ಕರ್ನಾಟಕ

karnataka

ETV Bharat / entertainment

ನಟ ಸಲ್ಮಾನ್ ಖಾನ್ ಮನೆಯ ಹೊರಗೆ ಅಪರಿಚಿತರಿಂದ ಗುಂಡಿನ ದಾಳಿ - Firing near Salman khan house - FIRING NEAR SALMAN KHAN HOUSE

ಮುಂಬೈನ ಬಾಂದ್ರಾದಲ್ಲಿರುವ ಬಾಲಿವುಡ್​ ನಟ ಸಲ್ಮಾನ್ ಖಾನ್ ಮನೆಯ ಹೊರಗೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ನಟ ಸಲ್ಮಾನ್ ಖಾನ್
ನಟ ಸಲ್ಮಾನ್ ಖಾನ್

By ETV Bharat Karnataka Team

Published : Apr 14, 2024, 8:38 AM IST

Updated : Apr 14, 2024, 10:15 AM IST

ಮುಂಬೈ: ಬಾಂದ್ರಾದಲ್ಲಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಮನೆಯ ಹೊರಗೆ ಅಪರಿಚಿತ ದುಷ್ಕರ್ಮಿಗಳಿಂದ ಮೂರರಿಂದ ನಾಲ್ಕು ಸುತ್ತು ಗುಂಡಿನ ದಾಳಿ ನಡೆದಿದೆ.

ಸದ್ಯ ಸಿಕ್ಕಿರುವ ಮಾಹಿತಿಯಂತೆ ನಸುಕಿನ ಜಾವ 4:50ರ ಸುಮಾರಿಗೆ ಬೈಕ್​ನಲ್ಲಿ ಹೆಲ್ಮೆಟ್​​ ಧರಿಸಿ ಬಂದ ಇಬ್ಬರು ಬಂದೂಕಿನಿಂದ ಗಾಳಿಯಲ್ಲಿ ಫೈರಿಂಗ್​​ ನಡೆಸಿದ್ದಾರೆ. ಘಟನೆಯ ನಂತರ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ನಟನ ನಿವಾಸದ ಸುತ್ತ ಮುತ್ತ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಆರೋಪಿಗಳು ಹೆಲ್ಮೆಟ್ ಧರಿಸಿದ್ದರಿಂದ ಗುರುತಿಸಲು ಸಾಧ್ಯವಾಗಿಲ್ಲ.

ಘಟನೆಯಿಂದ ಸಲ್ಮಾನ್​ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಹಲವು ವರ್ಷಗಳಿಂದ ನಟನಿಗೆ ಕೊಲೆ ಬೆದರಿಕೆ ಬರುತ್ತಲೇ ಇದೆ. ಈ ಹಿಂದೆಯೂ ಸಲ್ಮಾನ್ ಮೇಲೆ ಹಲ್ಲೆಗೆ ಯತ್ನಿಸಲಾಗಿತ್ತು. ಹೀಗಾಗಿ ಇಂದು ನಡೆದಿರುವ ಘಟನೆಯನ್ನು ಹಗುರವಾಗಿ ತೆಗದುಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪೊಲೀಸರು ಪರಿಣಾಮವಾಗಿ ತನಿಖೆ ನಡೆಸುತ್ತಿದ್ದಾರೆ.

ಮೊದಲು ನಟನ ಭದ್ರತೆಗೆ ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಆದರೆ ಬೆದರಿಕೆಗಳು ಬಂದ ಹಿನ್ನೆಲೆ ವೈ+ ಕೆಟಗರಿ ಭದ್ರತೆ ನೀಡಲಾಗಿದೆ. ಈ ಭದ್ರತಾ ಟೀಂನಲ್ಲಿ 11 ಯೋಧರು ಯಾವಾಗಲೂ ಸಲ್ಮಾನ್ ಜೊತೆ ಇರುತ್ತಾರೆ. ಈ ಟೀಂ ಓರ್ವ ಅಥವಾ ಇಬ್ಬರು ಕಮಾಂಡೋಗಳು ಮತ್ತು 2 PSO ಗಳನ್ನು ಒಳಗೊಂಡಿದೆ. ನಟ ಸಲ್ಮಾನ್ ವಾಹನದ ಮುಂದೆ ಮತ್ತು ಹಿಂದೆ ಎರಡು ವಾಹನಗಳು ಯಾವಾಗಲೂ ಇರುತ್ತವೆ. ಅಲ್ಲದೇ ಸಲ್ಮಾನ್ ಕಾರು ಕೂಡ ಸಂಪೂರ್ಣ ಬುಲೆಟ್ ಪ್ರೂಫ್ ಆಗಿದೆ.

ಇದನ್ನೂ ಓದಿ:ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದಿಗೆ ಬಂದ‌ ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ - Kangaroo Movie Trailer

Last Updated : Apr 14, 2024, 10:15 AM IST

ABOUT THE AUTHOR

...view details