ಬಿಗ್ ಬಾಸ್ ಕನ್ನಡ ಸೀಸನ್ 11ರ ಎಂಟನೇ ವಾರದ ಆಟ ಸಾಗಿದೆ. ಈಗಾಗಲೇ 50 ದಿನಗಳನ್ನು ಪೂರ್ಣಗೊಳಿಸಿರುವ ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಕ್ಕೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿಗೆ ಒಟ್ಟು ಮೂವರು ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸಿದ್ದಾರೆ. ಮೊದಲ ವೈಲ್ಡ್ಕಾರ್ಡ್ ಸ್ಪರ್ಧಿ ಹನುಮಂತು ತಮ್ಮ ಆಟದ ವೈಖರಿ, ಮುಗ್ಧತೆ ಮತ್ತು ಸರಳತೆಯಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಈ ವಾರ ಆಗಮಿಸಿರುವ ಶೋಭಾ ಶೆಟ್ಟಿ ಮತ್ತು ರಜತ್ ತಮ್ಮ ಆರ್ಭಟದ ಮೂಲಕ ಸದ್ದು ಮಾಡುತ್ತಿದ್ದಾರೆ. ಆರಂಭದಲ್ಲೇ ಸಿಕ್ಕಾಪಟ್ಟೆ ದನಿ ಏರಿಸುತ್ತಿದ್ದು, ಅವರ ಈ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಟಾಸ್ಕ್ ಭಾಗವಾಗಿ, ಬಾಲ್ ಒಂದನ್ನು ನಿರ್ದಿಷ್ಟ ಮಾರ್ಗದ ಮೂಲಕ ತಂದು ತಮಗೆ ಮೀಸಲಿರುವ ಸ್ಥಳದಲ್ಲಿರಿಸಬೇಕು. ಟಾಸ್ಕ್ ಭಾಗವಾಗಿ ಉಗ್ರಂ ಮಂಜು, ತ್ರಿವಿಕ್ರಮ್, ರಜತ್, ಗೋಲ್ಡ್ ಸುರೇಶ್ ನಿಲ್ಲುತ್ತಾರೆ. ಆಟದ ಭರದಲ್ಲಿ ರಜತ್ ಮತ್ತು ಸುರೇಶ್ ನಡುವೆ ಮನಸ್ತಾಪ ಶುರುವಾಗಿದೆ. ನಂತರ ಇದು ದೊಡ್ಡ ಗಲಾಟೆಗೆ ಕಾರಣವಾಗಿದೆ. ಇದರ ಸುಳಿವನ್ನು ''ಆಕ್ರೋಶಕ್ಕೂ, ಆವೇಶಕ್ಕೂ ಸತ್ವಪರೀಕ್ಷೆ!'' ಎಂಬ ಕ್ಯಾಪ್ಷನ್ನೊಂದಿಗೆ ಅನಾವರಣಗೊಂಡ ಪ್ರೋಮೋ ಬಿಟ್ಟುಕೊಟ್ಟಿದೆ.
ರಜತ್ ಮತ್ತು ಸುರೇಶ್ ಎದೆಗೆ ಎದೆ ಕೊಟ್ಟು ಮಾತಿನ ಮಳೆ ಸುರಿಸಿದ್ದಾರೆ. ರಜತ್ ಬಾಯಿಂದ '...... ಮಗನೇ' ಎಂಬಂತಹ ಕೆಲ ಅವಾಚ್ಯ ಶಬ್ದಗಳು ಕೇಳಿಬಂದಿವೆ. ಕೆರಳಿದ ಸುರೇಶ್, ಇವರು ನಮ್ಮ ಅಪ್ಪನಿಗೆ ಬೈದಿದ್ದಾರೆ. ನಾನು ಆಟ ಆಡೋದಿಲ್ಲ ಅಂತಾ ಕ್ಯಾಮರಾ ಎದುರು ನಿಂತು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸುಮ್ಮನಿರದ ರಜತ್, ಬಳೆ ತೊಟ್ಟಿಕೋ ಎಂದು ಮತ್ತೆ ಟಾಂಗ್ ಕೊಟ್ಟಿದ್ದಾರೆ. ಕೆರಳಿದ ಸುರೇಶ್ ಬಿಗ್ ಬಾಸ್ ಮುಖ್ಯ ದ್ವಾರ ತೆರೆಯುವಂತೆ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ:'ಪುಷ್ಪ 2'ನಲ್ಲಿ ಅರ್ಧ ತಲೆಬೋಳಿಸಿದ ಈ ವ್ಯಕ್ತಿ ಯಾರು? ಸಂಚಲನ ಸೃಷ್ಟಿಸಿದ ಕನ್ನಡ ನಟ ತಾರಕ್ ಪೊನ್ನಪ್ಪ ಹೇಳಿದ್ದಿಷ್ಟು