ಕರ್ನಾಟಕ

karnataka

ETV Bharat / entertainment

53 ಲಕ್ಷಕ್ಕೂ ಅಧಿಕ ಟಿಕೆಟ್​ ಮಾರಾಟ: ರಾಮಮಂದಿರಕ್ಕೆ 'ಹನುಮಾನ್' ದೇಣಿಗೆ ಎಷ್ಟು ಗೊತ್ತಾ? - 53 ಲಕ್ಷಕ್ಕೂ ಅಧಿಕ ಟಿಕೆಟ್​ ಮಾರಾಟ

ಅಯೋಧ್ಯೆ ರಾಮಮಂದಿರಕ್ಕೆ ನೀಡಲಿರುವ ದೇಣಿಗೆ ಕುರಿತು 'ಹನುಮಾನ್' ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ.

hanuman team donating  donating huge amount  ram mandir  53 ಲಕ್ಷಕ್ಕೂ ಅಧಿಕ ಟಿಕೆಟ್​ ಮಾರಾಟ  ರಾಮಮಂದಿರಕ್ಕೆ ಹನುಮಾನ ದೇಣಿಗೆ
ರಾಮಮಂದಿರಕ್ಕೆ ‘ಹನುಮಾನ’ ದೇಣಿಗೆ ಎಷ್ಟು ಕೋಟಿ ಗೊತ್ತಾ?

By ETV Bharat Karnataka Team

Published : Jan 21, 2024, 2:23 PM IST

Updated : Jan 21, 2024, 10:39 PM IST

ಹೈದರಾಬಾದ್​:ಸಿನಿಮಾ ಬಿಡುಗಡೆಗೂ ಮುನ್ನವೇ 'ಹನುಮಾನ್' ಚಿತ್ರತಂಡ ಕೊಟ್ಟ ಭರವಸೆ ಉಳಿಸಿಕೊಂಡಿದೆ. ಪ್ರೀ ರಿಲೀಸ್ ಈವೆಂಟ್‌ನಲ್ಲಿ ಬಹಿರಂಗಪಡಿಸಿದಂತೆ ಅಯೋಧ್ಯೆ ರಾಮಮಂದಿರಕ್ಕೆ ಪ್ರತಿ ಟಿಕೆಟ್‌ಗೆ ರೂ.5 ದೇಣಿಗೆ ನೀಡುವುದಾಗಿ ಘೋಷಿಸಲಾಗಿತ್ತು. ಇಲ್ಲಿಯವರೆಗೆ 53,28,211 ಟಿಕೆಟ್‌ಗಳು ಮಾರಾಟವಾಗಿವೆ. ಅದರಿಂದ ಪಡೆದ 2,66,41,055 ರೂ. ನೀಡಲಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ. 'ಹನುಮಾನ್ ಫಾರ್ ಶ್ರೀರಾಮ' ಎಂದು ಹೇಳುವ ಮೂಲಕ ಈ ವಿವರಗಳನ್ನು ಬಹಿರಂಗಪಡಿಸಿದೆ.

ಪ್ರಶಾಂತ್ ವರ್ಮಾ ನಿರ್ದೇಶನದ ಈ ಚಿತ್ರದ ನಾಯಕ ತೇಜ ಸಜ್ಜ. ಅಮೃತಾ ಅಯ್ಯರ್ ನಾಯಕಿ. ವರಲಕ್ಷ್ಮಿ ಶರತ್‌ಕುಮಾರ್, ವಿನಯ್ ರಾಯ್, ಗೆಟಪ್ ಶ್ರೀನು ಮತ್ತು ವೆನ್ನೆಲ ಕಿಶೋರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಕೋಟಿ' ಹೆಸರಿನ ಕೋತಿ ಪಾತ್ರಕ್ಕೆ ಖ್ಯಾತ ನಾಯಕ ರವಿತೇಜ ಧ್ವನಿ ನೀಡಿದ್ದಾರೆ. ಕಥೆ ಅಂಜನಾದ್ರಿಯ ಕಾಲ್ಪನಿಕ ಪ್ರದೇಶದ ಸುತ್ತ ಸುತ್ತುತ್ತದೆ. ಪ್ರಶಾಂತ್ ವರ್ಮ ಮಹಾವೀರನ ಕಥೆಯನ್ನು ನಿರ್ದೇಶಿಸಿದ ರೀತಿ ಪ್ರೇಕ್ಷಕರನ್ನು ಆಶ್ಚರ್ಯಗೊಳಿಸಿದೆ. ವಿಷುಯಲ್ ಎಫೆಕ್ಟ್ ಸಿನಿಮಾದ ಹೈಲೈಟ್ ಆಗಿ ಹೊರಹೊಮ್ಮಿದೆ.

ನಾಗ ಚೈತನ್ಯ ಮೆಚ್ಚುಗೆ:ನಟ ನಾಗ ಚೈತನ್ಯ ಇತ್ತೀಚೆಗೆ ಚಿತ್ರ ವೀಕ್ಷಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಚಿತ್ರತಂಡವನ್ನು ಶ್ಲಾಘಿಸುತ್ತಿದ್ದಾರೆ. 'ಹನುಮಾನ' ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಪಡೆದ ಪ್ರಶಾಂತ್ ವರ್ಮಾ ಅವರಿಗೆ ಅಭಿನಂದನೆಗಳು. ಕಥೆ ಮತ್ತು ಅದನ್ನು ತೆರೆಗೆ ತಂದ ರೀತಿ ಅದ್ಭುತ. ಸಿನಿಮಾದುದ್ದಕ್ಕೂ ನಿನ್ನ ಬ್ರಹ್ಮಾಂಡದಲ್ಲಿ ಮುಳುಗಿದ್ದೆ. ಹನುಮಂತನ ಪಾತ್ರದಲ್ಲಿ ತೇಜ ಸಜ್ಜ ಉತ್ತಮ ಅಭಿನಯ ನೀಡಿದ್ದಾರೆ. ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:'ಹನುಮಾನ್​​', 'ಗುಂಟೂರು ಖಾರಂ'​ ಕಲೆಕ್ಷನ್​​ ಮಾಹಿತಿ ನಿಮಗಾಗಿ

ಪ್ರತಿ ಟಿಕೆಟ್‌ನಲ್ಲಿ ₹5 ದೇಣಿಗೆ:ಸಂಕ್ರಾಂತಿಗೆ ಟಾಲಿವುಡ್​ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿರುವ 'ಹನುಮಾನ್' ಚಿತ್ರದಿಂದ ರಾಮಮಂದಿರಕ್ಕೆ ಕೋಟ್ಯಂತರ ರೂಪಾಯಿ ದೇಣಿಗೆ ಹೋಗುತ್ತಿದೆ. ಚಿತ್ರತಂಡ ಪ್ರೀ ರಿಲೀಸ್ ಸಮಯದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿತ್ತು. ಮಾರಾಟವಾಗುವ ಚಿತ್ರದ ಪ್ರತಿ ಟಿಕೆಟ್‌ನಲ್ಲಿ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ 5 ರೂಪಾಯಿ ದೇಣಿಗೆ ನೀಡುವ ನಿರ್ಧಾರವನ್ನು ಮೆಗಾಸ್ಟಾರ್ ಚಿರಂಜೀವಿ ಘೋಷಿಸಿದ್ದರು.

'ಹನುಮಾನ್​' ಚಿತ್ರದ ಪ್ರೀ ರಿಲೀಸ್ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಿರಂಜೀವಿ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದರು. "ಈವೆಂಟ್‌ಗೆ ಬರಲು ಕೆಲವು ಕಾರಣಗಳಿವೆ. ನನ್ನ ಆರಾಧ್ಯದೈವ ಅಮ್ಮಣ್ಣನ ನಂತರ ಅನುಕ್ಷಣ ಪ್ರಾರ್ಥಿಸುವ ದೇವರು ಆಂಜನೇಯಸ್ವಾಮಿ. ಅವರನ್ನೇ ಪ್ರಧಾನವಾಗಿಟ್ಟುಕೊಂಡು ತಯಾರಾದ ಚಿತ್ರವಿದು. ಟ್ರೇಲರ್ ಮತ್ತು ಟೀಸರ್ ನೋಡಿದಾಗ ಪ್ರತಿ ದೃಶ್ಯದಲ್ಲೂ ನೈಪುಣ್ಯತೆ ನೋಡಿದ್ದೇನೆ. ಈ ಬಗ್ಗೆ ನಿರ್ದೇಶಕರೊಂದಿಗೆ ಮಾತನಾಡಿ ಸಾಕಷ್ಟು ವಿಚಾರ ತಿಳಿದುಕೊಂಡೆ. ಹನುಮಂತನನ್ನು ಶಿಸ್ತು, ಬದ್ಧತೆಯಿಂದ ಪೂಜಿಸಿ ಈ ಮಟ್ಟಕ್ಕೆ ಬೆಳೆದೆ. ಹೀಗೆ ವೇದಿಕೆಯಲ್ಲಿ ನಾನು ಹನುಮಂತನ ಬಗ್ಗೆ ಮಾತನಾಡಲೇಬೇಕು ಅನ್ನಿಸಿತು. ಅದಕ್ಕಾಗಿಯೇ ಈ ಕಾರ್ಯಕ್ರಮಕ್ಕೆ ಬರಬೇಕೆಂದು ಆಹ್ವಾನಿಸಿದಾಗ ಮರುಮಾತಿಲ್ಲದೆ ಒಪ್ಪಿಕೊಂಡೆ" ಎಂದು ಚಿರಂಜೀವಿ ಹೇಳಿದ್ದರು.

Last Updated : Jan 21, 2024, 10:39 PM IST

ABOUT THE AUTHOR

...view details