕ್ಟೋಬರ್ 3ರಂದು ಚಿತ್ರದ ಆಡಿಯೋ ರಿಲೀಸ್ ಆಗಲಿದೆ.‌ 'EIGHTEEN THIRTY SIX' ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಂನಾಥ್ ಈ ಸಿನಿಮಾವನ್ನ‌ ನಿರ್ಮಾಣ ಮಾಡಿದ್ದಾರೆ. ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ:3 ದಿನಗಳಲ್ಲಿ ಬರೋಬ್ಬರಿ 300 ಕೋಟಿ ಸಂಪಾದಿಸಿದ 'ದೇವರ': ಜೂ.ಎನ್​ಟಿಆರ್​ ಸಿನಿಮಾಗೆ ಭಾರಿ ಮೆಚ್ಚುಗೆ - Devara Box Office Collection

ABOUT THE AUTHOR

...view details