ಕರ್ನಾಟಕ

karnataka

ETV Bharat / entertainment

'ಭೈರತಿ ರಣಗಲ್' ಅದ್ಧೂರಿ ಬಿಡುಗಡೆ: ಲಾಂಗ್ ಹಿಡಿದು ಬಂದ ಅಭಿಮಾನಿ; ಸಂಭ್ರಮಾಚರಣೆಯ ವಿಡಿಯೋ ನೋಡಿ - BHAIRATHI RANAGAL RELEASE

ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಭೈರತಿ ರಣಗಲ್' ಇಂದು ಅದ್ಧೂರಿಯಾಗಿ ತೆರೆಕಂಡಿದೆ.

Bhairathi Ranagal Release
'ಭೈರತಿ ರಣಗಲ್' ಬಿಡುಗಡೆ (Photo: ETV Bharat)

By ETV Bharat Entertainment Team

Published : Nov 15, 2024, 12:32 PM IST

ಬೆಂಗಳೂರು: ನಟ ಶಿವರಾಜ್​ಕುಮಾರ್​ ಅಭಿನಯದ ಬಹುನಿರೀಕ್ಷಿತ ಚಿತ್ರ 'ಭೈರತಿ ರಣಗಲ್' ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಹ್ಯಾಟ್ರಿಕ್​ ಹೀರೋ ಸಿನಿಮಾವಾದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅದರಂತೆ, ಇಂದು 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಭೈರತಿ ರಣಗಲ್' ದರ್ಶನ ಕೊಟ್ಟಿದ್ದಾನೆ.

ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಮುಂಜಾನೆ 6 ಗಂಟೆಗೆ ಸ್ಪೆಷಲ್ ಶೋ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಪ್ರದರ್ಶನಕ್ಕೆ ನಿರ್ಮಾಪಕಿ ಗೀತಾ ಶಿವರಾಜ್​ಕುಮಾರ್, ಪುತ್ರಿ ನಿವೇದಿತಾ ಹಾಜರಾಗಿದ್ದರು.

'ಭೈರತಿ ರಣಗಲ್' ಅದ್ಧೂರಿ ಬಿಡುಗಡೆ (ETV Bharat)

ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್, ನಾಗಭೂಷಣ್, ವಿಕ್ಕಿ ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾರೆ. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಭೈರತಿ ರಣಗಲ್ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಮತ್ತೊಂದೆಡೆ, ಬ್ಲ್ಯಾಕ್​​ ಕಾಸ್ಟೂಮ್​ನಲ್ಲಿ ಲಾಂಗ್ ಹಿಡಿದು ಡೈಲಾಗ್ ಹೊಡೆಯುವ ಮೂಲಕ ಶಿವಣ್ಣನ ಅಭಿಮಾನಿ ಸಖತ್​ ಸದ್ದು ಮಾಡಿದ್ದಾರೆ.

'ಘೋಸ್ಟ್' ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಚಿತ್ರಮಂದಿರ ಪ್ರವೇಶಿಸಿರುವ ಶಿವಣ್ಣನ ಸಿನಿಮಾವೇ 'ಭೈರತಿ ರಣಗಲ್'. ಸಾಕಷ್ಟು ವಿಚಾರಗಳಿಂದ ಸಿನಿಮಾ ಸಖತ್​ ಸದ್ದು ಮಾಡುತ್ತಾ ಬಂದಿತು. ಮೇಕಿಂಗ್ ಜೊತೆಗೆ ಪೋಸ್ಟರ್ಸ್, ಟೀಸರ್, ಟ್ರೇಲರ್​​, ಹಾಡುಗಳಿಂದ ಈ ಹೈವೋಲ್ಟೇಜ್ ಚಿತ್ರ ಅಭಿಮಾನಿ ಬಳಗದಲ್ಲಿ ಸಖತ್​ ಕ್ರೇಜ್​ ಕ್ರಿಯೇಟ್​​ ಮಾಡಿತ್ತು. ಚಿತ್ರದ ಪ್ರೀ ರಿಲೀಸ್ ಈವೆಂಟ್ ಕೂಡಾ ಬಹಳ ಅದ್ಧೂರಿಯಾಗಿ ನಡೆದಿತ್ತು. ಹೀಗೆ ಪ್ರಮೋಶನ್​ಗಳು ಗಮನಾರ್ಹವಾಗಿತ್ತು. ಬಹುನಿರೀಕ್ಷೆಗಳೊಂದಿಗೆ ಸಿನಿಮಾ ಇಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದ್ದು, ಆರಂಭಿಕವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಮಂದಿಗಳೆದುರು ಅಭಿಮಾನಿಗಳ ಸಂಭ್ರಮಾಚರನೆ ಜೋರಾಗಿದೆ.

ಇದನ್ನೂ ಓದಿ:ತುಳುನಾಡಿನ ಸಂಪ್ರದಾಯ ಮರೆಯದ ಐಶ್ವರ್ಯಾ ರೈ: ಭಾಷಾಪ್ರೇಮದ ವಿಡಿಯೋ ನೋಡಿ

ಶಿವರಾಜ್​​ಕುಮಾರ್​ ಅವರಿಗೆ ಸಪ್ತ ಸಾಗರದಾಚೆ ಎಲ್ಲೋ, ಬಘೀರ ಖ್ಯಾತಿಯ ರುಕ್ಮಿಣಿ ವಸಂತ್​​ ಜೋಡಿಯಾಗಿದ್ದಾರೆ. ಅಲ್ಲದೇ ಛಾಯಾಸಿಂಗ್, ಅವಿನಾಶ್, ಬಾಬು ಹಿರಣ್ಣಯ್ಯ, ಗೋಪಾಲಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಡ್ಯಾನ್ಸಿಂಗ್ ರೋಸ್ ಶಬೀರ್, ಪ್ರತಾಪ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜ್​​ಕುಮಾರ್ ನಿರ್ಮಾಣ ಮಾಡಿರುವ ಸಿನಿಮಾಗೆ ರವಿ ಬಸ್ರೂರ್ ಸಂಗೀತವಿದೆ. ನವೀನ್ ಕುಮಾರ್ ಕ್ಯಾಮರಾ ಕೈಚಳಕ, ಗುಣ ಅವರ ಕಲಾ ನಿರ್ದೇಶನ, ದಿಲೀಪ್ ಸುಬ್ರಹ್ಮಣ್ಯ ಹಾಗೂ ಚೇತನ್ ಡಿಸೋಜಾ ಜೋಡಿಯ ಸಾಹಸ ನಿರ್ದೇಶನ ಈ ಸಿನಿಮಾಗಿದೆ‌.

ಇದನ್ನೂ ಓದಿ:'A for Apple' ಅಲ್ಲ 'A for ಆನಂದ್​​': ಶಿಕ್ಷಕನಾದ ಹ್ಯಾಟ್ರಿಕ್​ ಹೀರೋ; ಶಿವರಾಜ್​ಕುಮಾರ್​​ ಹೊಸ ಸಿನಿಮಾ ಅನೌನ್ಸ್

ಶಿವರಾಜ್​ಕುಮಾರ್​​ ನಟನೆಯ ಹಿಟ್​ ಸಿನಿಮಾ 'ಜನುಮದ ಜೋಡಿ' 1996ರಲ್ಲಿ ನವೆಂಬರ್ 15ರಂದು ತೆರೆಕಂಡಿತ್ತು. ಇದೀಗ ಭೈರತಿ ರಣಗಲ್ ಕೂಡಾ ಅದೇ ದಿನಾಂಕದಂದು ತೆರೆಗಪ್ಪಳಿಸಲಿದ್ದು, ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ? ಕಲೆಕ್ಷನ್​ ಎಷ್ಟಾಗಲಿದೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ. ಸಿನಿಮಾ ವ್ಯವಹಾರದ ಅಂಕಿಅಂಶ ನಾಳೆ ಮುಂಜಾನೆ ಸಿಗಲಿದೆ. ಸದ್ಯ ಅಪಾರ ಸಂಖ್ಯೆಯ ಅಭಿಮಾನಿಗಳ ಸೆಲೆಬ್ರೇಶನ್​ ಸಾಗಿದೆ.

ABOUT THE AUTHOR

...view details