ಕರ್ನಾಟಕ

karnataka

ETV Bharat / entertainment

ಕೇರಳದ ನ್ಯಾ. ಹೇಮಾ ಸಮಿತಿಯಂತೆ ಸ್ಯಾಂಡಲ್​ವುಡ್​ನಲ್ಲೂ ಕಮಿಟಿ ರಚಿಸಿ : ಸಿಎಂಗೆ FIRE ಒತ್ತಾಯ - FIRE Urges To Form Committee - FIRE URGES TO FORM COMMITTEE

ಕನ್ನಡದ 'ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ' (FIRE) ಸಂಸ್ಥೆ ನಿವೃತ್ತ ನ್ಯಾಯಾಮೂರ್ತಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ. ಸಿಎಂಗೆ ಸಲ್ಲಿಕೆಯಾಗಿರುವ ಅರ್ಜಿಗೆ ಕನ್ನಡ ಚಲನಚಿತ್ರೋದ್ಯಮದ ಮತ್ತು ವಿವಿಧ ಕ್ಷೇತ್ರಗಳ 153 ಜನರು ಸಹಿ ಹಾಕಿದ್ದಾರೆ.

FIRE urges to make Committee
ಸಮಿತಿ ರಚನೆಗೆ FIRE ಒತ್ತಾಯ (ETV Bharat)

By ETV Bharat Karnataka Team

Published : Sep 4, 2024, 1:49 PM IST

Updated : Sep 4, 2024, 4:46 PM IST

ಬೆಂಗಳೂರು: ಸಿನಿರಂಗದಲ್ಲಿ 'ಕಾಸ್ಟಿಂಗ್ ಕೌಚ್' ಸಮಸ್ಯೆಯಿದೆ ಎಂಬ ಆರೋಪವನ್ನು ಈಗಾಗಲೇ ಸಾಕಷ್ಟು ನಟಿಮಣಿಯರು ಮಾಡಿದ್ದಾರೆ. ಇತ್ತೀಚೆಗಷ್ಟೇ ಮಲಯಾಳಂ ಚಿತ್ರರಂಗದ ಕರಾಳ ಮುಖವನ್ನು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬಯಲಿಗೆಳೆದಿದೆ. ಅಂದಿನಿಂದ ಮಲಯಾಳಂ ಚಿತ್ರರಂಗದ ದಿಗ್ಗಜರ ಹೆಸರುಗಳು ಕೇಳಿಬಂದ ಬಳಿಕ ಸಾಕಷ್ಟು ಸದ್ದು ಮಾಡಿದೆ. ಮಾಲಿವುಡ್‌ ನಟ ನಿರ್ದೇಶಕರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿರುವುದರಲ್ಲದೆ ಪ್ರಕರಣಗಳೂ ದಾಖಲಾಗಿವೆ. ಇದೀಗ ಅದೇ ರೀತಿಯ ಸಮಿತಿ ರಚನೆಯಾಗಬೇಕೆಂಬ ಕೂಗು ಎಲ್ಲ ಚಿತ್ರರಂಗಗಳಲ್ಲೂ ಕೇಳಿಬರುತ್ತಿದೆ. ಕನ್ನಡ ಚಿತ್ರರಂಗದಿಂದಲೂ ಅದೇ ರೀತಿಯ ಒತ್ತಾಯ ಬಂದಿದೆ.

ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದ ಫೈರ್: ಹೌದು, ಕೆಲ ವರ್ಷಗಳ ಹಿಂದೆ ''ಮಿ ಟೂ'' ಪ್ರಕರಣ ಸ್ಯಾಂಡಲ್​ವುಡ್​ನ ನಿದ್ದೆಗೆಡಿಸಿತ್ತು. ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಈ ಹಿಂದೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ರಚನೆ ಮಾಡಲಾಗಿತ್ತು. ಇದರಲ್ಲಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ನಿರ್ದೇಶಕರಾದ ಕವಿತಾ ಲಂಕೇಶ್, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಸಾಕಷ್ಟು ನಟಿಯರು ಸದಸ್ಯರಾಗಿದ್ದರು‌. ಇದೀಗ ಫೈರ್ ಕಮಿಟಿ ಹಾಗೂ ನಿವೃತ್ತ ನ್ಯಾಯಾಮೂರ್ತಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದೆ.

'ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ'ಯ ಒತ್ತಾಯ (FIRE DEMAND LETTER)

ನಟ ಚೇತನ್ ಹೇಳಿದ್ದಿಷ್ಟು:ಈ ಫೈರ್ ಕಮಿಟಿಯ ಸದಸ್ಯರಾಗಿರುವ ನಟ ಚೇತನ್ ಮಾತನಾಡಿ, ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ತಯಾರಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಕರ್ನಾಟಕ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಹಾಗೇ ಕನ್ನಡ ಚಲನಚಿತ್ರೋದ್ಯಮದ ಮತ್ತು ವಿವಿಧ ಕ್ಷೇತ್ರಗಳ 153 ವ್ಯಕ್ತಿಗಳು ಈ ಅರ್ಜಿಗೆ ಸಹಿ ಹಾಕಿದ್ದಾರೆ. ಈ‌ ಅರ್ಜಿಯನ್ನ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

'ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ'ಯ ಒತ್ತಾಯ (FIRE DEMAND LETTER)

ಸರ್ಕಾರಕ್ಕೆ ಎರಡು ಬೇಡಿಕೆಗಳನ್ನಿಟ್ಟ ಫೈರ್: ಇನ್ನೂ ಫೈರ್ ಕಮಿಟಿ ಮೂಲಕ ಕರ್ನಾಟಕ ಸರ್ಕಾರಕ್ಕೆ ಎರಡು ಬೇಡಿಕೆಗಳನ್ನು ಇಡಲಾಗಿದೆ. ಮೊದಲನೆಯದು ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನಿವೃತ್ತ ನ್ಯಾಯಾಧೀಶರ ಕಮಿಟಿ ರಚಿಸಿ, ವ್ಯವಸ್ಥಿತವಾಗಿ ತನಿಖೆ ಆಗಬೇಕು ಎಂದು ಆಗ್ರಹಿಸಿದೆ. ಇನ್ನೊಂದು, ಮಹಿಳೆಯರು ಕನ್ನಡ ಚಿತ್ರರಂಗದಲ್ಲಿ ಆರೋಗ್ಯಕರವಾಗಿ ಹಾಗೂ ಸಮಾನವಾಗಿ ಕೆಲಸ ಮಾಡುವ ನಿಯಮಗಳನ್ನು ತರುವಂತೆ ಕೇಳಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಯಶ್​​​ 'ಟಾಕ್ಸಿಕ್'​​ಗೆ ನಯನತಾರಾ ಸೇರಿ ಹಲವರ ಎಂಟ್ರಿ: ನಿರ್ಮಾಪಕರ ಸ್ಪಷ್ಟನೆ ಹೀಗಿದೆ - Nayanthara Entry To Toxic

ಅರ್ಜಿಗೆ ಸಹಿ ಹಾಕಿದ ಚಿತ್ರರಂಗದ ಗಣ್ಯರು:ಕನ್ನಡ ಚಿತ್ರರಂಗದ ಪ್ರಮುಖರು ಈ ಅರ್ಜಿಗೆ ಸಹಿ ಹಾಕಿದ್ದಾರೆ. ಫೈರ್‌ನ ಅಧ್ಯಕ್ಷೆ ಕವಿತಾ ಲಂಕೇಶ್, ಕಾರ್ಯದರ್ಶಿ ಚೇತನ್ ಅಹಿಂಸಾರಿಂದ ಹಿಡಿದು ರಮ್ಯಾ, ಐಂದ್ರಿತಾ ರೇ, ಅಮೃತಾ ಅಯ್ಯಂಗಾರ್, ಪೂಜಾ ಗಾಂಧಿ, ಶ್ರುತಿ ಹರಿಹರನ್, ಆಶಿಕಾ ರಂಗನಾಥ್, ಚೈತ್ರಾ ಜೆ ಆಚಾರ್, ಧನ್ಯಾ ರಾಮ್‌ಕುಮಾರ್, ಸಂಯುಕ್ತ ಹೆಗಡೆ, ಶ್ರದ್ಧಾ ಶ್ರೀನಾಥ್, ಕಿಶೋರ್, ನಿಶ್ವಿಕಾ ನಾಯ್ಡು, ವಿನಯ್ ರಾಜ್‌ಕುಮಾರ್, ನಿರ್ದೇಶಕ ಸಿಂಪಲ್ ಸುನಿ, ಹಿರಿಯ ನಟ ಶರತ್ ಲೋಹಿತಾಶ್ವ ಸೇರಿದಂತೆ 153 ಮಂದಿ ಅರ್ಜಿಗೆ ಸಹಿ ಹಾಕಿದ್ದಾರೆ.

ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆ ಪ್ರಕರಣ; ಕೋರ್ಟ್​ಗೆ 231 ಸಾಕ್ಷ್ಯಗಳನ್ನೊಳಗೊಂಡ 3,991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ - Renukaswamy Murder Case

2017ರಲ್ಲಿ ಫೈರ್ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ ಕಮಿಟಿ ರಚಿಸಲಾಯಿತು. ಆದರೆ ಈ ಕಮಿಟಿ ಅಷ್ಟೊಂದು ಮುಂಚೂಣಿಗೆ ಬಂದಿರಲಿಲ್ಲ. ಇದೀಗ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ನ್ಯಾಯಮೂರ್ತಿ ಹೇಮಾ ಕಮಿಟಿ ವರದಿ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲಿ ಫೈರ್ ಕಮಿಟಿ ಧ್ವನಿ ಎತ್ತಿದೆ.

Last Updated : Sep 4, 2024, 4:46 PM IST

ABOUT THE AUTHOR

...view details