ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಆದ ಸ್ಟಾರ್ಡಮ್ ಹೊಂದಿರುವ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೊನೆಯ ಚಿತ್ರ "ಕೃಷ್ಣಂ ಪ್ರಣಯ ಸಖಿ" ಯಶಸ್ವಿಯಾಗಿದೆ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ಗಣಿ ಮುಖ್ಯಭೂಮಿಕೆಯ ಹೊಸ ಚಿತ್ರಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದರು. ಇತ್ತೀಚೆಗಷ್ಟೇ ತೆಲುಗಿನ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ 'ಪೀಪಲ್ ಮೀಡಿಯಾ ಫ್ಯಾಕ್ಟರಿ'ಯು ಗಣೇಶ್ ಮುಖ್ಯಭೂಮಿಕೆಯಲ್ಲಿ ಸಿನಿಮಾ ಬರಲಿದೆ ಎಂದು ಘೋಷಿಸಿತ್ತು. ಇದೀಗ ಪೋಸ್ಟರ್ ಒಂದನ್ನು ಅನಾವರಣಗೊಳಿಸಿ, ಟೈಟಲ್ ಟೀಸರ್ ಬಿಡುಗಡೆ ದಿನಾಂಕವನ್ನೂ ಘೋಷಿಸಿದೆ.
2024ರ ಆಗಸ್ಟ್ನಲ್ಲಿ ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗಪ್ಪಳಿಸಿ, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುವಲ್ಲಿ ಯಶಸ್ವಿಯಾಗಿತ್ತು. ಸಾಲು ಸಾಲು ಸಿನಿಮಾಗಳ ಪೈಕಿ ಸಖತ್ ಸದ್ದು ಮಾಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ಚಿತ್ರ "ಕೃಷ್ಣಂ ಪ್ರಣಯ ಸಖಿ" ಆಗಸ್ಟ್ 15ರಂದು ತೆರೆಗಪ್ಪಳಿಸಿತ್ತು. ಚಂದನವನದ ಹಾಸ್ಯ ಗಣಿ ನಟನೆಯಲ್ಲಿ ಮೂಡಿಬಂದ ಈ ಪ್ರೇಮ್ಕಹಾನಿ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸಿನಿಮಾ ಕೆಲ ಚಿತ್ರಮಂದಿರಗಳಲ್ಲಿ ಶತದಿನಗಳ ಕಾಲ ಓಡುವ ಮೂಲಕ ಬಹುತೇಕರ ಗಮನ ಸೆಳೆದಿತ್ತು. ಅಪಾರ ಸಂಖ್ಯೆಯ ಅಭಿಮಾನಿಗಳು ಗೋಲ್ಡನ್ ಸ್ಟಾರ್ನ ಮುಂದಿನ ಪ್ರಾಜೆಕ್ಟ್ಗಳಿಗಾಗಿ ಕಾತರರಾಗಿದ್ದ ಸಂದರ್ಭ ಟಾಲಿವುಡ್ನ 'ಪೀಪಲ್ ಮೀಡಿಯಾ ಫ್ಯಾಕ್ಟರಿ' ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿತು. ಇದೀಗ ಸಿನಿಮಾದ ಪೋಸ್ಟರ್ ಅನಾವರಣಗೊಂಡಿದೆ.
ಇದನ್ನೂ ಓದಿ:ಕ್ಯಾನ್ಸರ್ ಗೆದ್ದ ಕರುನಾಡ ಚಕ್ರವರ್ತಿ : ಡಬಲ್ ಪವರ್ನೊಂದಿಗೆ ಬರುತ್ತೇನೆಂದ ಶಿವರಾಜ್ಕುಮಾರ್