ಸ್ಯಾಂಡಲ್ವುಡ್ನಲ್ಲಿ ಹೊಸ ಪ್ರತಿಭೆಗಳ ಕಂಟೆಂಟ್ ಆಧಾರಿತ ಚಿತ್ರಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಿವೆ. ಈ ಸಾಲಿನಲ್ಲಿ 'ಧೀರ ಸಾಮ್ರಾಟ್' ಚಿತ್ರವಿದೆ. 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ವರ್ಷದ ಎರಡನೇ ಚಿತ್ರವಾಗಿದೆ. ಈ ಖುಷಿಯನ್ನು ಸೋಮವಾರದಂದು ನಿರ್ಮಾಪಕ ಗುಡಿಬಂಡೆ ಸಂತೋಷ್ ಅವರು ಕಲಾವಿದರಿಗೆ, ತಂತ್ರಜ್ಞರಿಗೆ ಯಶಸ್ಸಿನ ನೆನಪಿನ ಕಾಣಿಕೆ ನೀಡೋ ಮೂಲಕ ಆಚರಿಸಿದರು.
ನಿರ್ದೇಶಕ ಪವನ್ ಕುಮಾರ್ ಮಾತನಾಡಿ, ಸಿನಿಮಾ ತೆರೆಕಂಡು 25 ದಿನಗಳ ಉತ್ತಮ ಪ್ರದರ್ಶನ ಸುಲುಭದ ಮಾತಲ್ಲ. ನಮ್ಮ ಈ ಚಿತ್ರ ಬಿಡುಗಡೆ ಆದ ಸಂದರ್ಭ ಎಲ್ಲ ಭಾಷೆಗಳೂ ಸೇರಿದಂತೆ 21 ಚಿತ್ರಗಳು ತೆರೆ ಕಂಡಿದ್ದವು. ಇದರ ಮಧ್ಯೆ ನಮ್ಮದು ಸತತ ಉತ್ತಮ ಪ್ರದರ್ಶನ ಕಂಡಿರುವುದು ಖುಷಿಯ ವಿಚಾರ.
ಮುಖ್ಯವಾಗಿ ನಿರ್ಮಾಪಕರಿಗೆ ಧನ್ಯವಾದ ಅರ್ಪಿಸಬೇಕು. ಏನೇ ಸಮಸ್ಯೆ ಬಂದರೂ ತಲೆಕೆಡಿಸಿಕೊಳ್ಳದೇ ಎಲ್ಲರನ್ನೂ ಹುರಿ ದುಂಬಿಸುತ್ತಿದ್ದರು. ನಾಯಕ ನಟಿ ಅದ್ವಿತಿ ಶೆಟ್ಟಿ ನಾವು ಕರೆದಾಗಲೆಲ್ಲಾ ಬಂದು ಮಾತು ಉಳಿಸಿಕೊಂಡಿದ್ದಾರೆ. ನಮ್ಮಂತಹ ಹೊಸ ಚಿತ್ರಕ್ಕೆ ಸ್ಟಾರ್ ನಟರು ಪ್ರೋತ್ಸಾಹ ನೀಡಿದರೆ ಇನ್ನಷ್ಟು ಪ್ರಚಾರ ಸಿಗುತ್ತದೆ. ಗೆಳೆಯ ಧ್ರುವ ಸರ್ಜಾ ಮುಹೂರ್ತಕ್ಕೆ ಆಗಮಿಸಿ, ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದಂತೆ ಶ್ರೀಮುರಳಿ ಪೋಸ್ಟರ್ ಅನಾವರಣಗೊಳಿಸಿದ್ದರು. ಅವರೆಲ್ಲರಿಗೂ ನಮ್ಮ ಕಡೆಯಿಂದ ತುಂಬು ಹೃದಯದ ಕೃತಜ್ಞತೆ ಸಲ್ಲಿಸಬೇಕು. ತಮಿಳು, ತೆಲುಗು ಡಬ್ಬಿಂಗ್ ರೈಟ್ಸ್ ಸೇಲ್ ಆಗಿದೆ. ಹಿಂದಿ, ಒಟಿಟಿ ಮಾತುಕತೆಯಲ್ಲಿದೆ. ಒಟ್ಟಿನಲ್ಲಿ ಒಂದು ಹಂತದಲ್ಲಿ ನಿರ್ಮಾಪಕರು ಸೇಫ್ ಆಗಿದ್ದಾರೆ ಎಂದು ತಿಳಿಸಿದರು.