ಕನ್ನಡ ಚಿತ್ರರಂಗದಲ್ಲೀಗ ಯುವ ಪ್ರತಿಭೆಗಳ ಪರ್ವ ಆರಂಭವಾಗಿದೆ. ಹೊಸಬರು ಮಾಡುತ್ತಿರುವ ಸಿನಿಮಾಗಳು ಯಶಸ್ಸು ಕಾಣುತ್ತಿವೆ. ಬಗೆಬಗೆಯ ಶೀರ್ಷಿಕೆಗಳ ಮೂಲಕವೇ ಸಿನಿಮಾಗಳು ಸೆಟ್ಟೇರುತ್ತಿವೆ. ಇದೀಗ ಅಂಥದ್ದೇ ವಿಭಿನ್ನ ಟೈಟಲ್ ಮೂಲಕ ಗಮನ ಸೆಳೆಯುತ್ತಿದೆ 'ಎಲ್ಟು ಮುತ್ತಾ' ಸಿನಿಮಾ.
ಇತ್ತೀಚೆಗೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಎಲ್ಟು ಮುತ್ತಾ ಸಿನಿಮಾದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೊಂಬಾಳೆ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರು ಪತ್ನಿ ಶೈಲಜಾ ವಿಜಯ್ ಕಿರಗಂದೂರು, ಸಂಗೀತ ಕಟ್ಟಿ, ಎಎಂಆರ್ ರಮೇಶ್ ಅವರು ಚಿತ್ರತಂಡಕ್ಕೆ ಸಾಥ್ ನೀಡಿದರು.
ಎಲ್ಟು ಮುತ್ತಾ ಪೋಸ್ಟರ್ ಬಿಡುಗಡೆ ನಿರ್ದೇಶಕರಾದ ರಾ ಸೂರ್ಯ ಮಾತನಾಡಿ, ''ಸಾವಿಗೆ ಡೋಲು ಬಡಿಯುವವರ ಕಥೆ ಆಧಾರಿತ ಸಿನಿಮಾ ಮಾಡಿದ್ದೇನೆ. ಇದು ಸತ್ಯ ಘಟನೆಯ ಸಿನಿಮಾ. ಅದನ್ನು ಫಿಕ್ಷನ್ ವೇನಲ್ಲಿ ಹೇಳಿದ್ದೇನೆ. ಸಿನಿಮಾದಲ್ಲಿ 4 ಹಾಡುಗಳಿವೆ. ಈಗಾಗಲೇ ಚಿತ್ರದ ಡಬ್ಬಿಂಗ್ ಮುಗಿದಿದೆ'' ಎಂದರು.
ಹೈ5 ಸ್ಟುಡಿಯೋದ ಮೆಂಟರ್ ಆದ ಸತ್ಯ ಶ್ರೀನಿವಾಸನ್ ಮಾತನಾಡಿ, ''ಹೈ5 ಸ್ಟುಡಿಯೋ ಅಂದರೆ ಐದು ಜನರ ಸಂಸ್ಥೆ. ಒಳ್ಳೆಯ ಕಂಟೆಂಟ್ ಸಿನಿಮಾಗಳನ್ನು ವಿಶ್ವದ ಎಲ್ಲಾ ಸಿನಿಮಾ ಪ್ರೇಮಿಗಳಿಗೆ ತಲುಪಿಸುವುದು. ಈ ನೆಲದ ಕಂಟೆಂಟ್ನ್ನು ಎಲ್ಲೆಡೆ ಪಸರಿಸುವುದು ಸಂಸ್ಥೆಯ ಉದ್ದೇಶವಾಗಿದೆ. ನಾವು ಮೂರು ಕಥೆ ಕೇಳಿದವು. ಆದರೆ ಈ ಚಿತ್ರದ ಕಥೆ ಇಷ್ಟವಾಯ್ತು'' ಎಂದು ತಿಳಿಸಿದರು.
ಎಲ್ಟು ಮುತ್ತಾ ಪೋಸ್ಟರ್ ಬಿಡುಗಡೆ ಎಲ್ಟಾ ಮುತ್ತಾ ಸಿನಿಮಾ ಮೂಲಕ ಯುವ ಪ್ರತಿಭೆ ರಾ.ಸೂರ್ಯ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಒಂದಷ್ಟು ಕಿರುಚಿತ್ರ ನಿರ್ದೇಶನದ ಅನುಭವವನ್ನು ಇಟ್ಟುಕೊಂಡು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವೈದ್ಯಕೀಯ ಹಿನ್ನೆಲೆಯುಳ್ಳ ಸೂರ್ಯ ಅವರಿಗೆ ಸಿನಿಮಾ ಮೇಲಿನ ಸೆಳೆತ ಅವರನ್ನು ಚಿತ್ರರಂಗಕ್ಕೆ ಕರೆದು ತಂದು ನಿಲ್ಲಿಸಿದೆ. ಎಲ್ಟು ಮುತ್ತಾ ಸಿನಿಮಾ ಮೂಲಕ ಯುವ ನಟ ಶೌರ್ಯ ಪ್ರತಾಪ್ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರಿಗೆ ನಾಯಕಿಯಾಗಿ ಪ್ರಿಯಾಂಕಾ ಮಾಲಲಿ ಸಾಥ್ ಕೊಟ್ಟಿದ್ದಾರೆ. ಕಾಕ್ರೋಚ್ ಸುಧಿ, ಯಮುನಾ ಶ್ರೀನಿಧಿ, ನವೀನ್ ಪಡಿಲ್ ಇತರರು ತಾರಾಬಳಗದಲ್ಲಿದ್ದಾರೆ.
ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಮಡಿಕೇರಿಯ ನೆಲಜಿಯಲ್ಲಿ ಬಹುತೇಕ ಶೂಟಿಂಗ್ ಮಾಡಲಾಗಿದೆ. ಉಳಿದಂತೆ ಬೆಂಗಳೂರು ಸುತ್ತಮುತ್ತ ಕೂಡ ಚಿತ್ರೀಕರಿಸಲಾಗಿದೆ. ಹೈ5 ಸ್ಟುಡಿಯೋಸ್ ಮೂಲಕ ನಿರ್ದೇಶಕ ರಾ ಸೂರ್ಯ, ನಾಯಕ ಶೌರ್ಯ ಪ್ರತಾಪ್, ಪ್ರಸನ್ನ ಕೇಶವ, ರುಹಾನ್ ಆರ್ಯ ಹಾಗೂ ಬಸವರಾಜೇಶ್ವರಿ ಭೂಮ್ರಡ್ಡಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಎಲ್ಟಾ ಮುತ್ತಾ ಅಂದರೆ ಚಿತ್ರದ ಎರಡು ಪಾತ್ರಗಳ ಹೆಸರುಗಳಾಗಿದೆ.
ಎಲ್ಟು ಮುತ್ತಾ ಪೋಸ್ಟರ್ ಬಿಡುಗಡೆ ಚಿತ್ರದಲ್ಲಿ ಶೌರ್ಯ ಪ್ರತಾಪ್ ನಾಯಕನಾಗಿ ಬಣ್ಣ ಹಚ್ಚುವುದರ ಜೊತೆಗೆ ಸಹ ನಿರ್ದೇಶಕರಾಗಿ ಹಾಗೂ ಸಹ ಬರಗಾರರನಾಗಿ ಸೂರ್ಯ ಅವರಿಗೆ ಜೊತೆಯಾಗಿ ನಿಂತಿದ್ದಾರೆ. ಪ್ರಸನ್ನ ಕೇಶವ ಸಂಗೀತ, ಮೆಯ್ಯಪ್ಪ ಭಾಸ್ಕರ್ ಛಾಯಾಗ್ರಹಣ, ಕೆ.ಯೇಸು ಸಂಕಲನ, ಜ್ಞಾನತಿ ರಾಹುಲ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಅಜಿತ್ ಕೇಶವ, ರಾ ಸೂರ್ಯ ಹಾಗೂ ಶೌರ್ಯ ಪ್ರತಾಪ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.
ಇದನ್ನೂ ಓದಿ:ಪುನೀತ್ ರಾಜ್ಕುಮಾರ್ ಕಥೆ ಕೇಳಿ ಮೆಚ್ಚಿಕೊಂಡ ಕೊನೆ ಚಿತ್ರ 'O2': ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡ ಸಿನಿತಂಡ - O2 Movie