ಕರ್ನಾಟಕ

karnataka

ETV Bharat / entertainment

ಕಮಲ್ ಹಾಸನ್​​ರ 'ಥಗ್ ಲೈಫ್‌'ನಿಂದ ಹೊರಬಂದ ದುಲ್ಕರ್ ಸಲ್ಮಾನ್! - Dulquer Salmaan movies

ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಥಗ್ ಲೈಫ್‌'ನಲ್ಲಿ ದುಲ್ಕರ್ ಸಲ್ಮಾನ್ ನಟಿಸುತ್ತಿಲ್ಲ.

Dulquer Salmaan out from Kamal Haasan's Thug Life
ಕಮಲ್ ಹಾಸನ್​ನ 'ಥಗ್ ಲೈಫ್‌'ನಿಂದ ಹೊರಬಂದ ದುಲ್ಕರ್ ಸಲ್ಮಾನ್

By ETV Bharat Karnataka Team

Published : Mar 5, 2024, 3:45 PM IST

ದಕ್ಷಿಣ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಥಗ್ ಲೈಫ್‌'. ಹಿರಿಯ ನಿರ್ದೇಶಕ ಮಣಿರತ್ನಂ ಈ ಬಹುನಿರೀಕ್ಷಿತ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಶೂಟಿಂಗ್​​ ಶರವೇಗದಲ್ಲಿ ಸಾಗುತ್ತಿದ್ದು, ಕಮಲ್​ ಹಾಸ್​​ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಕಮಲ್​​ ಹಾಸನ್​​ ಆ್ಯಕ್ಷನ್​​ ಸೀಕ್ವೆನ್ಸ್‌ಗಳನ್ನು ಚಿತ್ರೀಕರಿಸಲು ಸರ್ಬಿಯಾಗೆ ತೆರಳಿದ್ದರು. ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದ ದುಲ್ಕರ್ ಸಲ್ಮಾನ್ ಅವರು ಮಣಿರತ್ನಂ ನಿರ್ದೇಶನದ ಈ ಚಿತ್ರದಿಂದ ಹೊರನಡೆದಿದ್ದಾರೆ. ಮುಂಬರುವ ಶೂಟಿಂಗ್​ ಶೆಡ್ಯೂಲ್‌ನ ಭಾಗವಾಗುವುದಿಲ್ಲ ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, ಸೌತ್​​ ಸೂಪರ್​ ಸ್ಟಾರ್ ದುಲ್ಕರ್ ಸಲ್ಮಾನ್ ಇತರ ಪ್ರೊಜೆಕ್ಟ್​ಗಳನ್ನು ಹೊಂದಿದ್ದು, ಬ್ಯುಸಿ ಶೆಡ್ಯೂಲ್​​ ಹಿನ್ನೆಲೆ ಥಗ್ ಲೈಫ್ ಅನ್ನು ತೊರೆದಿದ್ದಾರೆ. ಬಹುನಿರೀಕ್ಷಿತ ಸಿನಿಮಾಗಳು, ಟೈಟ್​ ಶೂಟಿಂಗ್​​ ಶೆಡ್ಯೂಲ್, ಶೂಟಿಂಗ್​ ಡೇಟ್ಸ್ ಕಾಂಫ್ಲಿಕ್ಟ್​​​​​​ ಹಿನ್ನೆಲೆ ದುಲ್ಕರ್, ಕಮಲ್ ಹಾಸನ್ ಅವರ ಬಹುನಿರೀಕ್ಷಿತ ಚಿತ್ರದಿಂದ ಹೊರಗುಳಿದಿದ್ದಾರೆ.

ಸದ್ಯ, ವೆಂಕಿ ಅಟ್ಲೂರಿ ನಿರ್ದೇಶನದ ಲಕ್ಕಿ ಭಾಸ್ಕರ್ ಸಿನಿಮಾದ ಚಿತ್ರೀಕರಣದಲ್ಲಿ ದುಲ್ಕರ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಸುಧಾ ಕೊಂಗರ ನಿರ್ದೇಶನದ ತಾತ್ಕಾಲಿಕ ಶೀರ್ಷಿಕೆಯುಳ್ಳ ಸೂರ್ಯ43 ಎಂಬ ಪವರ್ - ಪ್ಯಾಕ್ಡ್ ಥ್ರಿಲ್ಲರ್ ಚಿತ್ರದ ಚಿತ್ರೀಕರಣದಲ್ಲೂ ನಿರತರಾಗಿದ್ದಾರೆ. ಇದು ಬಹುಬೇಡಿಕೆ ನಟ ದುಲ್ಕರ್ ಸಲ್ಮಾನ್ ಮತ್ತು ಸೂಪರ್ ಸ್ಟಾರ್ ಸೂರ್ಯ ಕಾಂಬಿನೇಶನ್​ನ ಬಹುನಿರೀಕ್ಷಿತ ಚಿತ್ರ. ಅಲ್ಲದೇ, ಸೆಲ್ವಮಣಿ ಸೆಲ್ವರಾಜ್ ಅವರ ಮುಂದಿನ ಚಿತ್ರ 'ಕಾಂತ'ದಲ್ಲಿ ದುಲ್ಕರ್ ಸಲ್ಮಾನ್​​ ಮತ್ತು ರಾಣಾ ದಗ್ಗುಬಾಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಬಿಡುಗಡೆಗೂ ಮುನ್ನ ಕೋಟಿ ಕೋಟಿ ವ್ಯವಹಾರ: 'ಯುವ' ಈವೆಂಟ್​​ನ ವಿಡಿಯೋ ನೋಡಿ

ಅಧಿಕೃತ ಘೋಷಣೆಯ ನಿರೀಕ್ಷೆ:ಥಗ್ ಲೈಫ್‌ನ ಫಸ್ಟ್ ಶೂಟಿಂಗ್​​ ಶೆಡ್ಯೂಲ್ ಜನವರಿ 30ರಂದು ಪೂರ್ಣಗೊಂಡಿದೆ. ಆದರೆ, ಥಗ್ ಲೈಫ್‌ನಿಂದ ದುಲ್ಕರ್ ಹೊರಬಂದಿರುವ ಬಗ್ಗೆ ನಿರ್ದೇಶಕರು ಇನ್ನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಚಿತ್ರತಂಡದಿಂದ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:ರಿಷಬ್​ ಶೆಟ್ಟಿ ಮಗಳಿಗೆ 2 ವರ್ಷ: ಮುದ್ದಾದ ವಿಡಿಯೋ ನೋಡಿ

ಕಮಲ್ ಹಾಸನ್, ಜೋಜು ಜಾರ್ಜ್ ಮತ್ತು ಅಭಿರಾಮಿ ಈಗಾಗಲೇ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಚಿತ್ರದಲ್ಲಿ ತ್ರಿಶಾ, ಐಶ್ವರ್ಯ ಲಕ್ಷ್ಮಿ, ಜಯಂ ರವಿ, ನಾಸರ್, ಗೌತಮ್ ಕಾರ್ತಿಕ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರವನ್ನು ಮಣಿರತ್ನಂ ಬರೆದು ನಿರ್ದೇಶಿಸುತ್ತಿದ್ದು, ಎ.ಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ರವಿ ಕೆ ಚಂದ್ರನ್ ಛಾಯಾಗ್ರಹಣ, ಶ್ರೀಕರ್ ಪ್ರಸಾದ್ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈ ಸಿನಿಮಾದ ಅಪ್​​ಡೇಟ್ಸ್ ಕೊಡುವಂತೆ ಪ್ರೇಕ್ಷಕರು ಬೇಡಿಕೆ ಇಟ್ಟಿದ್ದಾರೆ.

ABOUT THE AUTHOR

...view details