ಕರ್ನಾಟಕ

karnataka

ETV Bharat / entertainment

ದರ್ಶನ್​​ಗೆ ಮಧ್ಯಂತರ ಜಾಮೀನು: ಹರ್ಷ ವ್ಯಕ್ತಪಡಿಸಿದ ನಿರ್ದೇಶಕ ನಂದಕಿಶೋರ್; ನಟನ ಮನೆ, ಕಾರು ಶುಚಿಗೊಳಿಸಿದ ಕೆಲಸಗಾರರು - DARSHAN INTERIM BAIL

ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಅವರಿ​ಗೆ ಇಂದು ಕೋರ್ಟ್‌ ಮಧ್ಯಂತರ ಜಾಮೀನು ನೀಡಿರುವ ಕುರಿತಂತೆ ನಿರ್ದೇಶಕ ನಂದ ಕಿಶೋರ್ ತಮ್ಮ ಅಭಿಪ್ರಾಯ ಹಂಚಿಕೊಂಡರು.

Director Nanda kishore
ನಿರ್ದೇಶಕ ನಂದಕಿಶೋರ್, ದರ್ಶನ್‌ ಮನೆ ಕಾರು ಶುಚಿಗೊಳಿಸಿದ ಕೆಲಸಗಾರರು (ETV Bharat)

By ETV Bharat Entertainment Team

Published : Oct 30, 2024, 4:31 PM IST

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರಿ​ಗೆ ಇಂದು ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆರೋಗ್ಯ ತಪಾಸಣೆಗಾಗಿ ಜಾಮೀನು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಜಾಮೀನು ಆದೇಶ ಹೊರಡಿಸಿದರು.

ಕಳೆದ ಐದು ತಿಂಗಳಿನಿಂದ ಜೈಲುವಾಸದಲ್ಲಿದ್ದ ದರ್ಶನ್‌ಗೆ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಆರ್.ಆರ್.ನಗರದಲ್ಲಿರುವ ಅವರ ನಿವಾಸವನ್ನು ಶುಚಿಗೊಳಿಸಲಾಗಿದೆ. ಮನೆ ಕಳೆದ ಐದು ತಿಂಗಳಿನಿಂದ ಬಿಕೋ ಎನ್ನುತ್ತಿತ್ತು. ಇದೀಗ ನಟನ​ ಆಗಮನದ ಹಿನ್ನೆಲೆಯಲ್ಲಿ ನಿವಾಸ ಮತ್ತು ವಾಹನಗಳನ್ನು ಕೆಲಸಗಾರರು ಶುಚಿಗೊಳಿಸುತ್ತಿದ್ದಾರೆ. ದರ್ಶನ್ ಅವರ ಫೇವರೆಟ್​ ಸ್ಫೋರ್ಟ್ಸ್‌ ಕಾರನ್ನು ಮನೆ ಕೆಲಸಗಾರರು ಸ್ವಚ್ಛ ಮಾಡುತ್ತಿದ್ದುದು ಕಂಡುಬಂತು.

ದರ್ಶನ್​​ಗೆ ಮಧ್ಯಂತರ ಜಾಮೀನು: ನಂದಕಿಶೋರ್ ಪ್ರತಿಕ್ರಿಯೆ (ETV Bharat)

ಇದನ್ನೂ ಓದಿ:'ಟಾಕ್ಸಿಕ್' ಶೂಟಿಂಗ್ ಸ್ಪಾಟ್​​​ಗೆ ಸಚಿವ ಈಶ್ವರ್​ ಖಂಡ್ರೆ ಭೇಟಿ: ಮತ್ತೆ ಸಂಕಷ್ಟದಲ್ಲಿ ಯಶ್​ ಸಿನಿಮಾ

ದರ್ಶನ್ ಅವರಿಗೆ ಬೆನ್ನು ನೋವಿರುವ ಹಿನ್ನೆಲೆಯಲ್ಲಿ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಈ ಸುದ್ದಿ ಕೇಳಿದ ಕನ್ನಡ ಚಿತ್ರರಂಗದ ಅವರ ಸ್ನೇಹಿತರು ಖುಷಿ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕ ನಂದ ಕಿಶೋರ್ ಮಾತನಾಡಿ, "ದರ್ಶನ್‌ ಅವರಿಗೆ ಜಾಮೀನು ಸಿಕ್ಕಿರುವುದು ಕನ್ನಡ ಚಿತ್ರರಂಗಕ್ಕೆ ಸಂಭ್ರಮದ ವಾತಾವರಣ ತಂದುಕೊಟ್ಟಿದೆ. ಅವರ ಕುಟುಂಬಕ್ಕೂ ದೇವರು ಒಳ್ಳೆದು ಮಾಡಲಿ. ನಾನೀಗ ದೇವಸ್ಥಾನದಲ್ಲಿದ್ದೀನಿ. ಈ ಹೊತ್ತಲ್ಲೇ ನನಗೆ ವಿಷಯ ತಿಳಿಯಿತು. ಶುಭ ಸೂಚನೆ ಸಿಕ್ಕಿದೆ" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಸಲ್ಮಾನ್ ಖಾನ್​ಗೆ ಮತ್ತೊಮ್ಮೆ ಕೊಲೆ ಬೆದರಿಕೆ: 2 ಕೋಟಿ ಕೊಡುವಂತೆ ಒತ್ತಾಯ!

'ನಿಂದನೆ ಬೇಡ': ಕೆಲವು ಜಿಲ್ಲೆಗಳಲ್ಲಿ ದರ್ಶನ್ ಅಭಿಮಾನಿಗಳು ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದ್ದಾರೆ. ದರ್ಶನ್‌ಗೆ ಸಂಬಂಧಪಟ್ಟ ಸೋಷಿಯಲ್ ಮೀಡಿಯಾ ಪೇಜ್​ಗಳಲ್ಲಿ ಜಾಮೀನು ಸಿಕ್ಕಿರುವ ಖುಷಿ ವ್ಯಕ್ತಪಡಿಸಲಾಗುತ್ತಿದೆ. ಕೆಲ ಸಿನಿಮಾದ ದೃಶ್ಯಗಳನ್ನು ಹಾಕುವ‌ ಮೂಲಕವೂ ಸಂಭ್ರಮಿಸುತ್ತಿದ್ದಾರೆ. ಅಭಿಮಾನಿಗಳು ಯಾವುದೇ ಕಾರಣಕ್ಕೂ ಮಾಧ್ಯಮವರು, ರಾಜಕಾರಣಿಗಳು, ಬೇರೆ ನಟರು ಹಾಗೂ ಕಾನೂನಿನ ಬಗ್ಗೆ ನಿಂದಿಸಬಾರದು ಎಂದು ಮನವಿ ಮಾಡಿಕೊಳ್ಳಲಾಗಿದೆ‌.

ABOUT THE AUTHOR

...view details