ಇನ್ನೇನು ಬಿಡುಗಡೆಗೆ ಸಜ್ಜಾಗಿರುವ ಕನ್ನಡದ “X&Y” ಚಿತ್ರದಲ್ಲಿ ಆಟೋರಿಕ್ಷಾ “ಆಂಬು ಆಟೋ ” ಆಗಿ ಬಡ್ತಿ ಪಡೆದು ಎಲ್ಲರ ಗಮನ ಸೆಳೆದಿದೆ.
ಆಂಬ್ಯುಲೆನ್ಸ್ ನಲ್ಲಿರುವಂತೆ ಎಲ್ಲ ಸೌಲಭ್ಯಗಳನ್ನು ಈ ಆಟೋದಲ್ಲಿ ಅಳವಡಿಸಿ ಚಿತ್ರದಲ್ಲಿ ಅದನ್ನೊಂದು ಕಲಾವಿದನೆಂಬಂತೆ ಕಲಾತ್ಮಕವಾಗಿ ಬಳಸಲಾಗಿದೆ. ಈ ವಿಷಯ ತಿಳಿದ ಆಟೋ ಚಾಲಕರ ಸಂಘವೊಂದು, ಚಿತ್ರ ನಿರ್ದೇಶಕ ಸತ್ಯಪ್ರಕಾಶ್ ಅವರನ್ನು ಖುದ್ದು ಭೇಟಿ ಮಾಡಿ, ಸರ್ ಇಲ್ಲಿತನಕ 'ಆಟೋರಿಕ್ಷಾ' ನಮ್ಮ ಮಿತ್ರನಾಗಿತ್ತು. ಈಗದನ್ನು 'ಆಂಬು ಆಟೋ' ಆಗಿ ಪರಿವರ್ತಿಸಿ ಎಲ್ಲರ 'ಆಪ್ತಮಿತ್ರ'ನಾಗುವಂತೆ ಮಾಡಿದ್ದೀರಿ ಎಂದು ಆಂಬು ಆಟೋ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅದರಲ್ಲಿ ಕೆಲವರು ತಾವೂ ತಮ್ಮ ಆಟೋಗಳನ್ನು 'ಆಂಬು ಆಟೋ' ಆಗಿ ರೆಡಿ ಮಾಡಿ ಸಾರ್ವಜನಿಕ ಸಹಾಯಕ್ಕಾಗಿ ಬಳಸುವ ಮನಸ್ಸು ಮಾಡಿದ್ದೇವೆಂದು ಸಂತಸ ಹಂಚಿಕೊಂಡಿದ್ದಾರೆ.
ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಆ್ಯಂಬು ಆಟೋ ಪ್ರದರ್ಶನ; ಈ ನಿಟ್ಟಿನಲ್ಲಿ ಇದೇ ನವೆಂಬರ್ನಲ್ಲಿ ಬೆಂಗಳೂರಿನ ಜಯನಗರದ ಬೆಂಗಳೂರು ಸಾರಥಿ ಸೇನೆ ಆಟೋ ಚಾಲಕರ ಸಂಘ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಸಮಾಜಮುಖಿ ಸಮಾವೇಶದಲ್ಲಿ ಈ "ಆಂಬು ಆಟೋ" ಪ್ರದರ್ಶನಕ್ಕಿಟ್ಟು ಅದರ ಕುರಿತು ವಿಸ್ತೃತ ವಿವರಣೆ ಪಡೆದು ಹರುಷ ವ್ಯಕ್ತಪಡಿಸಿದ್ದಾರೆ. ಹಾಗೇ ಆಂಬು ಆಟೋದಲ್ಲಿ ECG ತಪಾಸಣೆ ಮಾಡುವ ಮೂಲಕ ಚಾಲಕರೆಲ್ಲರಿಗೂ ನೆರವಾಯಿತು.